Bigg Boss: ಬಿಗ್‌ಬಾಸ್ ಮನೆಗೆ ಬೀಗಕ್ಕೂ ನನಗೂ ಸಂಬಂಧವಿಲ್ಲ ಎಂದ ಡಿಕೆ ಶಿವಕುಮಾರ್

Bigg Boss: ಬಿಗ್‌ಬಾಸ್ ಕನ್ನಡ 12ನೇ ಆವೃತ್ತಿ ಸದ್ಯಕ್ಕೆ ಬಂದ್ ಆಗಿದೆ. ಬಿಗ್‌ಬಾಸ್ ಶೋಗೆ ಬೀಗ ಬಿದ್ದಿರುವುದು ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ. ಬಿಗ್‌ಬಾಸ್ (Bigg Boss) ಮನೆಗೆ ಬೀಗ ಬಿದ್ದಿರೋದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರು ಬಿಗ್‌ಬಾಸ್ ಮನೆಗೆ ಬೀಗ ಬೀಳುವುದಕ್ಕೆ ಡಿಕೆ ಶಿವಕುಮಾರ್ ಅವರೇ ಕಾರಣ ಎಂದಿದ್ದರು. ಈ ಹಿಂದೆ ಚಿತ್ರರಂದ ಮೇಲೆ ಮುನಿಸಿಕೊಂಡಿದ್ದ ಡಿಕೆ ಶಿವಕುಮಾರ್(D. K. Shivakumar) ಸಿನಿಮಾದವರ ನಟ್ ಬೋಲ್ಟ್ ಟೈಟ್ ಮಾಡ್ತೇನೆ ಅನ್ನೋ ಹೇಳಿಕೆ ನೀಡಿದ್ದರು.
Also Read: ಬಿಗ್ ಬಾಸ್ ಬೀಗದ ಹಿಂದಿದ್ಯಾ ನಟ್ ಬೋಲ್ಟ್ ರಾಜಕಾರಣ: ಡಿಕೆಶಿ ಮೇಲೆ ಆಕ್ರೋಶ ವ್ಯಕ್ತವಾಗ್ತಿರೋದ್ಹೇಕೆ?!
ಇದೀಗ ತಮ್ಮ ಸೇಡನ್ನು ಬಿಗ್‌ಬಾಸ್ ಶೋ ಮೂಲಕ ತೀರಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರೀಯೆ ನೀಡಿರುವ ಡಿಕೆ ಶಿವಕುಮಾರ್ ಅವರು ಬಿಗ್‌ಬಾಸ್ ಮನೆ ಬೀಗಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.
ಮನೋರಂಜನೆ ಎಲ್ಲರಿಗೂ ಬೇಕು. ಆದರೆ ಕಾನೂನು ಬಾಹಿರವಾಗಿ ವರ್ತಿಸಿದಾಗ ಕಾನೂನು ಕ್ರಮವನ್ನು ಅಧಿಕಾರಿಗಳು ತೆಗೆದುಕೊಳ್ತಾರೆ. ಯಾರೋ ಏನೋ ಮಾತಾಡ್ತಾರೆ ಅಂತ ನಾನು ತಲೆ ಕಡೆಸಿಕೊಳ್ಳುವುದಿಲ್ಲ ಎಂದಿದ್ದಾರೆ.
Also Read: ಮಾರ್ಕ್ ಮೊದಲ ಹಾಡು ರಿಲೀಸ್..’ಸೈಕ್ ಸೈತಾನ್’ಗೆ ಕಿಚ್ಚ ಸುದೀಪ್ ಭರ್ಜರಿ ಡ್ಯಾನ್ಸ್
ಸದ್ಯ ಜಾಲಿವುಡ್ ಸ್ಟುಡಿಯೋಸ್ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯಕ್ಕೆ ತುರ್ತು ವಿಚಾರಣೆ ನಡೆಸುವಂತೆಯೂ ಮನವಿ ಮಾಡಲಾಗಿದೆ. ಇಂದು ಮಧ್ಯಾಹ್ನ ಬಿಗ್‌ಬಾಸ್ ಶೋ ಕುರಿತು ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆಯಿದೆ.



