ಶುರುವಾಯ್ತು ಆಪರೇಷನ್​ ಕಮಲ : ರೆಸಾರ್ಟ್ ರಾಜಕಾರಣದತ್ತ ಕಾಂಗ್ರೆಸ್​ ಚಿತ್ತ

ರಾಜ್ಯಮಟ್ಟದ ರಾಜಕಾರಣ ಮಾತ್ರವಲ್ಲದೇ ಸ್ಥಳೀಯ ಚುನಾವಣೆಗಳಲ್ಲಿಯೂ ರೆಸಾರ್ಟ್​ ರಾಜಕೀಯ ಆರಂಭಗೊಂಡಿದೆ. ಹೌದು..! ಗುಜರಾತ್​ನಲ್ಲಿ ಸದ್ಯ ಸ್ಥಳೀಯ ಚುನಾವಣೆ ನಡೆಯಲಿದ್ದು, ಈ ಬೆನ್ನಲ್ಲೆ ಇಂತಹ ರಾಜಕೀಯ ವಿದ್ಯಮಾನವೊಂದು ಸಂಭವಿಸಿದೆ. ನವಸಾರಿ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ ಈಗಾಗಲೇ 52 ಸ್ಥಾನಗಳಲ್ಲಿ ಅವಿರೋಧ ಗೆಲುವು ಸಾಧಿಸಿದ್ದು ಕಾಂಗ್ರೆಸ್​ ನಾಯಕರ ನಿದ್ದೆಗೆಡಿಸಿದೆ.

ಇನ್ನುಳಿದ ಸ್ಥಾನಗಳಲ್ಲಿಯೂ ಅವಿರೋಧವಾಗಿ ಜಯ ಸಾಧಿಸುವುದು ಬಿಜೆಪಿಯ ಗುರಿಯಾಗಿದೆ. ಹೀಗಾಗಿ ಕಾಂಗ್ರೆಸ್​ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಲು ಬಿಜೆಪಿ ಪ್ಲಾನ್​ ಮಾಡಿದೆ ಎನ್ನುವುದು ಕಾಂಗ್ರೆಸ್​ ಆರೋಪವಾಗಿದೆ. ಈ ವಿಚಾರವಾಗಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಶೈಲೇಶ್​ ಪಟೇಲ್​ ಮಾತನಾಡಿದ್ದು, ಬಿಜೆಪಿಯಿಂದ ನಮ್ಮ ಪಕ್ಷದ ಅಭ್ಯರ್ಥಿಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದೆ. ಕುದುರೆ ವ್ಯಾಪಾರದಿಂದ ನಮ್ಮ ಅಭ್ಯರ್ಥಿಗಳನ್ನು ಪಾರು ಮಾಡಿಕೊಳ್ಳುವ ಉದ್ದೇಶದಿಂ 100ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ಬಿಜೆಪಿ ಪಕ್ಷವು ತನ್ನ ಆಡಳಿತವನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯುವಂತೆ ಪೊಲೀಸರ ಮೂಲಕ ಒತ್ತಡ ಹೇರುತ್ತಿದೆ ಎಂದು ಕಿಡಿಕಾರಿದ್ದಾರೆ.

ಇ‌ದನ್ನೂ ಓದಿ: ಸರ್ಕಾರಿ ಸಭೆಗಳಲ್ಲಿ ಕರಿದ ತಿನಿಸುಗಳಿಗೆ ನಿರ್ಬಂಧ : ಸಿರಿಧಾನ್ಯ ಆಧಾರಿತ ತಿನಿಸುಗಳಿಗಷ್ಟೇ ಅವಕಾಶ

ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರ ಮೇಲೆ ಕ್ರಿಮಿನಲ್​ ಕೇಸ್​ ಹಾಕಿಸುವುದಾಗಿ ಪೊಲೀಸರ ಮೂಲಕ ಬೆದರಿಕೆಯೊಡ್ಡಿ ಬಿಜೆಪಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದೆ ಎನ್ನುವುದು ಕಾಂಗ್ರೆಸ್​ ಪಕ್ಷದ ಆರೋಪವಾಗಿದೆ. ಇದು ಮಾತ್ರವಲ್ಲದೇ ಚುನಾವಣೆಯ ಸಂದರ್ಭದಲ್ಲಿಯೇ ಉಮರ್ಗಮ್​ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಬಿಜೆಪಿ ಸರ್ಕಾರಿ ಅಧಿಕಾರಿಗಳ ಮೇಲೆ ಹಾಕುತ್ತಿರುವ ಒತ್ತಡಕ್ಕೆ ಹಿಡಿದ ಕೈಗನ್ನಡಿ ಎನ್ನುವುದು ಕೂಡ ಕೈ ಪಾಳಯದ ಗಂಭೀರ ಆರೋಪವಾಗಿದೆ .

ಬೆಲೆ ಏರಿಕೆ ಅಸ್ತ್ರ ಪ್ರಯೋಗಿಸಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಬೇಕೆಂದುಕೊಂಡಿದ್ದ ಕಾಂಗ್ರೆಸ್​ಗೆ ಇದೀಗ ಆಪರೇಷನ್​ ಕಮಲ ಮುಳುವಾಗಿ ಪರಿಣಮಿಸಿದೆ. ರೆಸಾರ್ಟ್ ರಾಜಕೀಯ ವರ್ಕೌಟ್​ ಆಗುತ್ತಾ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories