IPL 2026: “ಈ ಬಾರಿ ಸವಾಲು ಅಷ್ಟು ಸುಲಭವಲ್ಲ : ಸಹ ಆಟಗಾರರಿಗೆ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ

ಆರ್‌ಸಿಬಿ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಿವೆ. ಹರಾಜಿನಲ್ಲಿ ವೆಂಕಟೇಶ್ ಅಯ್ಯರ್, ಜೋರ್ಡಾನ್ ಕಾಕ್ಸ್ ಮತ್ತು ಜಾಕೋಬ್ ಡಫಿ ಅವರಂತಹ ಪ್ರತಿಭಾವಂತರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕಳೆದ ಬಾರಿ (2025) ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಈ ಬಾರಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ (Title Defence) ಹೋರಾಟಕ್ಕೆ ಸಜ್ಜಾಗಿದೆ. ಆದರೆ, ಈ ಹಾದಿ ಅಂದುಕೊಂಡಷ್ಟು ಸುಲಭವಲ್ಲ ಎಂದು ರನ್ ಮಷೀನ್ ವಿರಾಟ್ ಕೊಹ್ಲಿ ತಮ್ಮ ತಂಡಕ್ಕೆ ಮೊದಲೇ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತಂಡದ ಮೊದಲ ಅಭ್ಯಾಸ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಆಟಗಾರರಲ್ಲಿ ಹೊಸ ಚೈತನ್ಯ ತುಂಬಿದರು. “ನಾವು ಕಳೆದ ಎರಡು-ಮೂರು ಸೀಸನ್‌ಗಳಲ್ಲಿ ಪಟ್ಟ ಶ್ರಮದ ಫಲವಾಗಿ ಕಳೆದ ವರ್ಷ ಟ್ರೋಫಿ ಗೆದ್ದಿದ್ದೇವೆ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಇರುತ್ತದೆ. ನಾವು ಹಾಲಿ ಚಾಂಪಿಯನ್ನರು ಎಂಬ ಕಾರಣಕ್ಕೆ ಉಳಿದ ತಂಡಗಳು ನಮ್ಮ ಮೇಲೆ ಹೆಚ್ಚಿನ ಒತ್ತಡ ಹೇರಲು ಮತ್ತು ನಮ್ಮನ್ನು ಸೋಲಿಸಲು ಶತಪ್ರಯತ್ನ ಮಾಡುತ್ತವೆ. ಆದ್ದರಿಂದ ಸ್ಪರ್ಧೆ ಈ ಬಾರಿ ಮತ್ತಷ್ಟು ಕಠಿಣವಾಗಲಿದೆ,” ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ 120% ಶ್ರಮ ಹಾಕಿ:

ಅಭ್ಯಾಸದ ಅವಧಿಯಲ್ಲಿ ಒಂದು ನಿಮಿಷವನ್ನೂ ವ್ಯರ್ಥ ಮಾಡಬೇಡಿ ಎಂದು ಕಿವಿಮಾತು ಹೇಳಿದ ಕೊಹ್ಲಿ, “ನಾವು ಸದಾ ಮುಂದಿರಬೇಕು. ಮುಂದಿನ ಎರಡೂವರೆ ತಿಂಗಳು ನಮ್ಮ ಶೇಕಡಾ 120ರಷ್ಟು ಶ್ರಮವನ್ನು ನೀಡಬೇಕಿದೆ. ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗಿ (Switch on now),” ಎಂದು ಸಹ ಆಟಗಾರರಿಗೆ ಸ್ಫೂರ್ತಿ ತುಂಬಿದರು.

Also Read : KKR New Jersey: ಕೆಕೆಆರ್ ಅಭಿಮಾನಿಗಳಿಗೆ ಹಬ್ಬ: ಐಪಿಎಲ್ 2026ಕ್ಕಾಗಿ ಹೊಸ ಜೆರ್ಸಿ ಬಿಡುಗಡೆ.

ಆರ್‌ಸಿಬಿಗೆ ಹೊಸ ಆಟಗಾರರ ಸೇರ್ಪಡೆ

ಈ ಬಾರಿ ಆರ್‌ಸಿಬಿ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಿವೆ. ಹರಾಜಿನಲ್ಲಿ ವೆಂಕಟೇಶ್ ಅಯ್ಯರ್, ಜೋರ್ಡಾನ್ ಕಾಕ್ಸ್ ಮತ್ತು ಜಾಕೋಬ್ ಡಫಿ ಅವರಂತಹ ಪ್ರತಿಭಾವಂತರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಮಾತನಾಡಿ, “ನಮ್ಮ ತಂಡ ಈಗ ಮತ್ತಷ್ಟು ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿ ಮತ್ತು ನಾಯಕ ರಜತ್ ಪಾಟಿದಾರ್ ನೇತೃತ್ವದಲ್ಲಿ ಹಳೆಯ ಮತ್ತು ಹೊಸ ಆಟಗಾರರ ಸಮನ್ವಯದೊಂದಿಗೆ ಮತ್ತೆ ಕಪ್ ಗೆಲ್ಲುವ ಗುರಿ ಹೊಂದಿದ್ದೇವೆ,” ಎಂದಿದ್ದಾರೆ.

Also Read : ಐಪಿಎಲ್ 2026: ಮಾರ್ಚ್ 28 ರಿಂದ ಶುರು; ಮೊದಲ ಪಂದ್ಯದಲ್ಲಿ ಆರ್‌ಸಿಬಿ vs ಎಸ್‌ಆರ್‌ಎಚ್‌ ಮುಖಾಮುಖಿ!

ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಸೆಣಸಲಿದೆ. 2025ರ ಐಪಿಎಲ್‌ನಲ್ಲಿ ಕೊಹ್ಲಿ 144.71 ಸ್ಟ್ರೈಕ್ ರೇಟ್‌ನಲ್ಲಿ 657 ರನ್ ಗಳಿಸಿ ಮಿಂಚಿದ್ದರು. ಈ ಬಾರಿಯೂ ಅದೇ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ ಕಿಂಗ್ ಕೊಹ್ಲಿ.

ipl 2026 virat kohli warning to rcb teammates

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories