ಮಕ್ಕಳಿಗೆ ‘ಜಾಲಿ ರಾಂಚರ್ಸ್’ ಚಾಕಲೇಟ್ ಕೊಡ್ತಿದ್ದೀರಾ : ಇದರಲ್ಲಿದೆ ಕ್ಯಾನ್ಸರ್ಕಾರಕ ಅಂಶ
ಮಕ್ಕಳಿಗೆ ಹೆಚ್ಚಾಗಿ ಇಷ್ಟವಾಗುವ ಮಿಠಾಯಿಗಳ ಪೈಕಿ ಚಾಲಿ ರಾಂಚರ್ಸ್ ಕೂಡ ಒಂದು. ಅಮೆರಿಕ ಮೂಲದ ಕಂಪನಿ ಮಾಲೀಕತ್ವದ ಇವುಗಳು ಜೆಲ್ಲಿ ರೀತಿಯ ಕ್ಯಾಂಡಿ, ಗಮ್ಮೀಸ್, ಲಾಲಿಪಾಪ್ ಸೇರಿದಂತೆ ನಾನಾ ಬಗೆಯಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಆದರೆ ಇದೀಗ ಈ ಜಾಲಿ ರಾಂಚರ್ಸ್ ಕುರಿತಂತೆ ಆಘಾತಕಾರಿ ವಿಚಾರವೊಂದು ಹೊರಬಿದ್ದಿದೆ. ಇದರಲ್ಲಿ ಕ್ಯಾನ್ಸರ್ಕಾರಕ ಅಂಶ ಇರುವುದು ಪತ್ತೆಯಾಗಿದ್ದು ಬ್ರಿಟನ್ನ ಮಾರುಕಟ್ಟೆಗಳಲ್ಲಿ ಜಾಲಿ ರಾಂಚರ್ಸ್ ಮಾರಾಟಕ್ಕೆ ನಿರ್ಬಂಧ ಹೇರಲು ಸಿದ್ಧತೆ ನಡೆಸಲಾಗಿದೆ.
ಬ್ರಿಟನ್ನ ಆಹಾರ ಸುರಕ್ಷತಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಜಾಲಿ ರಾಂಚರ್ಸ್ಗಳಲ್ಲಿ mineral Oil Aromatic Hydrocarbons ಹಾಗೂ Mineral Oil Saturated Hydrocarbons ಗಳೆಂಬ ಎರಡು ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿದೆ. ಇವುಗಳಲ್ಲಿ MOAH ಮನುಷ್ಯನ ಡಿಎನ್ಎ ವ್ಯವಸ್ಥೆಯನ್ನೇ ಹಾಳುಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದರೆ MOSH ದೀರ್ಘಕಾಲದ ಕಾಯಿಲೆಗಳನ್ನು ತಂದೊಡ್ಡುತ್ತದೆ ಎನ್ನಲಾಗಿದೆ.
ಜಾಲಿ ರಾಂಚರ್ಸ್ನಲ್ಲಿ ಪತ್ತೆಯಾದ ರಾಸಾಯನಿಕಗಳ ಪೈಕಿ ಒಂದಾದ MOAH ಕ್ಯಾನ್ಸರ್ಕಾರಕ ಅಂಶಗಳನ್ನು ಹೊಂದಿದ್ದು ಸಣ್ಣ ಪ್ರಾಯದಲ್ಲಿ ಇದನ್ನು ಅತಿಯಾಗಿ ಸೇವಿಸುವ ಮಕ್ಕಳ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹಾಗೂಭವಿಷ್ಯದಲ್ಲಿ ಈ ಮಕ್ಕಳು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗುಯಿಲಿನ್ ಬಾರ್ ಸಿಂಡ್ರೋಮ್: ನರಮಂಡಲದ ಮೇಲೆ ದಾಳಿ ಮಾಡುವ ನಿಗೂಢ ಕಾಯಿಲೆ; ಲಕ್ಷಣವೇನು, ತಡೆಯುವುದು ಹೇಗೆ?
ಜಾಲಿ ರಾಂಚರ್ಸ್ ತಯಾರಿಕಾ ಕಂಪನಿ ದಿ ಹೆರ್ಷೆ ಈಗಾಗಲೇ ಬ್ರಿಟನ್ಗೆ ತನ್ನ ಉತ್ಪನ್ನಗಳ ರಫ್ತನ್ನು ಸ್ಥಗಿತಗೊಳಿಸಿದೆ. ಭಾರತದಲ್ಲಿಯೂ ಆದಷ್ಟು ಬೇಗ ಈ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.



