ರಕ್ಷಣೆ ನೀಡಬೇಕಾದ ಆರಕ್ಷಕಿಯಿಂದಲೇ ಕಳ್ಳತನ : ಪ್ರಾಣ ಸ್ನೇಹಿತೆ ನಿವಾಸದಿಂದಲೇ ಹಣ ಎಗರಿಸಿದ ಚಾಲಾಕಿ ಪೊಲೀಸ್​

Madhyapradesh: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿದೆ. ಈ ಮಾತನ್ನು ಈಗ ನೆನಪಿಸಲು ಕಾರಣ ಕೂಡ ಇದೆ. ಮಹಿಳಾ ಉಪ ಪೊಲೀಸ್​ ವರಿಷ್ಠಾಧಿಕಾರಿಯೊಬ್ಬರು ತಮ್ಮ ಸ್ನೇಹಿತ ಮನೆಯಿಂದ 2 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್​ ಫೋನ್​ ಎಗರಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯ ಕಳ್ಳಾಟಗಳು ಬಯಲಾಗಿದ್ದು ಆರಕ್ಷಕರೇ ಈ ರೀತಿ ಕೃತ್ಯದಲ್ಲಿ ಭಾಗಿಯಾದರೆ ಯಾರನ್ನ ನಂಬೋದು ಸ್ವಾಮಿ ಅಂತಾ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಈ ಘಟನೆ ಸಂಭವಿಸಿದೆ.

ಭೋಪಾಲ್​ನ ಜೆಹಾಂಗೀರಾಬಾದ್​ ಪ್ರದೇಶದಲ್ಲಿ ವಾಸವಿರುವ ಪ್ರಮೀಳಾ ಎಂಬವರು ಈ ಪ್ರಕರಣದ ಆರೋಪಿಯಾಗಿರುವ ಡಿಎಸ್​ಪಿ ಕಲ್ಪನಾ ರಘುವಂಶಿಯೊಂದಿಗೆ ಕಳೆದ ಅನೇಕ ವರ್ಷಗಳಿಂದ ಸ್ನೇಹಿತರಿದ್ದರು ಎನ್ನಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಪ್ರಮೀಳಾ ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಬ್ಯಾಂಕ್​ನಿಂದ 2 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ. ಸ್ನಾನ ಮಾಡಿ ವಾಪಾಸ್​ ಬರುವಷ್ಟರಲ್ಲಿ ಮೊಬೈಲ್​ ಫೋನ್​ ಹಾಗೂ ನಗದು ಎರಡೂ ನಾಪತ್ತೆಯಾಗಿತ್ತು ಎಂದು ಪ್ರಮೀಳಾ ಮಾಹಿತಿ ನೀಡಿದ್ದಾರೆ.

ಈ ಕೃತ್ಯದ ಬಗ್ಗೆ ಅನುಮಾನಗೊಂಡ ಪ್ರಮೀಳಾ ತಮ್ಮ ಮನೆಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿ ನೋಡಿದಾಗ ಸ್ನೇಹಿತೆ ಕಲ್ಪನಾ ರಘುವಂಶಿ ತಮ್ಮ ಮನೆಯಿಂದ ದುಡ್ಡಿನ ಬ್ಯಾಗ್​ ಹೊತ್ತೊಯ್ಯುತ್ತಿರುವುದು ಕಂಡು ಬಂದಿದೆ.

Also Read: ವಿದೇಶದಲ್ಲಿ ಪುರುಷನ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾದ ಭಾರತೀಯ ವ್ಯಕ್ತಿ

ಈ ಘಟನೆಯಿಂದ ಆಘಾತಕ್ಕೊಳಗಾದ ಪ್ರಮೀಳಾ ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಈ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ. ಸಿಸಿ ಟಿವಿ ಕ್ಯಾಮರಾದಲ್ಲಿ ಪೊಲೀಸ್​ ಅಧಿಕಾರಿ ಕಲ್ಪನಾ ರಘುವಂಶಿ ತನ್ನ ಕೈಯಲ್ಲಿ ನೋಟಿನ ಬಂಡಲ್​ಗಳನ್ನು ಹಿಡಿದುಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸಾಕ್ಷ್ಯಾಧಾರಗಳನ್ನು ಆಲಿಸಿದ ಪೊಲೀಸರು ಡಿಎಸ್​ಪಿ ವಿರುದ್ಧವೇ ಎಫ್​ಐಆರ್​ ದಾಖಲಿಸಿದ್ದಾರೆ. ಈ ಪ್ರಕರಣದ ಬಳಿಕ ಕಲ್ಪನಾ ರಘುವಂಶಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಕಲ್ಪನಾ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಪ್ರಮೀಳಾ ಅವರ ಕಾಣೆಯಾಗಿರುವ ಮೊಬೈಲ್​ ಫೋನ್​ ವಶಪಡಿಸಿಕೊಂಡಿದ್ದಾರೆ . ಆದರೆ 2 ಲಕ್ಷ ರೂಪಾಯಿ ನಗದು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Also Read: ಪೊಲೀಸ್​ ಅಧಿಕಾರಿಯಿಂದ ಸರ್ಕಾರಿ ವೈದ್ಯೆ ಮೇಲೆ ನಿರಂತರ ಅತ್ಯಾ*ಚಾರ : ಅಂಗೈಯಲ್ಲಿ ಡೆತ್​ ನೋಟ್​ ಬರೆದು ಸಂತ್ರಸ್ತೆ ಸಾವು

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories