ಅಪ್ಪು ಅಜರಾಮರ : ಅಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಆಗಿದ್ದೇನು ?

ಬೆಂಗಳೂರು: Appu Ajarama: ಕನ್ನಡ ಚಿತ್ರರಂಗದ ಪ್ರೀತಿಯ ‘ಅಪ್ಪು’, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷಗಳೇ ಕಳೆದಿದೆ. 2021ರ ಅಕ್ಟೋಬರ್ 29 ಕೇವಲ 46ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣಿಸಿದ್ದರು.

ಇಡೀ ಕರುನಾಡಿಗೆ ಈ ಸುದ್ದಿಯನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲೇ ಇಲ್ಲ. ಸದಾ ಲವಲವಿಕೆಯಿಂದ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದ ಅಪ್ಪು ಅವರ ಹಠಾತ್ ಅಗಲಿಕೆ, ನಾಡಿನಾದ್ಯಂತ ಅಭಿಮಾನಿಗಳನ್ನು ದುಃಖದ ಕಡಲಲ್ಲಿ ಮುಳುಗಿಸಿತು.

ಪುನೀತ್ ರಾಜ್‌ಕುಮಾರ್‌ಗೆ ಆ ದಿನ ಆಗಿದ್ದೇನು ?

ಶುಕ್ರವಾರ ಬೆಳಿಗ್ಗೆ ತಮ್ಮ ಸದಾಶಿವನಗರದ ಮನೆಯಲ್ಲಿ ಎಂದಿನಂತೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಪುನೀತ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚೆತ್ತ ಅವರನ್ನು ಮನೆಯ ಸಮೀಪದ ಕ್ಲಿನಿಕ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಮತ್ತು ಇಸಿಜಿ (ECG) ವರದಿಗಳ ಬಳಿಕ, ಪರಿಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಕೂಡಲೇ ಬೆಂಗಳೂರಿನ ಪ್ರತಿಷ್ಠಿತ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಯಿತು.

ಬೆಳಿಗ್ಗೆ 11:40ರ ಸುಮಾರಿಗೆ ಆಸ್ಪತ್ರೆಗೆ ಬಂದಾಗ ಪುನೀತ್ ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದ್ದರೂ, ಆಸ್ಪತ್ರೆಗೆ ಬರುವಾಗಲೇ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ಹೃದಯ ಸ್ತಂಭನ (Cardiac Asystole) ಸ್ಥಿತಿಯಲ್ಲಿದ್ದರು ಎಂದು ವೈದ್ಯರು ತಿಳಿಸಿದರು.

ಖ್ಯಾತ ವೈದ್ಯರ ತಂಡ ಸುಧಾರಿತ ಸಿಪಿಆರ್ (CPR) ಸೇರಿದಂತೆ ಎಲ್ಲಾ ತುರ್ತು ಚಿಕಿತ್ಸೆಗಳನ್ನು ನೀಡಿತಾದರೂ, ಫಲಕಾರಿಯಾಗಲಿಲ್ಲ. ಅಂತಿಮವಾಗಿ, ಮಧ್ಯಾಹ್ನ 2:30ರ ಸುಮಾರಿಗೆ ಅವರನ್ನು ನಿಧನರಾಗಿದ್ದಾರೆಂದು ಘೋಷಿಸಲಾಯಿತು.

Also Read: Puneeth Rajkumar: ಪುನೀತ್‌ ರಾಜ್‌ಕುಮಾರ್‌ 4ನೇ ಪುಣ್ಯತಿಥಿ : ಅಪ್ಪು ಸಮಾಧಿಗೆ ವಿಶೇಷ ಪೂಜೆ

ಅಪ್ಪು ಸಾವಿಗೆ ಕಾರಣ ‘ಮಾಸ್ಸಿವ್ ಹಾರ್ಟ್ ಅಟ್ಯಾಕ್’

ಪುನೀತ್ ಅವರ ಅಕಾಲಿಕ ಸಾವಿಗೆ ತೀವ್ರ ಹೃದಯಾಘಾತ (Massive Heart Attack) ಮತ್ತು ಕಾರ್ಡಿಯಾಕ್ ಅರೆಸ್ಟ್ (Cardiac Arrest) ಕಾರಣ ಎಂದು ವೈದ್ಯಕೀಯ ಮೂಲಗಳು ದೃಢಪಡಿಸಿವೆ. ತಜ್ಞರ ಪ್ರಕಾರ, ಹೃದಯದ ಮುಂದಿನ ಭಾಗದ ಪ್ರಮುಖ ರಕ್ತನಾಳವು ತೀವ್ರವಾಗಿ ಮುಚ್ಚಿಹೋಗಿದ್ದರಿಂದ ಈ ಘಟನೆ ಸಂಭವಿಸಿದೆ.

ನಿರಂತರವಾಗಿ ವ್ಯಾಯಾಮ ಮಾಡುತ್ತಿದ್ದ ಫಿಟ್ ಆಗಿರುವ ವ್ಯಕ್ತಿಗಳಲ್ಲೂ ಕೆಲವೊಮ್ಮೆ ಅನುವಂಶಿಕ ಕಾರಣಗಳು ಅಥವಾ ತೀವ್ರ ಒತ್ತಡದಿಂದ ಈ ರೀತಿಯ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪುನೀತ್ ಅವರ ಕುಟುಂಬದಲ್ಲಿ ಹೃದಯಾಘಾತದ ಹಿನ್ನೆಲೆ ಇದ್ದಿದ್ದು ಕೂಡ ಒಂದು ಕಾರಣವಾಗಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಪವರ್ ಸ್ಟಾರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಅವರ ನಗು, ಸಾಮಾಜಿಕ ಕಾರ್ಯಗಳು ಮತ್ತು ಚಿತ್ರಗಳು ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಜೀವಂತ.

Also Read: ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳಿವು, ಸೂರಜ್-ರಾಶಿಕಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories