Puneeth Rajkumar: ಪುನೀತ್‌ ರಾಜ್‌ಕುಮಾರ್‌ 4ನೇ ಪುಣ್ಯತಿಥಿ : ಅಪ್ಪು ಸಮಾಧಿಗೆ ವಿಶೇಷ ಪೂಜೆ

Puneeth Rajkumar: ಸ್ಯಾಂಡಲ್‌ವುಡ್‌ನ ಖ್ಯಾತ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯತಿಥಿ. ಅಪ್ಪು ಕರುನಾಡನ್ನು ಅಗಲಿ ಇಂದಿಗೆ ನಾಲ್ಕು ವರ್ಷಗಳೇ ಕಳೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಡಾ. ರಾಜ್‌ಕುಮಾರ್ ಅವರ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.

ಪುನೀತ್ ರಾಜ್‌ ಕುಮಾರ್‌ ಅವರ ಪತ್ನಿ ಅಶ್ವಿನಿ ‌ಕುಮಾರ್ ಮತ್ತು ಪುತ್ರಿಯರಾದ ವಂದಿತಾ ಪುನಿತ್‌ ರಾಜ್‌ಕುಮಾರ್‌ ಮತ್ತು ಧೃತಿ ಪುನೀತ್‌ ರಾಜ್‌ ಕುಮಾರ್‌ ಅವರು ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಸಹೋದರರಾದ ನಟ ಶಿವರಾಜ್‌ ಕುಮಾರ್‌, ನಟ ರಾಘವೇಂದ್ರ ರಾಜ್‌ಕುಮಾರ್‌ ನಟ ವಿಜಯ್‌ ರಾಜ್‌ ಕುಮಾರ್‌, ಯುವರಾಜ್‌ ಕುಮಾರ್‌ ಸೇರಿದಂತೆ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಅಪ್ಪು ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಇಷ್ಟವಾದ ತಿಂಡಿ- ತಿನಿಸುಗಳನ್ನು ಸಸ್ಯಹಾರಿ ಮತ್ತು ಮಾಂಸಹಾರಿ ಅಡುಗೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಕೇವಲ ಒಂದು ಕುಟುಂಬದ ಕಾರ್ಯಕ್ರಮವಾಗಿ ಉಳಿದಿಲ್ಲ, ಬದಲಿಗೆ ಅಭಿಮಾನಿಗಳು ಸಮಾಜಮುಖಿ ಆಚರಣೆಯನ್ನಾಗಿ ಮಾಡಿದ್ದಾರೆ.

ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮ

Also Read: ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳಿವು, ಸೂರಜ್-ರಾಶಿಕಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

ಸಮಾಧಿ ದರ್ಶನ ಮತ್ತು ನಮನ: ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಬೆಳಗ್ಗೆಯಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಸಾವಿರಾರು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ನಮನ ಸಲ್ಲಿಸುತ್ತಿದ್ದಾರೆ.

ಅನ್ನಸಂತರ್ಪಣೆ : ರಾಜ್ಯಾದ್ಯಂತ ಪುನೀತ್ ರಾಜ್‌ಕುಮಾರ್ ಅಭಿಮಾನಿ ಸಂಘಟನೆಗಳು ಬೃಹತ್ ಪ್ರಮಾಣದಲ್ಲಿ ಅನ್ನದಾನ (ಆಹಾರ ವಿತರಣೆ) ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ದೊಡ್ಮನೆ ಕುಟುಂಬದ ವತಿಯಿಂದಲೂ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ರಕ್ತದಾನ ಮತ್ತು ನೇತ್ರದಾನ ಶಿಬಿರಗಳು: ಅಪ್ಪು ಅವರ ಆದರ್ಶಗಳನ್ನು ಮುಂದುವರೆಸಿ, ಅನೇಕ ಕಡೆಗಳಲ್ಲಿ ರಕ್ತದಾನ ಶಿಬಿರಗಳು ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಅಪ್ಪು ಅವರು ನೇತ್ರದಾನ ಮಾಡಿದ್ದರಿಂದ, ನೇತ್ರದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳೂ ನಡೆದಿವೆ.

ಸೇವಾ ಕಾರ್ಯಗಳು : ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಮತ್ತು ಲೇಖನ ಸಾಮಗ್ರಿಗಳ ವಿತರಣೆ, ಬಡವರಿಗೆ ಸಹಾಯ, ಮತ್ತು ದೇವಾಲಯಗಳಲ್ಲಿ ವಿಶೇಷ ಪೂಜೆಗಳಂತಹ ಹಲವಾರು ಸಮಾಜಸೇವಾ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.

Also Read: 50ರ ಆಸುಪಾಸಿನಲ್ಲೂ ಬಳಕುವ ಮೈಮಾಟ : ಮಲ್ಲಿಕಾ ಶೆರಾವತ್​ ದೇಹ ಸೌಂದರ್ಯದ ಹಿಂದಿನ ಗುಟ್ಟು ರಟ್ಟು

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories