Ashok Jana mana : ಪುತ್ತೂರಿನ ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕು ನುಗ್ಗಲು : 11ಕ್ಕೂ ಅಧಿಕ ಮಂದಿ ಅಸ್ವಸ್ಥ

ಪುತ್ತೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದ (puttur Ashok Jana Mana) ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಸಂಭವಿಸಿ 11ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಸಂಭವಿಸಿದೆ. ಸ್ಥಳೀಯ ಶಾಸಕ ಅಶೋಕ್​ ರೈ ಮಾಲೀಕತ್ವದ ಟ್ರಸ್ಟ್​ನಿಂದ ಆಯೋಜನೆಗೊಂಡಿದ್ದ ‘ ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಅಸ್ವಸ್ಥರಾದ 11 ಮಂದಿಯನ್ನು ಯೋಗಿತ (20 ವರ್ಷ), ಸಭಾ ಮಾಡಾವು (20ವರ್ಷ), ಆಮೀನಾ ಪಾಟ್ರಕೋಡಿ(56ವರ್ಷ), ನೇತ್ರಾವತಿ ಇರ್ದೆ(37ವರ್ಷ), ಲೀಲಾವತಿ ಕಡಬ(50ವರ್ಷ), ವಸಂತಿ ಬಲ್ನಾಡ್ (53ವರ್ಷ), ಕುಸುಮ( 62ವರ್ಷ), ರತ್ನವತಿ ಪೆರಿಗೇರಿ (67ವರ್ಷ), ಅಫೀಲಾ ಪಾಟ್ರಕೋಡಿ (20 ವರ್ಷ), ಸ್ನೇಹಪ್ರಭಾ (41 ವರ್ಷ ) ಹಾಗೂ ಜಸೀಲಾ(30 ವರ್ಷ) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆಂದು ಉಚಿತ ತಟ್ಟೆ ಹಾಗೂ ವಸ್ತ್ರ ಹಂಚಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ಆಗಮಿಸಿದ್ದರು ಎನ್ನಲಾಗಿದೆ.

ಕಾರ್ಯಕ್ರಮ ಆಯೋಜಕರಿಗೆ ಈ ಹಿಂದೆಯೇ ಸೂಚನೆ ನೀಡಿದ್ದ ಪೊಲೀಸ್​ ಇಲಾಖೆ ಯಾವುದೇ ರೀತಿಯ ಲೋಪದೋಷ ಉಂಟಾಗದಂತೆ ಕಾರ್ಯಕ್ರಮ ನಿರ್ವಹಿಸುವಂತೆ ಸೂಚನೆ ನೀಡಿತ್ತು.

Also Read : ಸ್ವಂತ ಸೋದರಳಿಯನ ಜೊತೆ ಅಕ್ರಮ ಸಂಬಂಧ : ಮದುವೆ ನಿರಾಕರಿಸಿದ್ದಕ್ಕೆ ಪೊಲೀಸ್​ ಠಾಣೆಯಲ್ಲೇ ಎರಡು ಮಕ್ಕಳ ತಾಯಿಯ ಹೈ ಡ್ರಾಮಾ

ಆದರೆ ಈ ಮಾತನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳದ ಆಯೋಜಕರು ತೀರಾ ಕಡಿಮೆ ಆಸನ ವ್ಯವಸ್ಥೆ ಕಲ್ಪಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲದ ಹಿನ್ನೆಲೆಯಲ್ಲಿ ಜನತೆ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

ಕೆಲ ತಿಂಗಳ ಹಿಂದೆಯಷ್ಟೇ ಇದೇ ಕಾಂಗ್ರೆಸ್​ ಸರ್ಕಾರ ಆಯೋಜಿಸಿದ್ದ ಆರ್​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿಯೂ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಪ್ರಾಣ ಹಾನಿ ಸಂಭವಿಸಿತ್ತು.

Also Read : ಪತ್ನಿ ಹತ್ಯೆಗೈದು ನಾಪತ್ತೆ ನಾಟಕವಾಡಿದ ಪತಿ ಕಳ್ಳಾಟ ಖಾಕಿ ಎದುರು ಬಯಲು : ಪಾಪಿ ಪತಿ ಬಂಧನ

ಈ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆ ಕಾರ್ಯಕ್ರಮ ಆಯೋಜಕರಿಗೆ ಖಡಕ್​ ಸೂಚನೆ ನೀಡಿದ್ದರೂ ಸಹ ಯಾವುದೇ ಪ್ರಯೋಜನ ಕಂಡುಬಂದಿಲ್ಲ. ಪುತ್ತೂರಿನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದ ಮಳೆ ಕೂಡ ಆಗುತ್ತಿದ್ದು ಕಾರ್ಯಕ್ರಮ ನಡೆದ ಕ್ರೀಡಾಂಗಣ ಕೆಸರುಮಯವಾಗಿತ್ತು ಎನ್ನಲಾಗಿದೆ.

puttur Ashok Jana Mana Programe stampede 11 injured

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories