ಬಾಹುಬಲಿ, ಸಲಾರ್ ದಾಖಲೆಗಳನ್ನು ಪುಡಿ : ಕಾಂತಾರ ಚಾಪ್ಟರ್ 1 ಗಳಿಕೆ ಎಷ್ಟು ಗೊತ್ತಾ ?
Kantara Chapter 1: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ 2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಹೊಸಲೋಕಕ್ಕೆ ಕೊಂಡೊಯ್ದಿದ್ದರು. ಇದೀಗ ಪ್ರಿಕ್ವೇಲ್ ಸಿನಿಮಾದ ಮೂಲಕ ಮತ್ತೊಮ್ಮೆ ಅಬ್ಬರಿಸುತ್ತಿರುವ ರಿಷಬ್ ಬಾಕ್ಸಾಫೀಸಿನಲ್ಲಿ ಒಂದೊಂದೇ ದಾಖಲೆಗಳನ್ನು ಪುಡಿ ಮಾಡಿ ಮುನ್ನುಗ್ಗುತ್ತಿದ್ದಾರೆ.
ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಸಲಾರ್ ಹಾಗೂ ಬಾಹುಬಲಿ ಸಿನಿಮಾಗಳ ದಾಖಲೆಗಳನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದೆ.
ಆರಂಭಿಕ ವಾರದಿಂದಲೇ ಗಮನಾರ್ಹ ಗಳಿಕೆ ಆರಂಭಿಸಿದ್ದ ಕಾಂತಾರ 1 ಸಿನಿಮಾವು 337.4 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ 9 ನೇ ದಿನದಂದು ₹22.25 ಕೋಟಿ ಗಳಿಸಿದೆ.10 ನೇ ದಿನದಂದು (ಎರಡನೇ ಶನಿವಾರ) ಸಿನಿಮಾದ ಗಳಿಕೆ 75.28% ರಷ್ಟು ಭಾರಿ ಬೆಳವಣಿಗೆಯನ್ನು ಕಂಡಿದ್ದು ₹39 ಕೋಟಿ ಸಂಗ್ರಹಿಸಿತು.
Also Read: Kantara Chapter 1: 500 ಕೋಟಿ ಕ್ಲಬ್ ಸೇರಿದ ಕಾಂತಾರ, ರಿಷಬ್ ಪ್ರಗತಿ ಮದುವೆ ವಿಡಿಯೋ ವೈರಲ್
ಹಿಂದಿ ಆವೃತ್ತಿಯಿಂದ ಚಿತ್ರದ ಗಳಿಕೆಗೆ ಅತೀ ಹೆಚ್ಚು ಕೊಡುಗೆ (₹14.25 ಕೋಟಿ) ಹರಿದು ಬಂದಿದೆ. ಎರಡನೇ ಭಾನುವಾರ ಈ ಸಿನಿಮಾ ₹36.94 ಕೋಟಿ ಸಂಗ್ರಹಿಸಿತು, ಈ ಮೂಲಕ ಭಾರತದಲ್ಲಿ ಈ ಸಿನಿಮಾದ ಗಳಿಕೆ ₹435.59 ಕೋಟಿಗೆ ತಲುಪಿದೆ.
ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಆಕ್ಷನ್ ಥ್ರಿಲ್ಲರ್ ಸಲಾರ್: ಪಾರ್ಟ್ 1 – ಸೀಸ್ಫೈರ್ ಸಿನಿಮಾ ಬಾಕ್ಸಾಫೀಸಿನಲ್ಲಿ ₹406.45 ಕೋಟಿ ಗಳಿಸಿತ್ತು. ಎಸ್ಎಸ್ ರಾಜಮೌಳಿ ಗರಡಿಯಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ಬಾಹುಬಲಿ-ದಿ ಬಿಗಿನಿಂಗ್ ಭಾರತದಲ್ಲಿ ₹420 ಕೋಟಿ ಗಳಿಸಿತ್ತು. ಇದೀಗ ಈ ಎರಡೂ ಹಿಟ್ ಸಿನಿಮಾಗಳ ದಾಖಲೆಯನ್ನು ಕಾಂತಾರ ಪುಡಿ ಮಾಡಿದೆ.
ಬಾಲಿವುಡ್ನಲ್ಲಿ ತೆರೆಕಂಡಿರುವ ಜಾನ್ವಿ ಕಪೂರ್, ವರುಣ್ ಧವನ್, ರೋಹಿತ್ ಸರಾಫ್ ಹಾಗೂ ಸನ್ಯಾ ಮಲ್ಹೋತ್ರಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಸಿನಿಮಾವು ಕಾಂತಾರ ಅಬ್ಬರದ ಮುಂದೆ ಥಂಡಾ ಹೊಡೆದಿದೆ. ಈ ಸಿನಿಮಾ ಸಂಪೂರ್ಣ ಭಾರತದಲ್ಲಿ 50 ಕೋಟಿ ರೂಪಾಯಿ ಗಳಿಸುವಲ್ಲಿಯೂ ವಿಫಲವಾಗಿದೆ.
Also Read: Bigg Boss: ಬಿಗ್ಬಾಸ್ ಮನೆಗೆ ಬೀಗಕ್ಕೂ ನನಗೂ ಸಂಬಂಧವಿಲ್ಲ ಎಂದ ಡಿಕೆ ಶಿವಕುಮಾರ್



