ಮಂಗಳೂರಲ್ಲಿ ಮಹಿಳೆ ಡಿಜಿಟಲ್ ಅರೆಸ್ಟ್ : 42 ಲಕ್ಷ ರೂಪಾಯಿ ವಂಚನೆ
ಮಂಗಳೂರು: Digital Arrest: ಕರಾವಳಿ ಭಾಗದಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮಂಗಳೂರಲ್ಲಿ ಮಹಿಳೆಯೋರ್ವರನ್ನು ವಂಚಕರು ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ವಂಚಕರ ಜಾಲಕ್ಕೆ ಸಿಲುಕಿದ ಮಹಿಳೆ ಬರೋಬ್ಬರಿ 42 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಸದ್ಯ ಪೊಲೀಸರ ಮೊರೆ ಹೋಗಿದ್ದಾರೆ.
ಅಕ್ಟೋಬರ್ 7 ರಂದು ಮುಂಬೈನ ಕೊಲಾಬಾ ಠಾಣೆಯ ಪೊಲೀಸ್ ಎಂದು ಹೇಳಿಕೊಂಡಿದ್ದ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಗೆ ಕರೆ ಮಾಡಿದ್ದಾನೆ. ಹೊಸ ಸಿಮ್ ಕಾರ್ಡ್ ವಿತರಣೆ ಮಾಡಲಾಗಿದ್ದು, ಮುಂಬೈಗೆ ಬರುವಂತೆ ಸೂಚಿಸಿದ್ದಾರೆ.
ತಾನು ಬರುವುದಕ್ಕೆ ಸಾಧ್ಯವಿಲ್ಲ ಎಂದು ಮಹಿಳೆ ತಿಳಿಸಿದಾಗ ಆ ವ್ಯಕ್ತಿ ಒಂದು ಪತ್ರವನ್ನು ಬರೆದು ವಾಟ್ಸಾಪ್(Whatsapp) ಮಾಡುವಂತೆ ತಿಳಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಮಹಿಳೆಗೆ ಮತ್ತೊಂದು ಕರೆ ಬಂದಿತ್ತು.
Also Read: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಖದೀಮರ ಮೇಲೆ ಖಾಕಿ ಫೈರಿಂಗ್ : ಆರೋಪಿ ಬಂಧನ
ನಾನು ಸಿಬಿಐ ಅಧಿಕಾರಿ, ಆರ್‌ಬಿಐ ಅಧಿಕಾರಿಗಳು ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೆಸರನ್ನು ಉಲ್ಲೇಖಿಸಿ, ಮಹಿಳೆಯೊಂದಿಗೆ ವಾಟ್ಸಾಪ್ ವಿಡಿಯೋ ಕರೆ ಮಾಡಿದ್ದಾರೆ. ಆಕೆಯ ವೈಯಕ್ತಿಕ ವಿವರ, ಬ್ಯಾಂಕ್ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ನಂತರ ಮಹಿಳೆಯನ್ನು ಡಿಜಿಟಲ್ ಅರೆಸ್ಟ್ ಮಾಡಿಸಿ ವಿವಿಧ ಬ್ಯಾಂಕ್ ಖಾತೆಗೆ ಅಕ್ಟೋಬರ್ 8 ರಿಂದ 17ರ ವರೆಗೆ ಬರೋಬ್ಬರಿ 42 ಲಕ್ಷ ರೂಪಾಯಿ ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ವಂಚಕರು ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಆಕೆ ಅನುಮಾನಗೊಂಡು ತನ್ನ ಮಕ್ಕಳು ಹಾಗೂ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಆಕೆಯನ್ನು ಡಿಜಿಟಲ್ ಅರೆಸ್ಟ್ ಮೂಲಕ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
Also Read: ಅಶೋಕ ಜನಮನ ಆಯೋಜಕರ ಎಡವಟ್ಟು : ಕೊನೆಗೂ ಕ್ಷಮೆಯಾಚಿಸಿದ ಶಾಸಕ ಅಶೋಕ್ ರೈ
ಮಹಿಳೆ ಸದ್ಯ ಮಂಗಳೂರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕರಾವಳಿಯಲ್ಲಿ ಆನ್‌ಲೈನ್ ವಂಚನೆ, ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ಜನರು ಆನ್‌ಲೈನ್‌ಗಳಲ್ಲಿ ನೋಡು ಜಾಹೀರಾತುಗಳನ್ನು ನಂಬಿ ವಂಚನೆಗೆ ಒಳಗಾಗುವ ಮುನ್ನ ಎಚ್ಚರವಹಿಸಿ. ಆನ್‌ಲೈನ್ ನಂಬಿ ವ್ಯವಹಾರ ಮಾಡುವ ಮುನ್ನ ಹಲವು ಬಾರಿ ಯೋಚಿಸಿ.



