2028ರಲ್ಲೂ ನಾನೇ ಸಿಎಂ: ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ ಎಂದ ಸಿದ್ದರಾಮಯ್ಯ

CM Siddaramaiah : ಬೆಂಗಳೂರು : ಅತ್ತ ಸಿಎಂ ಉತ್ತರಾಧಿಕಾರಿ ಯಾರು ? ಎಂಬ ಪ್ರಶ್ನೆ ಮತ್ತು ಅದರ ಉತ್ತರದ ಮೇಲೆ ನೊರೆಂಟು ಚರ್ಚೆಗಳು ನಡೆಯುತ್ತಿವೆ.‌ ಇದರ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ನನಗೆ ಉತ್ತರಾಧಿಕಾರಿಯೇ ಬೇಡ.‌ ನಾನಿನ್ನು ನಿವೃತ್ತಿ ಬಗ್ಗೆ ಯೋಚಿಸಿಲ್ಲ ಎಂಬ ಉತ್ತರ ನೀಡುವ ಅಚ್ಚರಿ ಮೂಡಿಸಿದ್ದಾರೆ.

ಮಾತ್ರವಲ್ಲ ಸಿಎಂ ಸಿದ್ಧ ರಾಮಯ್ಯ ಸೀಟಿನ ಮೇಲೆ ಕರ್ಚಿಫ್ ಹಾಕುವ ಪ್ರಯತ್ನದಲ್ಲಿದ್ದೋರಿಗೆ ಶಾಕ್ ನೀಡಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಪುತ್ರ ಯತೀಂದ್ರ ಸಿದ್ಧ ರಾಮಯ್ಯ ತಮ್ಮ ತಂದೆ ಸಿದ್ಧರಾಮಯ್ಯನವರು ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ.

ಹಾಗಾಗಿ ಅವರ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬರ್ಥದಲ್ಲಿ ಮಾತನಾಡಿದ್ದರು. ಈ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷದವರಿಂದಲೂ ಪರ-ವಿರೋಧದ ಚರ್ಚೆ ನಡೆದಿತ್ತು.

ಈ ಎಲ್ಲ ಚರ್ಚೆಗಳು ತಾರಕಕ್ಕೇರಿದ ಹೊತ್ತಲ್ಲೇ ಸಿಎಂ ಸಿದ್ಧರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಸಿದ್ಧರಾಮಯ್ಯನವರ ಯುಗಾಂತ್ಯವಾಯಿತು. ಸಿದ್ಧರಾಮಯ್ಯನವರು ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂಬ ಲೆಕ್ಕಾಚಾರದಲ್ಲಿದ್ದವರಿಗೆ ಸಿದ್ಧು ಗುದ್ದು ನೀಡಿದ್ದಾರೆ.

ನಾನು 2028ರ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದು ಹೇಳಿದ್ದೆ. ಇದೇ ನನ್ನ ಕೊನೆಯ ಚುನಾವಣೆ ಎಂದು 2023 ರಲ್ಲಿ ಘೋಷಿಸಿದ್ದೆ.‌ ಆದರೆ ಈಗ ಸ್ನೇಹಿತರು, ಬೆಂಬಲಿಗರು ಹಾಗೂ ಆಪ್ತರು 2028 ರ ಚುನಾವಣೆಯಲ್ಲೂ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಹೀಗಾಗಿ ಸ್ಪರ್ಧಿಸುವ ಚಿಂತನೆಯಲ್ಲಿದ್ದೇನೆ ಎನ್ನುವ ಮೂಲಕ ಸ್ವಪಕ್ಷಿಯರ ಎದೆಯಲ್ಲೇ ಸಿದ್ದು ನಡುಕ ಮೂಡಿಸಿದ್ದಾರೆ. ಖಾಸಗಿ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ಧರಾಮಯ್ಯನವರು ತಮ್ಮ ರಾಜಕೀಯ ನಿಲುವು ಹಾಗೂ ಲೆಕ್ಕಾಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಈಗ ಸಂಚಲನ ಮೂಡಿಸಿದೆ.

ಇದನ್ನೂ ಓದಿ : ಸತೀಶ್‌ ಜಾರಕಿಹೊಳಿಗೆ ಉತ್ತರಾಧಿಕಾರಿ ಪಟ್ಟ : ಸಿಎಂ ಆಪ್ತರನ್ನು ಕೆರಳಿಸಿದ ಯತೀಂದ್ರ ಹೇಳಿಕೆ

ರಾಷ್ಟ್ರ ರಾಜಕಾರಣದ ಬಗ್ಗೆ ನನಗೆ ಯಾವುದೇ ಒಲವಿಲ್ಲ.‌ ನಾನು ರಾಜ್ಯ ರಾಜಕಾರಣದಲ್ಲೇ ಇರಲು ಬಯಸುತ್ತೇನೆ. ಪವರ್ ಶೇರಿಂಗ್ ವಿಚಾರದಲ್ಲೂ ನನ್ನ ನಿಲುವು ಸ್ಪಷ್ಟ ಎಂದಿದ್ದಾರೆ.

ಪವರ್ ಶೇರಿಂಗ್ ವಿಚಾರದಲ್ಲಿ ನಾನು ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗುತ್ತೇನೆ. ಜನಾರ್ಶಿವಾದ ಇರುವವರೆಗೂ ನಾನು ಅಧಿಕಾರದಲ್ಲಿರುತ್ತೇನೆ ಎಂದು ಸಿದ್ಧ ರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲದೆ ಡಿಕೆಶಿಗೆ ಅಧಿಕಾರ ಬಿಟ್ಟುಕೊಡುವ ಯಾವುದೇ ಒಪ್ಪಂದವಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಇನ್ನು ದೇವರಾಜು ಅರಸು ಸಿಎಂ ಸ್ಥಾನದ ದಾಖಲೆ ಮುರಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ಧರಾಮಯ್ಯನವರು ಯಾವುದೇ ದಾಖಲೆ ಮುರಿಯೋದರ ಬಗ್ಗೆ ನನಗೆ ಆಸಕ್ತಿ ಇಲ್ಲ. ನಾನು ಜನಪರ ಆಡಳಿತ ನೀಡೋದ್ರಲ್ಲಿ ನಂಬಿಕೆ ಇಟ್ಟವನು ಎಂದಿದ್ದಾರೆ.

ಆದರೆ 2028 ರ ಎಲೆಕ್ಷನ್ ನಲ್ಲಿ ಸ್ಪರ್ಧಿಸುವ ಗುಟ್ಟು ಬಿಟ್ಟುಕೊಟ್ಟಿರುವ ಸಿಎಂ ಸಿದ್ಧರಾಮಯ್ಯನವರ ಹೇಳಿಕೆ ರಾಜಕೀಯ ಲೋಕದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ : ಮಹಿಳೆಯರಿಗೆ 3 ಕೋಟಿ ರೂಪಾಯಿ ಪಂಗನಾಮ : ವಂಚಕಿಗೆ ನಡುರಸ್ತೆಯಲ್ಲೇ ಗೂಸಾ

ಅದರಲ್ಲೂ ಈ ಭಾರಿಯೇ ಸಿಎಂ ಸ್ಥಾನಕ್ಕೆರುವ ಕನಸಿನಲ್ಲಿರೋ ಡಿಕೆಶಿಗೆ ಸಿಎಂ ಹೇಳಿಕೆ ಆಘಾತಕಾರಿ ಎಂದು ವಿಶ್ಲೇಷಿಸಲಾಗುತ್ತಿದೆ. ಡಿಕೆಶಿ ಈ ಬಾರಿ ಸಿಎಂ ಸ್ಥಾನಕ್ಕೇರಿಬೇಕು. ಮುಂದಿನ‌‌ ಚುನಾವಣೆಯನ್ನು ತಮ್ಮ ನೇತೃತ್ವದಲ್ಲೇ ನಡೆಸಿ ಕಾಂಗ್ರೇಸ್ ನ್ನು ಅಧಿಕಾರಕ್ಕೆ ತಂದು ಸಂಪೂರ್ಣ ಐದು ವರ್ಷದ ಅವಧಿಗೆ ಸಿಎಂ ಸ್ಥಾನಕ್ಕೇರಬೇಕು ಎಂಬ ಲೆಕ್ಕಾಚಾರದಲ್ಲಿದ್ದರು.

ಆದರೆ ಸಿದ್ಧರಾಮಯ್ಯನವರ ಹೇಳಿಕೆ ಮಾತ್ರ ಕಾಂಗ್ರೆಸ್ ನ ಡಿಕೆಶಿ, ಪರಮೇಶ್ವರ ಸೇರಿದಂತೆ ಹಲವು ನಾಯಕರ ರಾಜಕೀಯ ಲೆಕ್ಕಾಚಾರದ ಮೇಲೆ ನೀರು ಎರೆಚಿದಂತಾಗಿದ್ದು ಮಾತ್ರ ನಿಜ.

CM Siddaramaiah I Will Be Chief Minister in 2028 No Question of Political Retirement

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories