Kantara Chapter 1: 500 ಕೋಟಿ ಕ್ಲಬ್‌ ಸೇರಿದ ಕಾಂತಾರ, ರಿಷಬ್‌ ಪ್ರಗತಿ ಮದುವೆ ವಿಡಿಯೋ ವೈರಲ್‌

Kantara Chapter 1: ಕಾಂತಾರ ಚಾಪ್ಟರ್‌ 1 ಸಿನಿಮಾಕ್ಕೆ ಎಲ್ಲೆಡೆಯಿಂದಲೂ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಸಿನಿಮಾದ ಗಳಿಕೆ ಈಗಾಗಲೇ 100 ಕೋಟಿ ರೂಪಾಯಿ ಗಡಿ ದಾಟಿದೆ.

ಕರಾವಳಿಯ ಕಥಾ ಹಂದರವನ್ನು ಇಟ್ಟುಕೊಂಡು ನಿರ್ಮಾಣ ಮಾಡಿದ್ದ ಕಾಂತಾರ(Kantara) ಸಿನಿಮಾ ಕನ್ನಡ ಸಿನಿಮಾ ಇತಿಹಾಸದಲ್ಲಿ ದಾಖಲೆಯನ್ನು ಬರೆದಿತ್ತು. ಇದೀಗ ಕಾಂತಾರ ಚಾಪ್ಟರ್‌ 1 ಸಿನಿಮಾ ಹಿಂದಿನ ಕಾಂತಾರ ಸಿನಿಮಾವನ್ನೇ ಹಿಂದಿಕ್ಕಿದೆ.

ಕಾಂತಾರ ಸಿನಿಮಾ ಬಿಡುಗಡೆ ಆದ 10 ದಿನಗಳಲ್ಲೇ ಹಲವು ದಾಖಲೆಗಳನ್ನು ಉಡೀಸ್‌ ಮಾಡಿದೆ. ಕಾಂತಾರ ಸಿನಿಮಾ ಈಗಾಗಲೇ 500 ಕೋಟಿ ಕ್ಲಬ್‌ ಸೇರಿದೆ. ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳ ಸಾಲಿನಲ್ಲಿ ಕಾಂತಾರ ಚಾಪ್ಟರ್‌ 1 2ನೇ ಸ್ಥಾನದಲ್ಲಿದೆ.

ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಮೊದಲ ಸ್ಥಾನದಲ್ಲಿದೆ. ಕಾಂತಾರ ಸಿನಿಮಾ ಮೂರನೇ ಸ್ಥಾನದಲ್ಲಿದ್ರೆ, ಕೆಜಿಎಫ್‌ 1 ಸಿನಿಮಾ ನಾಲ್ಕನೇ ಸ್ಥಾನವನ್ನ ಪಡೆದುಕೊಂಡಿದೆ.

Also Read: Bigg Boss: ಬಿಗ್‌ಬಾಸ್‌ ಮನೆಗೆ ಬೀಗಕ್ಕೂ ನನಗೂ ಸಂಬಂಧವಿಲ್ಲ ಎಂದ ಡಿಕೆ ಶಿವಕುಮಾರ್‌

ಈ ನಾಲ್ಕು ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿದೆ ಅನ್ನೋದು ವಿಶೇಷ. ಇನ್ನು ಭಾರತೀಯ ಸಿನಿಮಾರಂಗದಲ್ಲಿಯೂ ಕಾಂತಾರ ದಾಖಲೆ ಬರೆಯುತ್ತಿದೆ.ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ಕಾಂತಾರ 28ನೇ ಸ್ಥಾನದಲ್ಲಿದ್ದು, ಮುಂದಿನ ವಾರ ಟಾಪ್‌ 15ರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಈ ವರ್ಷ ಬಿಡುಗಡೆ ಆಗಿರುವ ಸಿನಿಮಾಗಳ ಸಾಲಿನಲ್ಲಿ ಕಾಂತಾರ ಸಿನಿಮಾ ಅತೀ ಹೆಚ್ಚು ಗಳಿಕೆಯ ಸಿನಿಮಾ ಆಗುವ ನಿರೀಕ್ಷೆಯಿದೆ. ಬಿಡುಗಡೆ ಆದ 10 ದಿನದಲ್ಲೇ 500 ಕೋಟಿ ಬಾಚಿರುವ ಸಿನಿಮಾ, ಸಾವಿರ ಕೋಟಿ ಕ್ಲಬ್‌ ಸೇರುವ ನಿರೀಕ್ಷೆಯಿದೆ.

Also Read: ಬಿಗ್ ಬಾಸ್ ಬೀಗದ ಹಿಂದಿದ್ಯಾ ನಟ್ ಬೋಲ್ಟ್ ರಾಜಕಾರಣ: ಡಿಕೆಶಿ ಮೇಲೆ ಆಕ್ರೋಶ ವ್ಯಕ್ತವಾಗ್ತಿರೋದ್ಹೇಕೆ?!

ಕಾಂತಾರ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ರೆ, ಮತ್ತೊಂದೆಡೆಯಲ್ಲಿ ದೈವಾರಾಧನೆಗೆ ಅಪಚಾರ ಎಸಗಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಕುರಿತು ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.

ಕಾಂತಾರ ಸಿನಿಮಾ ಸೂಪರ್‌ ಸಕ್ಸಸ್‌ ನಿಂದಾಗಿ ಚಿತ್ರತಂಡ ಪುಲ್‌ ಖುಷಿಯಾಗಿದೆ. ಕಾಂತಾರ ನಟ ರಿಷಬ್‌ ಶೆಟ್ಟಿ ಅವರಿಗೆ ಮುಂಬೈನಲ್ಲಿ ಅದ್ದೂರಿ ಸ್ವಾಗತ ದೊರೆತಿದೆ. ಮತ್ತೊಂದೆಡೆ ನಟ ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ಮದುವೆಯ ವಿಡಿಯೋ ವೈರಲ್‌ ಆಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories