ಧರ್ಮಸ್ಥಳ ಪ್ರಕರಣ ಕ್ಲೈಮ್ಯಾಕ್ಸ್ : ವರದಿ ಸಲ್ಲಿಕೆಗೆ ಎಸ್ಐಟಿಗೆ ಸರಕಾರದ ಸೂಚನೆ
ಬೆಳ್ತಂಗಡಿ : Dharmasthala case: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಕೆ ಮಾಡುವಂತೆ ವಿಶೇಷ ತನಿಖಾ ತಂಡಕ್ಕೆ ರಾಜ್ಯ ಸರಕಾರ ಸೂಚನೆ ನೀಡಿದೆ.
ಎಸ್ಐಟಿ ಅಧಿಕಾರಿಗಳು ಈಗಾಗಲೇ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಅಕ್ಟೋಬರ್ ಅಂತ್ಯಕ್ಕೆ ಎಸ್ಐಟಿ ಪ್ರಕರಣದ ಕುರಿತು ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಕೆ ಮಾಡಬೇಕಾಗಿದೆ.
ತಿಂಗಳಾಂತ್ಯಕ್ಕೆ ಎಸ್ಐಟಿ ವರದಿ ಬಹಿರಂಗ..?
ರಾಜ್ಯ ಮಾತ್ರವಲ್ಲ, ದೇಶದಾದ್ಯಂತ ಬಾರೀ ಸದ್ದು ಮಾಡಿದ್ದ ಪ್ರಕರಣ ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಎಸ್ಐಟಿ ಮುಂದಿನ ವಾರ ನ್ಯಾಯಾಲಯಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲು ಸಿದ್ದತೆ ಮಾಡಿಕೊಂಡಿದೆ.
ಹೀಗಾಗಿ ತಿಂಗಳ ಅಂತ್ಯಕ್ಕೆ ಪ್ರಕರಣ ರಹಸ್ಯ ಬಯಲಾಗುವ ಸಾಧ್ಯತೆಯಿದೆ. ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ ಬಳಿಕ ಸರಕಾರ ಅದನ್ನು ಜನರ ಮುಂದೆ ಇಡುವ ಸಾಧ್ಯತೆಯಿದೆ.
Also Read: ಮಂಗಳೂರಲ್ಲಿ ಮಹಿಳೆ ಡಿಜಿಟಲ್ ಅರೆಸ್ಟ್ : 42 ಲಕ್ಷ ರೂಪಾಯಿ ವಂಚನೆ
ಎಸ್ಐಟಿ ತನಿಖೆ ಮುಂದುವರಿಕೆಗೆ ಮನವಿ
ಒಂದೆಡೆ ರಾಜ್ಯ ಸರಕಾರ ಎಸ್ಐಟಿ ಅಧಿಕಾರಿಗಳಿ ವರದಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. ಮತ್ತೊಂದೆಡೆಯಲ್ಲಿ ಹೋರಾಟಗಾರರು ಪ್ರಕರಣದ ತನಿಖೆಯನ್ನು ಮುಂದುವರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಜೈಲಿನಲ್ಲಿ ಚಿನ್ನಯ್ಯ ವಿಚಾರಣೆ
ಬೆಳ್ತಂಗಡಿಯ ನ್ಯಾಯಾಲಯದಲ್ಲಿ ತಾನು ಹತ್ತಕ್ಕೂ ಅಧಿಕ ಶವಗಳನ್ನು ಹೂತಿರುವ ಕುರಿತು ಚಿನ್ನಯ್ಯ ಮತ್ತೆ ಹೇಳಿಕೆ ನೀಡಿದ ಬೆನ್ನಲ್ಲೇ ನ್ಯಾಯಾಲಯ ಚಿನ್ನಯ್ಯನನ್ನು ವಿಚಾರಣೆಗೆ ಒಳಪಡಿಸಲು ಎಸ್ಐಟಿ ಅಧಿಕಾರಿಗಳಿಗೆ ಅನುಮತಿಯನ್ನು ನೀಡಿದ್ದಾರೆ.
ಹೀಗಾಗಿ ಎಸ್ಐಟಿ ಹಿರಿಯ ಅಧಿಕಾರಿಗಳು ಚಿನ್ನಯ್ಯನನ್ನು ಇರಿಸಲಾಗಿರುವ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ತೆರಳಿದ್ದಾರೆ. ಜೈಲಿನಲ್ಲಿಯೇ ಚಿನ್ನಯ್ಯನನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ.
ಎರಡು ದಿನಗಳ ಕಾಲ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಕುರಿತು ಬೆಳ್ತಂಗಡಿ ನ್ಯಾಯಾಲಯದಿಂದ ಎಸ್ಐಟಿ ಅಧಿಕಾರಿಗಳು ಅನುಮತಿಯನ್ನು ಪಡೆದುಕೊಂಡಿದ್ದಾರೆ.
Also Read: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಖದೀಮರ ಮೇಲೆ ಖಾಕಿ ಫೈರಿಂಗ್ : ಆರೋಪಿ ಬಂಧನ
ಬಯಲಾಗುತ್ತಾ ಧರ್ಮಸ್ಥಳ ಸಾವಿನ ರಹಸ್ಯ ?
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸಾಮೂಹಿಕ ಅಂತ್ಯಕ್ರೀಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಇದುವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಗೆ ಯಾವುದೇ ಅಧಿಕೃತ ಸಾಕ್ಷ್ಯಗಳು ದೊರೆತಿಲ್ಲ. ಇದುವರೆಗೆ ಎಸ್ಐಟಿ ಅಧಿಕಾರಿಗಳು ಅಗೆಸಿರುವ ಗುಂಡಿಗಳಲ್ಲಿ ಎಷ್ಟು ಶವಗಳನ್ನು ಹೊರತೆಗೆಯಲಾಗಿದೆ ಅನ್ನೋ ಖಚಿತ ಮಾಹಿತಿ ಸಿಕ್ಕಿಲ್ಲ.
ಇದೀಗ ಎಸ್ಐಟಿ ರಾಜ್ಯ ಸರಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಧರ್ಮಸ್ಥಳ(Dharmasthala) ಸಾವಿನ ರಹಸ್ಯವನ್ನು ತೆರೆದಿಡಲಿದೆ. ಕಳೆದ ಮೂರು ತಿಂಗಳಿನಿಂದಲೂ ಪ್ರಕರಣದ ತನಿಖೆ ನಡೆಯುತ್ತಿದೆ. ಹಲವು ಸ್ಥಳಗಳಲ್ಲಿ ಗುಂಡಿ ಅಗೆಯಲಾಗಿದೆ. ಹತ್ತಾರು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ನಡುವಲ್ಲೇ ಚಿನ್ನಯ್ಯ ಜೈಲು ಪಾಲಾಗಿದ್ದು, ಜೈಲಿನಲ್ಲಿಯೇ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಚಿನ್ನಯ್ಯ ವಿಚಾರಣೆಯ ನಂತರ ವಿಶೇಷ ತನಿಖಾ ತಂಡದ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.



