ದಿ ಡೆವಿಲ್​​ ನೆಗೆಟಿವ್​ ರಿವ್ಯೂ ವಿರುದ್ಧ ಚಿತ್ರತಂಡದ ಸಮರ : ರೇಟಿಂಗ್​ ನೀಡುವ ಪ್ರಕ್ರಿಯೆಯೇ ಬಂದ್​

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತೊಮ್ಮೆ ಬಾಕ್ಸಾಫೀಸಿನ ಸುಲ್ತಾನ ಎನಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ದರ್ಶನ್​ ಅಭಿನಯದ ಬಹುನಿರೀಕ್ಷಿತ ದಿ ಡೆವಿಲ್​ ಸಿನಿಮಾ ಮೊದಲ ದಿನದ ಪ್ರದರ್ಶನ ಅದ್ಧೂರಿಯಾಗಿ ನಡೆದಿದ್ದು ಕೋಟಿ ಕೋಟಿ ಹಣ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಎಲ್ಲದರ ನಡುವೆ ಸಿನಿಮಾ ಬಗ್ಗೆ ನೆಗೆಟಿವ್​ ರಿವ್ಯೂ ತಡೆಗಟ್ಟಲು ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದೆ.
ಸಾಮಾನ್ಯವಾಗಿ ಬುಕ್​ ಮೈ ಶೋನಲ್ಲಿ ಸಿನಿಮಾ ಟಿಕೆಟ್​ ಬುಕ್​ ಮಾಡಿದವರಿಗೆ ಚಿತ್ರದ ಬಗ್ಗೆ ರಿವ್ಯೂ ಹಾಗೂ ರೇಟಿಂಗ್​ ನೀಡಲು ಅವಕಾಶ ಇರುತ್ತದೆ. ಇದೇ ರೇಟಿಂಗ್​ ಆಧರಿಸಿಯೇ ಅನೇಕರು ಸಿನಿಮಾ ನೋಡಬೇಕೋ ಬೇಡ್ವೋ ಅಂತಾ ಡಿಸೈಡ್​ ಮಾಡ್ತಾರೆ. ಆದರೆ ಇದೇ ಮೊದಲ ಬಾರಿಗೆ ಬುಕ್​ ಮೈ ಶೋನಲ್ಲಿ ದಿ ಡೆವಿಲ್​ ಸಿನಿಮಾಗೆ ರಿವ್ಯೂ ಕೊಡಲು ಸಾಧ್ಯವಾಗುತ್ತಿಲ್ಲ.

ದಿ ಡೆವಿಲ್​ ಸಿನಿಮಾಗೆ ನೆಗೆಟಿವ್​ ರಿವ್ಯೂ ಕೊಡಬೇಕು ಎಂಬ ದುರುದ್ದೇಶದಿಂದಲೇ ಟಿಕೆಟ್​ ಬುಕ್​ ಮಾಡುವವರು ಅನೇಕರಿದ್ದಾರೆ. ಹೀಗಾಗಿ ಕೋರ್ಟ್​ನಿಂದ ಸ್ಟೇ ತರುವ ಮೂಲಕ ಬುಕ್​ ಮೈ ಶೋನಲ್ಲಿ ರೇಟಿಂಗ್​ ಹಾಗೂ ರಿವ್ಯೂ ಆಯ್ಕೆಯನ್ನು ಸ್ಥಗಿತಗೊಳಿಸಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಕಮ್ಮಿ ರೇಟಿಂಗ್​ ಇದ್ದಾಗ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗುತ್ತದೆ, ಇದರಿಂದ ಸಿನಿಮಾ ಕಲೆಕ್ಷನ್​ ಮೇಲೆ ನೇರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ: ಹೇಗಿದೆ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ : ನಾಯಕ – ವಿಲ್ಲನ್ ಪಾತ್ರಗಳಲ್ಲಿ ಡಿ ಬಾಸ್ ಅಭಿನಯ

ಬುಕ್ ಮೈ ಶೋ ವೆಬ್​ಸೈಟ್​ನಲ್ಲಿ ದಿ ಡೆವಿಲ್​ ಸಿನಿಮಾದ ರೇಟಿಂಗ್​ ಜಾಗದಲ್ಲಿ ‘‘ ಕೋರ್ಟ್​ನ ಆದೇಶದಂತೆ ರೇಟಿಂಗ್​ ಹಾಗೂ ವಿಮರ್ಷೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ’’ ಎಂದು ಬರೆಯಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದಿ ಡೆವಿಲ್​ ಸಿನಿಮಾ ಚಿತ್ರತಂಡ ಈ ಹೊಸ ಪ್ರಯತ್ನ ಮಾಡಿದೆ. ಮುಂದಿನ ದಿನಗಳಲ್ಲಿ ಬೇರೆ ಚಿತ್ರತಂಡಗಳು ಕೂಡ ಇದೇ ಹಾದಿಯನ್ನು ಅನುಸರಿಸುವ ಮೂಲಕ ನೆಗೆಟಿವ್​ ರಿವ್ಯೂಗಳಿಂದ ಪಾರಾಗಲು ಪ್ಲಾನ್ ಮಾಡಿದ್ರೂ ಆಶ್ಚರ್ಯವಿಲ್ಲ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories