Kantara Chapter 1: ಕನ್ನಡಿಗರಿಗೆ ಹೆಮ್ಮೆ ತಂದ ಕಾಂತಾರ ಅಧ್ಯಾಯ 1 : ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಗೊಳ್ಳಲಿದೆ ಸಿನಿಮಾ

Kantara Chapter 1: ಕನ್ನಡಿಗರಿಗೆ ಹೆಮ್ಮೆ ತಂದ ಕಾಂತಾರ ಅಧ್ಯಾಯ 1 : ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಗೊಳ್ಳಲಿದೆ ಸಿನಿಮಾಈಗಲಾಗಲೇ ವಿಶ್ವದಾದ್ಯಂತ ಸದ್ದು ಮಾಡ್ತಿರೋ ಕಾಂತಾರ ಚಾಪ್ಟರ್ 1 ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕರಾವಳಿ ಮಣ್ಣಿನ ದೃಶ್ಯಕಾವ್ಯ ಎಂದೇ ಪರಿಗಣಿತವಾಗ್ತಿರೋ ಕಾಂತಾರ ಚಾಫ್ಟರ್ 1 ಈಗ ರಾಷ್ಟ್ರಪತಿ ಭವನಕ್ಕೆ ಕಾಲಿಟ್ಟಿದೆ. ರಾಷ್ಟ್ರಪತಿ ಭವನದಲ್ಲಿ ಇಂದು ಕಾಂತಾರ ಚಾಪ್ಟರ್ ೧ ಪ್ರದರ್ಶನಗೊಳ್ಳಲಿದೆ ಎಂಬುದನ್ನು ರಾಷ್ಟ್ರಪತಿ ಭವನ(Rashtrapati Bhavan) ಖಚಿತಪಡಿಸಿದೆ.

ಈಗಾಗಲೇ ಕನ್ನಡ ಸಿನಿಮಾದ ಹಿರಿಮೆ ಹಾಲಿವುಡ್ ಅಂಗಳವನ್ನೂ ತಲುಪಿದೆ. ಹೀಗಿರುವಾಗಲೇ ಈಗ ಚಿತ್ರತಂಡ ಕನ್ನಡಿಗರ ಹೆಮ್ಮೆ ಹೆಚ್ಚಿಸಿದೆ. ರವಿವಾರ ಸಂಜೆ ಕಾಂತಾರ ಸಿನಿಮಾ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.‌ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಈ ವೇಳೆ ಕಾಂತಾರ ಚಾಪ್ಟರ್ ೧ ನಟ,ನಿರ್ದೇಶಕ ರಿಶಬ್ ಶೆಟ್ಟಿ ಹಾಗೂ ನಟಿ‌ ರುಕ್ಮೀಣಿ ವಸಂತ ಸೇರಿದಂತೆ ಚಿತ್ರ ತಂಡದ‌ ಕೆಲ ಸದಸ್ಯರು ಹಾಜರಿರಲಿದ್ದಾರೆ.

ಕಾಂತಾರ ಕನ್ನಡವೂ ಸೇರಿದಂತೆ ಹಿಂದಿ, ತೆಲುಗು ಭಾಷೆಯಲ್ಲೂ ತೆರೆಕಂಡಿದೆ. ಸಿನಿಮಾ ಕಳೆದ‌ ಮೂರು ದಿನಗಳ ಹಿಂದೆ ವಿಜಯದಶಮಿ ಹಬ್ಬದಂದು ತೆರೆಕಂಡಿದ್ದು ಸದ್ಯ ನೂರು ಕೋಟಿ ಕ್ಲಬ್ ಸೇರಿದೆ.

Also Read: Darshan: ಡಿ ಬಾಸ್ ಜೊತೆಗೆ ಅಭಿಮಾನಿಗಳಿಗೂ ಸಂಕಷ್ಟ: ಬೇಲ್ ಗೂ ದುಡ್ಡಿಲ್ಲ, ಜೈಲಿನಲ್ಲೂ ಕೇಳೋರಿಲ್ಲ

ಶುಕ್ರವಾರದ ವೇಳೆಗೆ ಕಾಂತಾರ ಅಧ್ಯಾಯ ೧ ಸಿನಿಮಾ ಭಾರತವೊಂದರಲ್ಲೇ 107 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇನ್ನು ಶನಿವಾರ ಈ ಗಳಿಕೆ 55 ದಾಟಿತ್ತು. ಸದ್ಯ ಈ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿದೆ. ದೇಶ ಮಾತ್ರವಲ್ಲ ವಿದೇಶದಲ್ಲೂ ಸಿನಿಮಾ ಯಶಸ್ಸು ಕಂಡಿದ್ದು, 2.5 ಮಿಲಿಯನ್ ಅಂದ್ರೇ ಅಂದಾಜು 22 ಕೋಟಿಗೂ ಅಧಿಕ ಹಣ ಗಳಿಸಿದೆ.

ಇನ್ನು ರಿಶಬ್ ಪ್ರಯತ್ನ ಹಾಗೂ ಕಾಂತಾ‌ರ ಅಧ್ಯಾಯ 1 ಸೃಷ್ಟಿಗೆ ಎಲ್ಲ ನಡ-ನಟಿಯರು, ನಿರ್ದೇಶಕರು,ರಾಜಕೀಯ ನಾಯಕರು ಸೇರಿದಂತೆ ಎಲ್ಲರಿಂದಲೂ ಮೆಚ್ಷುಗೆ ವ್ಯಕ್ತವಾಗಿದೆ. ಈ ಮಧ್ಯೆ ಗೆಲುವಿನ ಹಾದಿಯಲ್ಲಿರೋ ಕಾಂತಾರಕ್ಕೆ ಪೈರಸಿ‌ ಆತಂಕವೂ ಎದುರಾಗಿದೆ.

Also Read: ಕಾಂತಾರ ಚಾಪ್ಟರ್ 1 ಮೆಚ್ಚಿದ ‌ ಯಶ್ : ತಾಯಿಯನ್ನೇ ಮರೆತ್ರಾ ಕೆಜಿಎಫ್‌ ಸ್ಟಾರ್‌

ಈ ಬಗ್ಗೆ ಆತಂಕಗೊಂಡಿರೋ ನಟ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ, ಕಾಂತಾರ ಕೇವಲ ಒಂದು ಸಿನಿಮಾ ಅಲ್ಲ.‌ಅದು ನಮ್ಮ‌ಸಂಸ್ಕೃತಿ, ನಮ್ಮ‌ನೆಲದ ಕತೆ. ಆರಂಭದಿಂದಲೂ ಈ ಪಯಣ ನಮ್ಮ ಜೊತೆ ನಿಮ್ಮದೂ ಕೂಡ. ನಿಮ್ಮ ಅಪಾರ ಪ್ರೀತಿ, ಬೆಂಬಲವೇ ಈ ಚಿತ್ರವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಯಾವುದೇ ಚಿತ್ರದ ದೃಶ್ಯವನ್ನು ಚಿತ್ರೀಕರಿಸಬೇಡಿ ಅಥವಾ ಹಂಚಿಕೊಳ್ಳಬೇಡಿ. ಸಣ್ಣ ವಿಡಿಯೋ ತುಣುಕು ಕೂಡ ಸಿನಿಮಾದ ಮಾಯೆಯನ್ನು ಮಲೀನ ಮಾಡಲಿದೆ. ಈ ಸಂಭ್ರಮ ದೊಡ್ಡ ಪರದೆಯಲ್ಲೇ ಇರಲಿ ಎಂದಿದ್ದಾರೆ.

ಒಟ್ಟಾರೆ ಸಿನಿಮಾ ಹೊಸ ಹೊಸ ದಾಖಲೆಗಳ‌ ಜೊತೆ‌ ಮುಂದುವರೆದಿದ್ದು, ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಗೊಂಡ ಮೊದಲ ಸಿನಿಮಾ ಎಂಬ ಖ್ಯಾತಿಗೆ ಕಾಂತಾರ ಅಧ್ಯಾಯ 1 ಪ್ರದರ್ಶನಗೊಂಡಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories