ಕೇವಲ 14ನೇ ವಯಸ್ಸಿಗೆ ರಣಜಿ ಉಪನಾಯಕನಾದ ವೈಭವ್ ಸೂರ್ಯವಂಶಿ
ಭಾರತದ ದೇಶಿಯ ಕ್ರಿಕೆಟ್‌ನಲ್ಲಿ ಐಪಿಎಲ್ ಹೀರೋ ವೈಭವ್ ಸೂರ್ಯವಂಶಿ ಹೊಸ ದಾಖಲೆ ಬರೆದಿದ್ದಾರೆ. ಕೇವಲ 14ಕ್ಕೆ ವರ್ಷಕ್ಕೆ ಬಿಹಾರ ರಣಜಿ ತಂಡದ ಉಪನಾಯಕ ಆಗುವ ಮೂಲಕ ಅತ್ಯಂತ ಕಡಿಮೆ ವಯಸ್ಸಿನ ರಣಜಿ ತಂಡದ ನಾಯಕ ಎನಿಸಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಪೋಟಕ ಆಟದ ಮೂಲಕ ಮನೆಮಾತಾಗಿರುವ ವೈಭವ್ ಸೂರ್ಯವಂಶಿ, ಇದೀಗ ದೇಶೀಯ ಕ್ರಿಕೆಟ್ ನಲ್ಲಿಯೂ ಕಮಾಲ್ ಮಾಡೋದಕ್ಕೆ ರೆಡಿ ಆಗಿದ್ದಾರೆ.
2025-26ನೇ ಸಾಲಿನ ಬಿಹಾರ ರಣಜಿ ತಂಡವನ್ನು ಪ್ರಕಟಿಸಲಾಗಿದ್ದು, ಬಿಹಾರ ತಂಡದ ಉಪನಾಯಕನಾಗಿ ವೈಭವ್ ಸೂರ್ಯವಂಶಿಯನ್ನು ನೇಮಕ ಮಾಡಲಾಗಿದೆ. ಕೇವಲ 14 ವರ್ಷದ ಬಾಲಕ ರಣಜಿ ತಂಡ ಉಪನಾಯಕ ಆಗ್ತಾ ಇರೋದು ಇದೇ ಮೊದಲು.
ಐಪಿಎಲ್ ಮಾತ್ರವಲ್ಲದೇ ಭಾರತ ಅಂಡರ್ 19 ತಂಡದಲ್ಲಿ ನೀಡಿದ ಅದ್ಬುತ ಪ್ರದರ್ಶನದಿಂದಾಗಿ ವೈಭವ್ ಸೂರ್ಯವಂಶಿ ಅವರಿಗೆ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಉನ್ನತ ಗೌರವ ದಕ್ಕಿದೆ.
ಇದುವರೆಗೆ 10 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ವೈಭವ್ ಸೂರ್ಯವಂಶಿ ಗಳಿಸಿದ್ದು ಕೇವಲ 100 ರನ್. ಆದರೆ ಐಪಿಎಲ್, ಅಂಡರ್ 19 ವಿಶ್ವಕಪ್ ಬೆನ್ನಲ್ಲೇ ದೇಶೀಯ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.
ಇದೀಗ ಸೂರ್ಯವಂಶಿ ಉನ್ನತ ಫಾರ್ಮ್‌ನಲ್ಲಿದ್ದು, ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯೂ ಇದೆ.
Also Read: IPL 2026 – Virat Kohli : ಆರ್‌ಬಿಸಿಗೆ ವಿರಾಟ್ ಕೊಹ್ಲಿ ಗುಡ್ ಬೈ..!
12 ವರ್ಷಕ್ಕೆ ರಣಜಿ ತಂಡಕ್ಕೆ ಸೇರ್ಪಡೆ..!
ಕೇವಲ ಸೂರ್ಯವಂಶಿ 12 ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲಾ ಅತ್ಯಂತ ಕಿರಿಯ ಐಪಿಎಲ್ ಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
ಅಕ್ಟೋಬರ್ 15 ರಿಂದ ಇಲ್ಲಿನ ಮೊಯಿನ್-ಉಲ್-ಹಕ್ ಕ್ರೀಡಾಂಗಣದಲ್ಲಿ ನಡೆಯುವ ಪ್ಲೇಟ್ ಲೀಗ್ ಸೀಸನ್-ಓಪನರ್ ಪಂದ್ಯದಲ್ಲಿ ಬಿಹಾರ ತಂಡವು ಅರುಣಾಚಲ ಪ್ರದೇಶ ತಂಡವನ್ನು ಎದುರಿಸಲಿದೆ. ಭಾನುವಾರ ತಡರಾತ್ರಿ ಬಿಹಾರ ಕ್ರಿಕೆಟ್ ಅಸೋಸಿಯೇಷನ್ ತಂಡವನ್ನು ಘೋಷಿಸಿದೆ.
ಹಿಂದಿನ ರಣಜಿ ಋತುವಿನಲ್ಲಿ ಒಂದೇ ಒಂದು ಗೆಲುವು ದಾಖಲಿಸಲು ವಿಫಲವಾದ ನಂತರ ಬಿಹಾರವನ್ನು ಪ್ಲೇಟ್ ಲೀಗ್‌ಗೆ ಕೆಳಗಿಳಿಸಲಾಯಿತು. 2023-24 ಋತುವಿನಲ್ಲಿ ಸೂರ್ಯವಂಶಿ 12 ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು.
ಐಪಿಎಲ್‌ನಲ್ಲಿ ಎರಡನೇ ವೇಗದ ಶತಕ ಸಿಡಿದ ಸೂರ್ಯವಂಶಿ
ನಂತರ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಪ್ಪಂದವನ್ನು ಪಡೆದ ಅತ್ಯಂತ ಕಿರಿಯ (13) ಆಟಗಾರರಾದರು ಮತ್ತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಭಾರತದ ಅಂಡರ್-19 ಪ್ರವಾಸಗಳ ಭಾಗವಾಗಿದ್ದರು.
ಈ ವರ್ಷದ ಋತುವಿಗೆ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ ತಂಡದಿಂದ ಆಯ್ಕೆಯಾದಾಗ ಸೂರ್ಯವಂಶಿ 13 ನೇ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ ಅತ್ಯಂತ ಕಿರಿಯ ಆಟಗಾರರಾದರು.
ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಆರ್ ಪರ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ, ಎಡಗೈ ಬ್ಯಾಟ್ಸ್‌ಮನ್ ಟಿ 20 ಗಳಲ್ಲಿ ಶತಕ ಗಳಿಸಿದ ಪುರುಷರ ಕ್ರಿಕೆಟ್‌ನಲ್ಲಿ (14) ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ಸೃಷ್ಟಿಸಿದರು.
ಮುಂದಿನ ವರ್ಷದ ಆರಂಭದಲ್ಲಿ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್‌ಗಾಗಿ ಭಾರತದ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಸೂರ್ಯವಂಶಿ ಬಿಹಾರ ಪರ ಪೂರ್ಣ ಋತುವನ್ನು ಆಡುವ ಸಾಧ್ಯತೆಯಿಲ್ಲ.
ಬಿಹಾರ ರಣಜಿ ತಂಡ: ಪಿಯೂಷ್ ಕುಮಾರ್ ಸಿಂಗ್, ಭಾಷ್ಕರ್ ದುಬೆ, ಸಕಿಬುಲ್ ಗನಿ (ನಾಯಕ), ವೈಭವ್ ಸೂರ್ಯವಂಶಿ (ಉಪ ನಾಯಕ), ಅರ್ನವ್ ಕಿಶೋರ್, ಆಯುಷ್ ಲೋಹರುಕ, ಬಿಪಿನ್ ಸೌರಭ್, ಅಮೋದ್ ಯಾದವ್, ನವಾಜ್ ಖಾನ್, ಸಾಕಿಬ್ ಹುಸೇನ್, ರಾಘವೇಂದ್ರ ಪ್ರತಾಪ್ ಸಿಂಗ್, ಸಚಿನ್ ಕುಮಾರ್ ಸಿಂಗ್, ಹಿಮಾನ್ಸ್ ಕುಮಾರ್, ಹಿಮಾನ್ಸ್.
just 14 Years Vaibhav Suryavanshi named vice-captain of Bihar Ranji Trophy team



