ಸಿದ್ದಾಪುರ: ಆಯಿಲ್ ಮಿಲ್ನಲ್ಲಿ ಬಾರೀ ಅಗ್ನಿ ಅವಘಡ, ಲಕ್ಷಾಂತರ ಮೌಲ್ಯದ ನಷ್ಟ

Siddapur Madhu Maya Oil mill : ಸಿದ್ದಾಪುರ : ಆಯಿಲ್ಮಿಲ್ನಲ್ಲಿ ಅಗ್ನಿ ಅವಘಡ ಸಂಭವಿಸಿ, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ನಷ್ಟ ಉಂಟಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಜನ್ಸಾಲೆ ಎಂಬಲ್ಲಿ ನಡೆದಿದೆ.
ಜನ್ಸಾಲೆಯ ಪ್ರಸಿದ್ಧ ಮಧು ಆಯಿಲ್ ಮಿಲ್ನಲ್ಲಿ ಬುಧವಾರ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಆಸ್ತಿನಷ್ಟ ಉಂಟಾಗಿದೆ. ರಾತ್ರಿಯ ವೇಳೆಯಲ್ಲಿ ಶ್ರೀ ಮಧುಮಾಯ ಆಯಿಲ್ಸ್ (ಮಧು) ಕಾರ್ಖಾನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು.
ಕಾರ್ಖಾನೆಯಲ್ಲಿ ಅಪಾರ ಪ್ರಮಾಣದಲ್ಲಿ ತೆಂಗಿನ ಎಣ್ಣೆ ಮತ್ತು ಇತರ ವಸ್ತುಗಳನ್ನು ದಾಸ್ತಾನು ಇರಿಸಲಾಗಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಒಮ್ಮಿಂದೊಮ್ಮೆಲೆ ಹೊತ್ತಿ ಉರಿದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗೆ ಬೆಂಕಿಯ ತೀವ್ರತೆಯಿಂದಾಗಿ ನಂದಿಸುವ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ. ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ರಾತ್ರಿಯಿಂದ ನಿರಂತರ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ.
Also Read : Big Shock: ಹೋಟೆಲ್ ಉದ್ಯಮಕ್ಕೆ ಶಾಕ್ ನೀಡಿದ ಕೇಂದ್ರ! ಇನ್ಮೇಲೆ ಜೇಬು ಸುಡಲಿದೆಯೇ ಹೊರಗಿನ ಊಟ?!
ಕುಂದಾಪುರ, ಬೈಂದೂರು ಹಾಗೂ ಹೊಸಂಗಡಿ ಕೆಪಿಟಿಸಿಎಲ್ನಿಂದ ತಲಾ ಒಂದೊಂದು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಸಕ್ಸಸ್ ಆಗಿವೆ. ಅಗ್ನಿ ಅವಘಡದಲ್ಲಿ ಯಂತ್ರೋಪಕರಣಗಳು, ಕಚ್ಚಾ ವಸ್ತುಗಳು ಹಾಗೂ ಸಂಗ್ರಹಿತ ಎಣ್ಣೆ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಲಕ್ಷಾಂತರ ರೂ.ಗಳಷ್ಟು ನಷ್ಟ ಸಂಭವಿಸಿದೆ ಎನ್ನಲಾಗುತ್ತಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ. ಪ್ರಕರಣ ಸಂಬಂಧ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
Also Read : ಉಡುಪಿ : ನಿಶ್ಚಿತಾರ್ಥಕ್ಕೆ ಹಾಜರಾಗಲು ಸಿಗದ ರಜೆ : ಆನ್ಲೈನ್ನಲ್ಲೇ ಉಂಗುರ ವಿನಿಮಯ
ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಕುಂದಾಪುರದ ವೆಂಕಟರಮಣ ದೇವಸ್ಥಾನ ಬಳಿಯಲ್ಲಿನ ಅಂಗಡಿ ಸಮುಚ್ಚಯದಲ್ಲಿ ಅಗ್ನಿದುರಂತ ಸಂಭವಿಸಿತ್ತು. ಪದೇ ಪದೇ ಅಗ್ನಿ ಅವಘಡ ಸಂಭವಿಸುತ್ತಿರೋದಕ್ಕೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
Siddapur Madhu Maya Oil mill Fire Accident Kundapura News



