ಬಿಳಿ ಎಳ್ಳು ಸಂಕ್ರಾಂತಿಗಷ್ಟೇ ಸೀಮಿತವಾ? ಪ್ರತಿದಿನ ತಿನ್ನೊದ್ರಿಂದ ಯಾವೆಲ್ಲಾ ಖಾಯಿಲೆಗಳು ದೂರ? ಇಲ್ಲಿದೆ ಮಾಹಿತಿ

White Sesame Benefits: ಸಂಕ್ರಾಂತಿ ಬಂತೆಂದರೆ ಮೊದಲಿಗೆ ನೆನಪಾಗುವುದು ಎಳ್ಳು–ಬೆಲ್ಲ. ಎಳ್ಳು–ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ ಎಂದು ಹೇಳುತ್ತಾ ನೆರೆಹೊರೆಯವರಿಗೆಲ್ಲಾ ಹಂಚುವ ಸಂಪ್ರದಾಯ ಎಲ್ಲರಿಗೂ ತಿಳಿದಿದೆ.

ನಿನ್ನೆಯಷ್ಟೇ ಸಂಕ್ರಾಂತಿಯ ಈ ಸಂಭ್ರಮ ಆಚರಿಸಿ ಆಗಿದೆ. ಈ ಹಬ್ಬಕ್ಕೆ ಎಳ್ಳು ಪ್ರಮುಖ. ಭಾರತೀಯ ಪಾಕಪದ್ಧತಿ ಹಾಗೂ ಆಯುರ್ವೇದದಲ್ಲೂ ಬಿಳಿ ಎಳ್ಳಿಗೆ ಬಹಳಷ್ಟು ಮಹತ್ವವಿದೆ.

ಅಡುಗೆಯ ರುಚಿ ಹೆಚ್ಚಿಸುವ ಈ ಸಣ್ಣ ಬೀಜ ಆರೋಗ್ಯ ವೃದ್ಧಿಗೂ ಸಹಕಾರಿ. ಹಲವು ಪೋಷಕಾಂಶಗಳನ್ನು ಹೊಂದಿರುವ ಬಿಳಿ ಎಳ್ಳು ಹಲವಾರು ಕಾಯಿಲೆಗಳಿಗೆ ರಾಮಬಾಣ.
ಹಬ್ಬ ಮುಗೀತು ಎಂದು ಎಳ್ಳು ತಿನ್ನುವುದನ್ನ ಬಿಡುವ ಮೊದಲು ಈ ಲೇಖನ ಓದಿ. ಫೈಬರ್‌, ಆರೋಗ್ಯಕರ ಕೊಬ್ಬು ಹೊಂದಿರುವ ಇದು ಸಮತೋಲಿತ ಆಹಾರದ ಭಾಗವಾಗಿದೆ.

ಇದನ್ನು ಪ್ರತಿದಿನ ಸೇವಿಸುವುದರಿಂದ ಬಹಳಷ್ಟು ಪ್ರಯೋಜನವಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಬಿಳಿ ಎಳ್ಳಿನ ಆರೋಗ್ಯ ಪ್ರಯೋಜನಗಳು

ತೂಕ ಇಳಿಕೆಗೆ ಸಹಕಾರಿ: ಫೈಬರ್‌, ಪ್ರೋಟೋನ್‌ ಸಮೃದ್ಧವಾಗಿರುವ ಬಿಳಿ ಎಳ್ಳು ಹೆಚ್ಚು ಸಮಯದವರೆಗೆ ಹಸಿವನ್ನು ತಡೆಯುವ ಶಕ್ತಿ ನೀಡುತ್ತದೆ. ಇದು ತೂಕ ಇಳಿಕೆಗೆ ಹೆಚ್ಚಿನ ಸಹಾಯ ಮಾಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ: ಕ್ಯಾಲ್ಸಿಯಂನ ಉತ್ತಮ ಮೂಲವಾಗಿರುವ ಬಿಳಿ ಎಳ್ಳು ಮೂಳೆ ಸವೆತ, ಆಸ್ಟಿಯೊಪೊರೋಸಿಸ್‌ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕೀಲು ನೋವಿಗೆ ಪರಿಹಾರ ನೀಡುವ ಇದು ವಯಸ್ಸಾದವರಿಗೆ ವಿಶೇಷ ಪ್ರಯೋಜನ ನೀಡುತ್ತದೆ.

ಚರ್ಮ ಮತ್ತು ಕೂದಲಿನ ಕಾಂತಿ ಹೆಚ್ಚಿಸಲು: ಇದರಲ್ಲಿರುವ ಆಂಟಿಆಕ್ಸಿಡೆಂಟ್‌ ಮತ್ತು ವಿಟಮಿನ್‌ ಇ ಚರ್ಮವನನ್ನು ತೇವಗೊಳಿಸಿ, ಸುಕ್ಕು ನಿವಾರಿಸುತ್ತದೆ. ಕೂದಲಿನ ಬೇರುಗಳನ್ನು ಬಲಪಡಿಸಿ ಉದುರುವಿಕೆಯನ್ನು ತಡೆಯುತ್ತದೆ. ಜೊತೆಗೆ ಕೂದಲಿಗೆ ಪೋಷಣೆ ಒದಗಿಸುತ್ತದೆ.

ಇದನ್ನೂ ಓದಿ: ಚರ್ಮ ಒಣಗಲ್ಲ, ಯಾವ ಸಮಸ್ಯೆಯೂ ಆಗಲ್ಲ; ಚಳಿಗಾಲದಲ್ಲಿ ಮಕ್ಕಳನ್ನು ರಕ್ಷಿಸಲು ಹೀಗೆ ಮಾಡಿ

ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ: ಇದರಲ್ಲಿ ಫೈಬರ್‌ ಅಂಶ ಸಮೃದ್ಧವಾಗಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ. ಇದಿರಂದ ಗ್ಯಾಸ್ಟ್ರಿಕ್‌ ಸಮಸ್ಯೆ ದೂರವಾಗುತ್ತದೆ.

ಮಧುಮೇಹ ನಿಯಂತ್ರಿಸುತ್ತದೆ: ಬಿಳಿ ಎಳ್ಳಿನಲ್ಲಿರುವ ಮೆಗ್ನೇಸಿಯಂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್‌ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories