ಕೋಳಿ ಸಾರಿಂದ ಇಷ್ಟೆಲ್ಲಾ ಬದಲಾಯ್ತಾ ? ಮುಂದೆಯೂ ನಾನೇ ಸಿಎಂ ಎಂದ ಸಿದ್ದರಾಮಯ್ಯಗೆ ಸುನೀಲ್​ ಕುಮಾರ್​ ವ್ಯಂಗ್ಯ

Karnataka Legislative Assembly : ಬೆಂಗಳೂರು : ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. ಇದೀಗ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಕಲಾಪದಲ್ಲಿಯೂ ಇದೇ ವಿಚಾರ ಮತ್ತೆ ಮತ್ತೆ ಮುನ್ನೆಲೆಗೆ ಬಂದಿದೆ.

ಮೊನ್ನೆ ಮೊನ್ನೆಯಷ್ಟೇ ನಾನೇ ಈ ರಾಜ್ಯದ ಸಿಎಂ, 2028ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ. ಆಗಲೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಗುಡುಗಿದ್ದರು. ಇದೀ್ಗ ಮತ್ತೊಮ್ಮೆ ಸಿದ್ದರಾಮಯ್ಯ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ವಿಧಾನಸಭೆಯ ಕಲಾಪದಲ್ಲಿಯೇ ಸಿಎಂ ಚರ್ಚೆ ಜೋರಾಗುತ್ತಿದ್ದಂತೆಯೇ ಸಿದ್ದರಾಮಯ್ಯ ತಾವೇ ಐದು ವರ್ಷಗಳ ಕಾಲ ಸಿಎಂ ಎಂದು ಘೋಷಿಸಬೇಕೆಂದು ವಿಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ. ನಾನು ಈ ಹಿಂದೆಯೂ 5 ವರ್ಷಗಳ ಸಿಎಂ ಅವಧಿ ಪೂರ್ಣಗೊಳಿಸಿರುವೆ. ಈ ಬಾರಿಯೂ ಪೂರ್ಣಗೊಳಿಸುವೆ. ಹೈಕಮಾಂಡ್​ ನನ್ನ ಪರವಾಗಿದೆ . ಹೈಕಮಾಂಡ್​ ಹೇಳಿದಂತೆ ನಡೆದುಕೊಳ್ಳುವೆ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಕಾರ್ಕಳ ಶಾಸಕ ವಿ. ಸುನೀಲ್​ ಕುಮಾರ್​, ಮೊದಲು ಸಿಎಂ ಆಯ್ಕೆ ಮಾಡೋದು ಯಾರು ಅನ್ನೋ ನಿರ್ಧಾರಕ್ಕೆ ಬನ್ನಿ. ಒಮ್ಮೆ ಜನರು ಸಿಎಂ ಆಯ್ಕೆ ಮಾಡುತ್ತಾರೆ ಎನ್ನುತ್ತೀರಿ. ಮತ್ತೊಮ್ಮೆ ಹೈಕಮಾಂಡ್ಗೆ ಬಿಟ್ಟಿದ್ದು ಎನ್ನುತ್ತೀರಿ. ಏನ್​ ಸಾರ್​. ಒಂದು ಕೋಳಿ ಸಾರು ಎಲ್ಲ ಬದಲಿಸಿತಾ ಎಂದು ಲೇವಡಿ ಮಾಡಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ. ನನ್ನನ್ನು ಐದು ವರ್ಷಗಳ ಅವಧಿಗೆಂದೇ ಸಿಎಂ ಮಾಡಲಾಗಿದೆ. ಅಲ್ಲದೇ ಇದು ನಮ್ಮ ಪಕ್ಷದ ಆಂತರಿಕ ವಿಚಾರ . ಎರಡೂವರೆ ವರ್ಷ ಅವಧಿ ಪೂರೈಸಿರುವೆ. ಮುಂದೆಯೂ ಈ ಸ್ಥಾನದಲ್ಲಿ ನಾನೇ ಮುಂದುವರಿಯುವೆ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ ನೀವು ಮಾಡಿರುವ ಘೋಷಣೆಗಳು ಅನುಷ್ಠಾನಕ್ಕೆ ಬರಲು ನೀವೇ ಸಿಎಂ ಆಗಿ ಮುಂದುವರಿಯಬೇಕು ಎಂದು ಮಾಜಿ ಸಚಿವ ಸುನೀಲ್​ ಕುಮಾರ್ ಹೇಳುತ್ತಿದ್ದಂತೆಯೇ, ಹೌದು.. ನಾನೇ ಸಿಎಂ ಆಗಿ ಮುಂದುವರಿಯುವೆ ಎಂದು ಸಿದ್ದರಾಮಯ್ಯ ಪುನರುಚ್ಛರಿಸಿದರು.

Karnataka Legislative Assembly Sunil Kumar Counter CM Siddaramiah Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories