ಐಪಿಎಲ್ ಆರಂಭಕ್ಕೂ ಮೊದಲೇ ಆರ್‌ಸಿಬಿ ಅಭಿಮಾನಿಗಳಿಗೆ ಮೆಟ್ರೋ ಗುಡ್‌ನ್ಯೂಸ್

IPL 2026 metro good news : ಬೆಂಗಳೂರು : ಐಪಿಎಲ್ ವಿಜಯೋತ್ಸವದಿಂದಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಅನಿಶ್ಚಿತತೆಯಿಂದ ಕೂಡಿತ್ತು. ಕೊನೆಗೂ ರಾಜ್ಯ ಸರಕಾರ ಐಪಿಎಲ್ ಆರಂಭಕ್ಕೆ ಅನುಮತಿ ನೀಡಿದೆ. ಐಪಿಎಲ್ ಉದ್ಘಾಟನಾ ಪಂದ್ಯಕ್ಕೂ ಮೊದಲೇ ನಮ್ಮ ಮೆಟ್ರೋ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದೆ.
ಮಾರ್ಚ್ 28ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಕೇವಲ 10 ನಿಮಿಷಗಳಲ್ಲೇ ಖಾಲಿಯಾಗಿದೆ. ಆ ಮಟ್ಟಿಗೆ ಉದ್ಘಾಟನಾ ಪಂದ್ಯ ತನ್ನ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದೆ. ಆರ್‌ಸಿಬಿ ಹಾಗೂ ಸನ್ರೈರಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆಯೇ ಹೆಚ್ಚಿರಲಿದೆ.
ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಆಗಮಿಸುವ ವಾಹನಗಳ ನಿಯಂತ್ರಣ ಹಾಗೂ ಜನದಟ್ಟಣೆ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ನಗರ ಪೊಲೀಸರು ಅನೇಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ವೇಳೆ ಬಿಎಂಆರ್ಸಿಲ್ ಕೂಡ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದೆ.
ಇದನ್ನೂ ಓದಿ : IPL 2026 : ಆರ್‌ಸಿಬಿ ಅಭಿಮಾನಿಗಳ ಸ್ಮರಣಾರ್ಥ ಸ್ಮಾರಕ ನಿರ್ಮಾಣ : ವಿಘ್ನ ನಿವಾರಣೆಗೆ ಚಿನ್ನಸ್ವಾಮಿಯಲ್ಲಿ ಹೋಮ-ಹವನ
ಮಾರ್ಚ್ 28ರಂದು ಮೆಟ್ರೋ ಸೇವೆಯು ಮಧ್ಯರಾತ್ರಿ 2 ಗಂಟೆಯವರೆಗೂ ಇರಲಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ. ಪಂದ್ಯ ವೀಕ್ಷಣೆಯ ಬಳಿಕ ಪ್ರೇಕ್ಷಕರು ಸುಗಮವಾಗಿ ಮನೆ ತಲುಪಬೇಕು ಎಂಬ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ವೈಟ್ಫೀಲ್ಡ್ ರಾತ್ರಿ 12.30, ಚೆಲ್ಲಘಟ್ಟ: ರಾತ್ರಿ 12.45ಕ್ಕೆ, ರೇಷ್ಮೆ ಸಂಸ್ಥೆ ಮತ್ತು ಮಾದಾವರ: ರಾತ್ರಿ 12.45ಕ್ಕೆ, ಬೊಮ್ಮಸಂದ್ರ: ರಾತ್ರಿ 01.00ಕ್ಕೆ ಹಾಗೂ ಆರ್.ವಿ. ರಸ್ತೆಗೆ ಮುಂಜಾನೆ 02.00 ಗಂಟೆಯವರೆಗೆ ಕೊನೆಯ ಮೆಟ್ರೋ ಸೇವೆ ಇರಲಿದೆ.
ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಕಾರಣ ಅಂದು ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು ಪಂದ್ಯದ ದಿನದಂದು ವಾಹನ ದಟ್ಟಣೆ ಭಾರೀ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ.
ಇದನ್ನೂ ಓದಿ : ಐಪಿಎಲ್ನ ಶ್ರೀಮಂತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ: ದಾಖಲೆಯ ಮೊತ್ತಕ್ಕೆ ಮಾರಾಟ
ಪಂದ್ಯಗಳ ದಿನದಂದು ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂಧಿಸಲಾಗಿದ್ದು ಇದರ ಜೊತೆಯಲ್ಲಿ ಇನ್ನೂ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ipl 2026 metro good news for rcb fans



