‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಗುತ್ತಲೇ ಪರಾಕ್ ’ : ವರ್ಷದ ಕಾರಣಿಕ ನುಡಿದ ಮೈಲಾರ ಮೈಲಾರಲಿಂಗೇಶ್ವರ
ರಾಜ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ವರ್ಷದ ಕಾರಣಿಕ ನುಡಿಯುವ ಮೈಲಾರದ ಮೈಲಾರಲಿಂಗೇಶ್ವರ ಈ ಬಾರಿಯ ಕಾರಣಿಕವನ್ನೂ ನುಡಿದಿದೆ. ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಗುತ್ತಲೇ ಪರಾಕ್ ಎಂದು ಈ ವರ್ಷದ ಭವಿಷ್ಯವಾಣಿಯನ್ನು ತಿಳಿಸಲಾಗಿದೆ.
ಭಕ್ತರನ್ನು ದಿಟ್ಟಿಸಿ ನೋಡಿದ ಗೊರವಯ್ಯ, ಈ ರೀತಿಯ ಭವಿಷ್ಯ ನುಡಿದಿದ್ದಾರೆ. ಮೈಲಾರಲಿಂಗೇಶ್ವರ ದೇಗುಲದ ವರ್ಷದ ಭವಿಷ್ಯವಾಣಿಗೆ ಸಾಕಷ್ಟು ಮಹತ್ವವಿದೆ.
ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಗುತ್ತಲೇ ಪರಾಕ್ ಎಂಬ ಭವಿಷ್ಯಕ್ಕೆ ನಾನಾ ಅರ್ಥವನ್ನು ಕಲ್ಪಿಸಲಾಗಿದೆ. ಆದರೆ ಸಂಕ್ಷಿಪ್ತವಾಗಿ ಈ ವರ್ಷ ರಾಜ್ಯದಲ್ಲಿ ಮಳೆ – ಬೆಳೆ ಚೆನ್ನಾಗಿ ಆಗಲಿದೆ ಎಂದು ಹೇಳಲಾಗಿದೆ. ಈ ವರ್ಷದ ಉತ್ತಮ ಭವಿಷ್ಯಕ್ಕೆ ರಾಜ್ಯದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ವರ್ಷ ಕೂಡ ಕಾರಣಿಕ ನುಡಿದಿದ್ದ ಗೊರವಯ್ಯ, ಇಟ್ಟ ರಾಮರ ಬಾಣ ಹುಸಿಯಿಲ್ಲ, ಧರ್ಮ – ಅಧರ್ಮ ಸಂಕಷ್ಟವಾದೀತು. ವಿಶ್ವ ಶಾಂತಿಯ ಭಂಗವಾಯಿತು, ಧರೆಗೆ ವರುಣನ ಆಗಮನವಾಯಿತು. ಸರ್ವರಿಗೂ ಎಚ್ಚರಿಕೆಯಿಂದ ಇರಬೇಕು ಪರಾಕ್ ಎಂದು ಮೈಲಾರಲಿಂಗೇಶ್ವರ ದೇವರ ಗೊರವಯ್ಯ ನುಡಿದಿದ್ದರು.



