ಸೂರ್ಯನಿಗೂ- ಚಂದ್ರನಿಗೂ, ಅಮವಾಸ್ಯೆಗೂ – ಹುಣ್ಣಿಮೆಗೂ ವ್ಯತ್ಯಾಸ ತಿಳಿದುಕೊಳ್ಳಿ : ಸಿದ್ದರಾಮಯ್ಯಗೆ ತೇಜಸ್ವಿ ಸೂರ್ಯ ತಿರುಗೇಟು

ಬೆಂಗಳೂರು: Tejaswi Surya: ಸೂರ್ಯನಿಗೂ ಚಂದ್ರನಿಗೂ ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ತಿಳ್ಕೊಂಡು ಮುಂದೆ ಈಥರ ಹೇಳಿಕೆ ಕೊಡಲಿ ಎನ್ನುವ ಮೂಲಕ ಸಂಸದ ತೇಜಸ್ವಿ ಸೂರ್ಯ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಸೂರ್ಯ ಎಂದಿಗೂ ಇರ್ತಾನೆ. ಈ ಬೇಸಿಕ್ಸ್ ಅರ್ಥ ಮಾಡಿಕೊಂಡು ಸಿಎಂ ಮಾತಾಡಲಿ. ನಾನು ಸಹ ಸಿದ್ದರಾಮಯ್ಯ ಅವರಿಗೆ ಟೀಕೆ ಮಾಡಬಹುದು.ನಾನು ಆ ರೀತಿ ಟೀಕೆ ಮಾಡಲ್ಲ, ಅದು ನಮ್ಮ ಸಂಸ್ಕಾರ ಅಲ್ಲ, ನಮ್ಮ ಪಕ್ಷದ ಸಂಸ್ಕಾರವೂ ಅಲ್ಲ. ಸಿದ್ದರಾಮಯ್ಯ ಆಡಳಿತಕ್ಕೆ ಗ್ರಹಣ ಹಿಡಿದಿದೆ ಎಂದು ತರಾಟಗೆ ತೆಗೆದುಕೊಂಡಿದ್ದಾರೆ.

ಗುಂಡಿ ಇಲ್ಲದ ರಸ್ತೆ ಇಲ್ಲವೇ ಇಲ್ಲ. ಆಡಳಿತ ಎಷ್ಟು ಚೆನ್ನಾಗಿದೆ ಅಂತ ರಸ್ತೆಗಳನ್ನು ನೋಡಿದರೆ ಗೊತ್ತಾಗುತ್ತೆ. ಇದು ಸಿದ್ದರಾಮಯ್ಯ ಆಡಳಿತದ ವೈಖರಿ. ಬೆಂಗಳೂರಿಲ್ಲಿ ಒಂದು ಕಿ.ಮೀ ರೋಡ್ ಸರಿಯಿಲ್ಲ, ಅರ್ಧ ಕಿಮೀ ಫುಟ್‌ಪಾತ್ ಸರಿಯಿಲ್ಲ. ನೀವು ಮೋದಿಯವರಿಗೆ ಪ್ರಶ್ನೆ ಕೇಳ್ತೀರಿ ಎಂದು ವ್ಯಂಗ್ಯವಾಡಿದ್ದಾರೆ.

Also Read: ಕರ್ನಾಟಕ ಹವಾಮಾನ ವರದಿ : ಅಕ್ಟೋಬರ್‌ 29ರವರೆಗೆ 7 ಜಿಲ್ಲೆಗಳಿಗೆ ಬಾರೀ ಮಳೆ ಎಚ್ಚರಿಕೆ

ಒಂದೇ ವಾರದಲ್ಲಿ ಬೆಂಗಳೂರಿನಲ್ಲಿ ಮೂರು ರೇಪ್, ಮರ್ಡರ್ ಆಗುತ್ತೆ, ಮೈಸೂರಲ್ಲೂ ಬಾಲಕಿ ರೇಪ್ ಆಗಿದೆ. ಇದರ ಬಗ್ಗೆ ನೀವ್ಯಾರೂ ಮಾತಾಡಲ್ಲ. ನಿಮ್ಮ ಗೃಹ ಸಚಿವರು ಬೆಟ್ಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ನಮಗೆ ಗೂಗಲ್ ಎಐ ಕಂಪನಿ ಕೈತಪ್ಪುತ್ತೆ. ನಿಮ್ಮ ಐಟಿ ಮಿನಿಸ್ಟರ್ ಆರೆಸೆಸ್ ಬ್ಯಾನ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ ಎಂದಿದ್ದಾರೆ.

ಧಾರವಾಡದಲ್ಲಿ ಸರ್ಕಾರಿ ನೌಕರಿ ಸಿಗ್ತಿಲ್ಲ ಅಂತ ಯುವಕರು ಬೀದಿಗೆ ಬಂದಿದ್ರು. ಶಿಕ್ಷಕರ ಸಮಸ್ಯೆ ಬಹಳಷ್ಟಿದೆ. ರಾಜ್ಯದ ಆದಾಯ ಕಾಂಗ್ರೆಸ್ ಫಂಡ್ ಗೆ ಬಳಕೆ ಮಾಡ್ತಿದ್ದೀರಿ. ನಮ್ಮ ಸರ್ಕಾರ ಅಂತ್ಯ ಆದಾಗ ಆದಾಯದ ಬಜೆಟ್ ಕೊಟ್ ಹೋಗಿದ್ವಿ, ಈಗ ನೀವು ಕೊರತೆ ಬಜೆಟ್ ಮಂಡಿಸ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.

ಅಭಿವೃದ್ಧಿಗೆ ಹಣ ಕೊಡ್ತಿಲ್ಲ ಅಂತ ನಿಮ್ಮ ಶಾಸಕರೇ ಮಾತಾಡ್ತಿದ್ದಾರೆ. ಜೈಲಿಗೆ ಹೋಗದ ನಿಮ್ಮ ಶಾಸಕರು ಅನುದಾನ ಕೊಟ್ಟಿಲ್ಲ ಅಂತ ಮಾತಾಡ್ತಿದ್ದಾರೆ. ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಹಣ ಹೋಗ್ತಿದೆ. ಕರ್ನಾಟಕದ ಜನ ಗ್ಯಾರಂಟಿಗಳಿಂದ ಸ್ವಾವಲಂಬಿಗಳಾಗದ ಯೋಜನೆ ಗ್ಯಾರಂಟಿಗಳನ್ನು ಕೊಟ್ಟಿದ್ದೀರಿ ಎಂದಿದ್ದಾರೆ.

ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ. ಹಿಡಿದಿರುವ ಗ್ರಹಣ ಮತ್ತೆ ಬಿಡಲಿದೆ. ಮತ್ತೆ ರಾಜ್ಯ ಬೆಳಗುತ್ತೆ. ಕರ್ನಾಟಕ ಸಾಲದಲ್ಲಿ ಮುಳುಗಿದೆ. ಸರ್ಕಾರಿ ನೌಕರರಿಗೆ ವೇತನ ಕೊಡಕ್ಕಾಗ್ತಿಲ್ಲ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೀತಿದೆ. ಬೆಂಗಳೂರಿನಿಂದ ಕಂಪೆನಿಗಳು ಓಡಿ ಹೋಗ್ತಿವೆ. ಇದು ನಿಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ಎಂದಿದ್ದಾರೆ.

ಅಮಾವಾಸ್ಯೆ, ಗ್ರಹಣ, ಸೂರ್ಯ ಚಂದ್ರ ಎಲ್ಲ ಜ್ಯೋತಿಷಿಗಳನ್ನು ಬಿಡಿ. ನೀವು ನಿಮ್ಮ ಸಚಿವರು ಅಭಿವೃದ್ಧಿ, ಆಡಳಿತ ಕಡೆ ಗಮನ ಕೊಡಿ. ಸರ್ಕಾರಿ ನೌಕರರಿಗೆ ಸಕಾಲಕ್ಕೆ ವೇತನ ಕೊಡಿ. ನಿಮ್ಮ ಗೃಹ ಸಚಿವರಿಗೆ ಬೆಟ್ಟಿಂಗ್ ಬಿಟ್ಟು ಕಾನೂನು ಸುವ್ಯವಸ್ಥೆಯ ಕಡೆ ಗಮನೆ ಕೊಡಲು ಹೇಳಿ. ರಸ್ತೆ ಗುಂಡಿ ಸರಿ ಮಾಡಿ ಎಂದಿದ್ದಾರೆ.

ಟನೆಲ್ ಯೋಜನೆ ಮಾಡಲು ನಾವು ಬಿಡಲ್ಲ. ಟನೆಲ್ ಯೋಜನೆಯ ಡಿಪಿಆರ್ ಸರಿಯಿಲ್ಲ ಅಂತ ನಗರಾಭಿವೃದ್ಧಿ ಇಲಾಖೆ ತಜ್ಞರ ಸಮಿತಿಯೇ ಹೇಳಿದೆ. ಕಾರಿರುವ ಶ್ರೀಮಂತರಿಗೆ ಮಾತ್ರ ಟನೆಲ್ ರಸ್ತೆ ಮಾಡ್ತಿದ್ದೀರಿ, ಇದು ಆರ್ಥಿಕ ಅಸ್ಪೃಶ್ಯತೆ. ಲಾಲ್ಬಾಗ್ ನಲ್ಲಿ ಮೂರು ಸಾವಿರ ಕೋಟಿ ವರ್ಷಗಳ ಹಳೆಯ ಶಿಲೆಯನ್ನು ಈ ಟನೆಲ್ ಯೋಜನೆಯಿಂದ ಒಡೆಯಲು ಹೋಗ್ತಿದ್ದಾರೆ ಎಂದರು.

ನಮ್ಮದು ವಿಷಯಾಧಾರಿತ ವಿರೋಧ, ವೈಯಕ್ತಿಕ ವಿರೋಧ ಅಲ್ಲ. ಹಟಕ್ಕೆ ಬಿದ್ದು ಟನೆಲ್ ಯೋಜನೆ ಯಾಕೆ ಮಾಡ್ತಿದ್ದೀರಿ ? ಎಂದು ಪ್ರಶ್ನಿಸಿದ ಅವರು, ಜನಕ್ಕೆ ಏನು ಬೇಕೋ ಅದನ್ನು ಮಾಡಿ, ನಿಮಗೇನು ಬೇಕೋ ಅದನ್ನು ಮಾಡಬೇಡಿ. ಲಾಲ್‌ಬಾಗ್‌ನ ಆರು ಎಕರೆ ಅಲ್ಲ ಆರು ಇಂಚು ಜಾಗವನ್ನೂ ಬಿಡೋದಿಲ್ಲ. ಇದರ ವಿರುದ್ಧ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Also Read: ವರದಕ್ಷಿಣೆ ಕಿರುಕುಳಕ್ಕೆ ಉಪನ್ಯಾಸಕಿ ಆತ್ಮಹತ್ಯೆ ಪ್ರಕರಣ : ಮಗುವಿಗಾಗಿ ಮೈದುನ ಜೊತೆ ಮಲಗಬೇಕೆಂದು ಅತ್ತೆ ಕಿರುಕುಳ

ಆನ್‌ಲೈನ್ ನಲ್ಲಿ ಸಹಿ ಸಂಗ್ರಹ ನಡೀತಿದೆ, ಜನರೇ ಸ್ವಯಂಪ್ರೇರಿತವಾಗಿ ಒಂದು ಲಕ್ಷ ಸಹಿ ಸಂಗ್ರಹ ಮಾಡ್ತಿದ್ದಾರೆ. ನಾನೂ ಕೂಡಾ ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

ನವೆಂಬರ್ 2 ರಂದೇ ಭೀಮ್ ಆರ್ಮಿ ಕೂಡ ಪಥ ಸಂಚಲನಕ್ಕೆ ಅನುಮತಿ ಕೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಯಾರಿಗೆಲ್ಲಾ ಪಥ ಸಂಚಲನ ಮಾಡಬೇಕು ಅನ್ನೋ ಬಯಕೆ ಇದೆ ಅವರೆಲ್ಲಾ ಮಾಡಲಿ, ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ ಎಂದಿದ್ದಾರೆ.

ಚಿತಾಪುರದಲ್ಲಿ ಪಥ ಸಂಚಲನ ಸಸ್ಪೆಂಡ್ ಮಾಡಿ, ಹುಕುಂ ರೀತಿ ತೆಗೆದುಕೊಂಡು ಹೋಗಲು ಇಚ್ಚಿಸಿದ್ರು. ಹೈಕೋರ್ಟ್, ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ದೇಶ ನಡೆಯುತ್ತಿದೆ ಅಂದಿದೆ. ನಿಮ್ಮ ಹುಕುಂ ಮೇಲೆ ಅಲ್ಲ ಅಂತ ಹೈಕೋರ್ಟ್ ಹೇಳಿದೆ. ಇದು ಅವರಿಗೆ ಬುದ್ದಿ ಬರುವಂತೆ ಮಾಡಿದೆ ಎಂದರು.

RSS ನ ಶಿಸ್ತು, ಬದ್ಧತೆ ಯಾರೇ ಅದನ್ನ ಮಾದರಿಯಾಗಿ ತೆಗೆದುಕೊಂಡ್ರೂ ಸ್ವಾಗತ.ಬಿಜೆಪಿ ಸಂಸದರು ಅನುದಾನ ಕೇಳಲ್ಲ ಅನ್ನೋ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಇನ್ನೊಮ್ಮೆ ಸುದ್ದಿಗೋಷ್ಟಿ ಮಾಡ್ತೇನೆ. ನಾವೇನು ಮಾಡಿದೀವಿ, ಕೇಂದ್ರ ಎಷ್ಟು ಅನುದಾನ ಕೊಟ್ಟಿದೆ ಅಂತ ಹೇಳ್ತೇನೆ. ತುಂಬಾ ವಿಚಾರ ಇದೆ ಹೇಳ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ನಾನು ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ. ಅವರು ನನ್ನ ತಂದೆಯ ವಯಸ್ಸಿನವರು. ಸಿದ್ದರಾಮಯ್ಯ ಅವರ ವೈಯಕ್ತಿಕ ಟೀಕೆ ಮಾಡುವಷ್ಟು ನಮ್ಮ‌ ಪಕ್ಷದಲ್ಲಿ ಕಲಿಸಿಲ್ಲ. ಅದು ನಮ್ಮ ಸಂಸ್ಕಾರ ಅಲ್ಲ. ಮೋದಿ ಆಡಳಿತ ಟೀಕೆ ಮಾಡ್ತೀರಿ, ನಿಮ್ಮ ಆಡಳಿತದ ಬಗ್ಗೆ ಹೇಳಬೇಕಲ್ವಾ.? ಬೆಂಗಳೂರು ರಸ್ತೆ ಗುಂಡಿಗಳೇ ಅದಕ್ಕೆ ತಾಜಾ ಉದಾಹರಣೆ ಎಂದು ಪ್ರಶ್ನೆ ಮಾಡಿದ್ದಾರೆ.

ನಾನು ಹಬ್ಬಕ್ಕೆ ಚಿಕ್ಕಮಗಳೂರು ಹೋಗಿದ್ದೆ. ರಾಷ್ಟ್ರೀಯ ಹೆದ್ದರಿ ಬಿಟ್ರೆ, ರಾಜ್ಯದ ರಸ್ತೆಗೆ ಬಂದ್ರೆ ರಸ್ತೆ ಗುಂಡಿಗಳೇ ಇದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಎಷ್ಟು ಸಾಲ ಇದೆ, ಎಷ್ಟು ಬಡ್ಡಿ ಕಟ್ತಿದ್ದಾರೆ, ಜಿಎಸ್‌ಟಿ ಪೂರ್ವ ಆದಾಯ ಎಷ್ಟಿತ್ತು, ಯೋಜನೆಗಳಿಗೆ ಎಷ್ಟು ಕೊಟ್ಟಿದ್ದೀರಿ. ಎಲ್ಲದರ ಬಗ್ಗೆ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ.

ರಾಜಕೀಯ ಆರೋಪಗಳೇ ಬೇಡ, ಸರ್ಕಾರವೇ ಅಧಿಕೃತ ಅಂಕಿ ಅಂಶ ಕೊಡಲಿ. ಸರ್ಕಾರ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ. ನಂತರ ಸಾರ್ವಜನಿಕ ಚರ್ಚೆ ಮಾಡಲಿ. ಎಲ್ಲಿ ಕರೆದರೂ ನಾವು ಬಿಜೆಪಿಯವ್ರು ಚರ್ಚೆಗೆ ಬರ್ತೇವೆ ಎಂದಿದ್ದಾರೆ.

ಹರಿಪ್ರಸಾದ್‌ ಹೇಳಿಕೆಯನ್ನು ತೇಜಸ್ವಿ ಸೂರ್ಯ ಖಂಡಿಸಿದ್ದಾರೆ. 1947 ರಲ್ಲಿ ದೇಶ ವಿಭಜನೆ ಆದ ನಂತರ ಭಾರತದ ಪ್ರತಿಯೊಂದು ಇಂಚು ಜಮೀನು ಮೇಲೂ ದೇಶದ ಎಲ್ಲ ಸಮುದಾಯಗಳಿಗೂ ಹಕ್ಕಿದೆ ಎಂದಿದ್ದಾರೆ.

ಹಿಂದೂಗಳು ಗಣಪತಿ ಮೆರವಣಿಗೆಗೆ, ದೀಪಾವಳಿ ಆಚರಣೆಗೆ ಮಸೀದಿ ಇರುವ ರಸ್ತೆಯಲ್ಲಿ ಸಂಚರಿಸಬಾರದು ಅನ್ನೋದಕ್ಕೆ ಯಾವ ಕಾನೂನು ಇದೆ ಎಂದು ಪ್ರಶ್ನಿಸಿದ್ದಾರೆ.

ವಿಭಜನೆ ಬಳಿಕವೂ ಟೂ ನೇಷನ್ ಮನಸ್ಥಿತಿ ನಮ್ಮ ದೇಶದಲ್ಲಿ ಈಗಲೂ ಇದೆ. ಕೆಲವು ಏರಿಯಾಗಳಲ್ಲಿ ಬೈಕ್‌ ಗಳಲ್ಲಿ ತ್ರಿಬಲ್ ರೈಡ್ ಮಾಡ್ತಾರೆ, ಅಲ್ಲಿಗೆ ಪೊಲೀಸರು ಹೋಗದೇ ಇಲ್ಲ, ಅವರನ್ನ ಕೇಳೋದೇ ಇಲ್ಲ ಎಂದಿದ್ದಾರೆ.

ಯಾವುದು ಮುಸ್ಲಿಂ ಏರಿಯಾ, ಯಾವುದು ಹಿಂದೂ ಏರಿಯಾ ಅಂತ ಇದೆಯಾ ಸಂವಿಧಾ‌ನದಲ್ಲಿ ಎಂದ ಅವರು, ಈ ಟೂ ನೇಷನ್, ಟೂ ಏರಿಯಾ ಮನಸ್ಥಿತಿ ಹೋಗದ ಹೊರತು ಪರಿಸ್ಥಿತಿ ಸರಿ ಹೋಗಲ್ಲ ಎಂದಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories