ನಕಲಿ ಕಾರ್ಡ್​ದಾರರಿಗೆ ಮತ್ತೊಂದು ಶಾಕ್​ : ಭಾರೀ ಮೊತ್ತದ ದಂಡ ವಿಧಿಸಲು ಸರ್ಕಾರದ ಪ್ಲಾನ್​

Fake Ration Card fine : ಅನರ್ಹ ಫಲಾನುಭವಿಗಳು ಬಿಪಿಎಲ್​ ಕಾರ್ಡ್ ಬಳಕೆ ಮಾಡುತ್ತಿರುವ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸಮರೋಪಾದಿಯಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಲೇ ಇದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಅರ್ಹರಿಗೆ ಮಾತ್ರ ಪಡಿತರ ಸೇರಿದಂತೆ ಇನ್ನಿತರ ಸೌಲಭ್ಯ ದೊರಕಬೇಕು ಎಂಬ ಉದ್ದೇಶದಿಂದ ನಕಲಿ ಕಾರ್ಡ್​ದಾರರ ಹಾವಳಿಗೆ ಅಂಕುಶ ಹಾಕಲಾಗುತ್ತಿದೆ. ಇದೀಗ ಅನರ್ಹ ಪಡಿತರದಾರರಿಗೆ ಮತ್ತೊಂದು ಶಾಕ್​ ಎದುರಾಗಿದೆ.

ಅನರ್ಹರು ಹಾಗೂ ಬಿಪಿಎಲ್​ ಕಾರ್ಡ್​ ಬಳಕೆ ಮಾಡಿ ಮೋಸ ಮಾಡುವವರ ಕಾರ್ಡ್​ ರದ್ದು (Fake Ration Card fine)ಮಾಡುವುದು ಮಾತ್ರವಲ್ಲದೇ ದಂಡ ಕೂಡ ವಿಧಿಸಲು ಸರ್ಕಾರ ನಿರ್ಧರಿಸಿದೆ. ದುಬಾರಿ ಕಾರುಗಳು, ದೊಡ್ಡ ಪ್ರಮಾಣದ ಆಸ್ತಿ ಹೊಂದಿರುವವರೂ ಕೂಡ ಬಿಪಿಎಲ್​ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆಗೆ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ: ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ತಟ್ಟೆ ಕಾಸಿಗಾಗಿ ಅರ್ಚಕರ ಹೊಡೆದಾಟ : ವಿಡಿಯೋ ವೈರಲ್​

ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಜಂಟಿಯಾಗಿ ಅನರ್ಹ ಕಾರ್ಡ್​ದಾರರ ವಿರುದ್ಧ ಸಮರ ಸಾರಿದ್ದು ಇದೀಗ ನಕಲಿ ಫಲಾನುಭವಿಗಳಿಗೆ ನಡುಕ ಶುರುವಾಗಿದೆ. ಈಗಾಗಲೇ ದೇಶಾದ್ಯಂತ ಲಕ್ಷಾಂತರ ನಕಲಿ ಕಾರ್ಡುಗಳನ್ನು ರದ್ದು ಕೂಡ ಮಾಡಲಾಗಿದೆ.

ಉಚಿತ ಪಡಿತರವನ್ನು ದುರುಪಯೋಗಪಡಿಸಿಕೊಂಡವರಿಗೆ ಪ್ರಯೋಜನದಷ್ಟೇ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ . ಜೊತೆಗೆ ಬಡ್ಡಿ ಮತ್ತು ದಂಡವನ್ನು ಸಹ ವಿಧಿಸಬಹುದು ಎಂದು ಮೂಲಗಳು ಮಾಹಿತಿ ನೀಡಿವೆ. ಇನ್ನೂ ಮುಂದುವರೆದು ಕಠಿಣ ಕಾನೂನು ಕ್ರಮ ಕೂಡ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories