Raju Talikote : ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ

Raju Talikote : ಉಡುಪಿ: ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಕನ್ನಡ ಚಲನಚಿತ್ರಗಳ ಹಾಸ್ಯ ನಟ ರಾಜು ತಾಳಿಕೋಟೆ (60 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜು ತಾಳಿಕೋಟೆ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಸಿನಿಮಾದ ಚಿತ್ರೀಕರಣಕ್ಕಾಗಿ ಉಡುಪಿಗೆ ಆಗಮಿಸಿದ್ದ ರಾಜು ತಾಳಿಕೋಟೆ ಅವರು, ತಮ್ಮ ರೂಮ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆಯಲ್ಲಿ ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರಾದ ರಾಜು ತಾಳಿಕೋಟೆ, ವೃತ್ತಿ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು.’ಖಾಸ್ಗತೇಶ್ವರ ನಾಟ್ಯ ಸಂಘ’ ಮತ್ತು ‘ಕಲಿಯುಗದ ಕುಡುಕ’ ಸೇರಿ ಹಲವು ನಾಟಕಗಳ ಮೂಲಕ ಅವರು ಉತ್ತರ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ.

ಇದನ್ನೂ ಓದಿ : ಬಾಹುಬಲಿ, ಸಲಾರ್‌ ದಾಖಲೆ ಉಡೀಸ್‌, ಕಾಂತಾರಾ ಚಾಪ್ಟರ್‌ 1 ಗಳಿಕೆ ಎಷ್ಟು ಗೊತ್ತಾ ?

ಇತ್ತೀಚಿಗಷ್ಟೇ ಧಾರವಾಡ ರಂಗಾಯಣದ ನಿರ್ದೇಶಕರಾಗಿಯೂ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಯೋಗರಾಜ್ ಭಟ್ ಅವರ ‘ಮನಸಾರೆ’ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಪಡೆಸಿದ್ದರು.

ನಂತರದಲ್ಲಿ ‘ಪಂಚರಂಗಿ’, ‘ಮೈನಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರದ ಜೊತೆಗೆ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಅವರು ಸ್ಪರ್ಧಿ ಆಗಿಯೂ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ : ಮಾರ್ಕ್‌ ಮೊದಲ ಹಾಡು ರಿಲೀಸ್..‌ ಸೈಕ್‌ ಸೈತಾನ್‌ಗೆ ಕಿಚ್ಚ ಸುದೀಪ್‌ ಭರ್ಜರಿ ಡ್ಯಾನ್ಸ್‌

ನಟ ಶೈನ್‌ ಶೆಟ್ಟಿ ಸಿನಿಮಾಕ್ಕಾಗಿ ಉಡುಪಿಗೆ ಬಂದಿದ್ದ ರಾಜು ತಾಳಿಕೋಟೆ

ರಾಜು ತಾಳಿಕೋಟೆ ಅವರ ಹಠಾತ್ ನಿಧನವು ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಂತಿಮ ವಿಧಿವಿಧಾನಗಳು ಅವರ ಹುಟ್ಟೂರಾದ ತಾಳಿಕೋಟೆಯಲ್ಲಿ ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಟ ಶೈನ್‌ ಶೆಟ್ಟಿ ಅವರ ಹೊಸ ಸಿನಿಮಾದ ಶೂಟಿಂಗ್‌ಗಾಗಿ ರಾಜು ತಾಳಿಕೋಟೆ ಅವರು ಉಡುಪಿಗೆ ಆಗಮಿಸಿದ್ದರು. ಚಿತ್ರೀಕರಣ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.

ಎರಡು ದಿನಗಳ ಕಾಲ ನಡೆದ ಸಿನಿಮಾ ಶೂಟಿಂಗ್‌ನಲ್ಲಿ ರಾಜು ತಾಳಿಕೋಟೆ ಭಾಗವಹಿಸಿದ್ದರು. ಆದರೆ ರಾತ್ರಿಯ ವೇಳೆಯಲ್ಲಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೊಸ ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲ ಎಂದು ಶೈನ್‌ ಶೆಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Raju Talikote: Veteran theatre artist Raju Talikote passes away due to heart attack in Udupi

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories