ಐಪಿಎಲ್ 2026: ಆರ್‌ಸಿಬಿಗೆ ಅಯ್ಯರ್‌, ಲಿವಿಂಗ್‌ ಸ್ಟೋನ್‌ ಔಟ್‌

RCB Trade Venkatesh Iyer : ಐಪಿಎಲ್ 2025ರ ಸೀಸನ್ ಮುಗಿದ ಬೆನ್ನಲ್ಲೇ ಐಪಿಎಲ್ 2026ಕ್ಕೆ ತಂಡಗಳು ಸಿದ್ದವಾಗುತ್ತಿವೆ. ಅದ್ರಲ್ಲೂ ಐಪಿಎಲ್‌ ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡಕ್ಕೆ ಮತ್ತೊಬ್ಬ ಸ್ಟಾರ್‌ ಆಟಗಾರ ಸೇರ್ಪಡೆ ಆಗೋದು ಖಚಿತ ಎನ್ನಲಾಗುತ್ತಿದೆ.

ಐಪಿಎಲ್‌ 2026ಕ್ಕೆ ತಂಡಗಳು ಟ್ರೇಡಿಂಗ್‌ ನಡೆಸುತ್ತಿದ್ದು, ಆಟಗಾರರನ್ನು ಕೈಬಿಟ್ಟು ಹೊಸ ಆಟಗಾರರ ಸೇರ್ಪಡೆ, ಜೊತೆಗೆ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರ ವರ್ಗಾವಣೆಯೂ ಆರಂಭಗೊಂಡಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹಲವು ಆಟಗಾರರ ಖರೀದಿಗೆ ಮುಂದಾಗುತ್ತಿದ್ದು, ಸ್ಟಾರ್‌ ಆಟಗಾರರಿಗೆ ಕೋಕ್‌ ಕೊಡ್ತಾ ಇದೆ. ಇದೀಗ ಕೋಲ್ಕತ್ತಾ ತಂಡದ ಸ್ಟಾರ್‌ ಆಟಗಾರನಿಗೆ ಆರ್‌ಸಿಬಿ ಗಾಳ ಹಾಕಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಆರ್‌ಸಿಬಿ ತಂಡವನ್ನು ಸೇರ್ಪಡೆ ಆಗುವ ಸಾಧ್ಯತೆ ಅಧಿಕವಾಗಿದೆ.

ಇದನ್ನೂ ಓದಿ : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಚ್ಚೇಧನ

ಕೋಲ್ಕತಾ ತಂಡವನ್ನು ಹಲವು ವರ್ಷಗಳಿಂದಲೂ ಪ್ರತಿನಿಧಿಸುತ್ತಿದ್ದಾರೆ. ಆರಂಬಿಕ ಆಟಗಾರನಾಗಿ ಈಗಾಗಲೇ ತಾಕತ್ತು ತೋರಿಸಿದ್ದಾರೆ.

ಒಂದೊಮ್ಮೆ ವೆಂಕಟೇಶ್‌ ಅಯ್ಯರ್‌ ಆರ್‌ಸಿಬಿ ಸೇರ್ಪಡೆ ಆಗೋದಾದ್ರೆ ಯಾವ ಆಟಗಾರ ತಂಡದಿಂದ ಹೊರಗೆ ಉಳಿಯಲಿದ್ದಾರೆ ಅನ್ನೋ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ಆರ್‌ಸಿಬಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿದೆ.

RCB Trade Venkatesh Iyer : ವೆಂಕಟೇಶ್ ಅಯ್ಯರ್ ಆರ್‌ಸಿಬಿಗೆ ?

ಕೆಕೆಆರ್ ತಂಡ 2025ರ ಐಪಿಎಲ್ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ ₹23.75 ಕೋಟಿ ನೀಡಿ ಖರೀದಿಸಿತ್ತು. ಆದರೆ, 2025ರ ಸೀಸನ್‌ನಲ್ಲಿ ಅಯ್ಯರ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

11 ಪಂದ್ಯಗಳಲ್ಲಿ ಕೇವಲ 142 ರನ್ ಗಳಿಸಿದ್ದರು. ಅವರ ಕಳಪೆ ಫಾರ್ಮ್‌ನಿಂದಾಗಿ ಕೆಕೆಆರ್ ತಂಡ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆರ್‌ಸಿಬಿ ತಂಡವು ವೆಂಕಟೇಶ್ ಅಯ್ಯರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ತೀವ್ರ ಆಸಕ್ತಿ ತೋರಿಸಿದೆ. 2025ರ ಹರಾಜಿನಲ್ಲಿಯೂ ಆರ್‌ಸಿಬಿ ಅಯ್ಯರ್ ಅವರನ್ನು ಖರೀದಿಸಲು ಪ್ರಯತ್ನಿಸಿತ್ತು.

ಇದನ್ನೂ ಓದಿ : ಭಾರತ ಏಕದಿನ ಕ್ರಿಕೆಟ್‌ ತಂಡಕ್ಕೆ ಕೆಎಲ್‌ ರಾಹುಲ್‌ ನಾಯಕ

ಆದರೆ ಕೆಕೆಆರ್ ಹೆಚ್ಚಿನ ಮೊತ್ತ ನೀಡಿ ಅವರನ್ನು ಉಳಿಸಿಕೊಂಡಿತ್ತು. ಆರ್‌ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಅವರು ಅಯ್ಯರ್ ತಮ್ಮ ವ್ಯವಸ್ಥೆಯಲ್ಲಿ ಉತ್ತಮ ಪ್ರದರ್ಶನ ನೀಡಬಹುದೆಂದು ಹೇಳಿರುವುದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಆರ್‌ಸಿಬಿ ತಂಡ ಮಾತ್ರವಲ್ಲ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಕೂಡ ಅಯ್ಯರ್ ಮೇಲೆ ಕಣ್ಣಿಟ್ಟಿದೆ ಎಂಬ ವರದಿಗಳಿವೆ.

RCB Trade Venkatesh Iyer : ಲಿಯಾಮ್ ಲಿವಿಂಗ್‌ಸ್ಟೋನ್ ಹೊರಕ್ಕೆ ?

ಆರ್‌ಸಿಬಿ ತಂಡ 2025ರ ಐಪಿಎಲ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ₹8.75 ಕೋಟಿ ನೀಡಿ ಖರೀದಿಸಿತ್ತು. ಆದರೆ, ಲಿವಿಂಗ್‌ಸ್ಟೋನ್ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

10 ಪಂದ್ಯಗಳಲ್ಲಿ ಕೇವಲ 112 ರನ್ ಗಳಿಸಿದ್ದು, ಬೌಲಿಂಗ್‌ನಲ್ಲಿ ಕೇವಲ 2 ವಿಕೆಟ್ ಪಡೆದಿದ್ದಾರೆ. ಅವರ ನಿರಂತರ ಪ್ರದರ್ಶನ ಇಲ್ಲದಿರುವುದು ಮತ್ತು ಹೆಚ್ಚಿನ ಬೆಲೆಗೆ ಖರೀದಿಸಿರುವುದು ಆರ್‌ಸಿಬಿ ತಂಡ ಅವರನ್ನು ಕೈಬಿಡಲು ಪ್ರಮುಖ ಕಾರಣ ಆಗಬಹುದು.

ಕೆಲವು ವರದಿಗಳ ಪ್ರಕಾರ, ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ವೆಂಕಟೇಶ್ ಅಯ್ಯರ್ ಬದಲಿಗೆ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನೇ ಟ್ರೇಡ್ ಮಾಡುವ ಸಾಧ್ಯತೆ ಇದೆ. ಈ ವಿನಿಮಯವು ಎರಡೂ ತಂಡಗಳಿಗೆ ಲಾಭದಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.

RCB Trade Venkatesh Iyer : ಆಟಗಾರರ ಟ್ರೇಡಿಂಗ್‌ ನಿಯಮಗಳೇನು ?

ಐಪಿಎಲ್ ಟ್ರೇಡಿಂಗ್ ನಲ್ಲಿ ಆಟಗಾರರನ್ನು ಹಣದ ಬದಲಾಗಿ ಅಥವಾ ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ತಂಡಗಳಿಗೆ ಅವಕಾಶ ನೀಡುತ್ತದೆ.

ಆಟಗಾರರ ಒಪ್ಪಿಗೆಯಿಲ್ಲದೆ ಯಾವುದೇ ಟ್ರೇಡ್ ನಡೆಯುವುದಿಲ್ಲ. ಈ ಟ್ರೇಡಿಂಗ್ ವಿಂಡೋ ಮೂರು ಹಂತಗಳಲ್ಲಿ ನಡೆಯುತ್ತದೆ:

ಹರಾಜಿಗೆ ಮೊದಲು (Post-Season to Pre-Auction): ಜೂನ್ – ಜುಲೈ 2025. ತಂಡಗಳು ತಮ್ಮ ಪ್ರದರ್ಶನಗಳನ್ನು ವಿಶ್ಲೇಷಿಸಿ, ಆಟಗಾರರನ್ನು ಉಳಿಸಿಕೊಳ್ಳಲು ಅಥವಾ ಟ್ರೇಡ್ ಮಾಡಲು ನಿರ್ಧರಿಸುತ್ತವೆ.

ಹರಾಜಿನ ನಂತರ (Post-Auction to Pre-Season): ಡಿಸೆಂಬರ್ 2025 – ಜನವರಿ 2026. ಹರಾಜಿನ ನಂತರ ಅಂತಿಮ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶ.

ಪಂದ್ಯಾವಳಿಗೆ ಮೊದಲು (Pre-Tournament Trade Window): ಫೆಬ್ರವರಿ – ಮಾರ್ಚ್ 2026. ಸೀಸನ್ ಪ್ರಾರಂಭವಾಗುವ ಮೊದಲು ಕೊನೆಯ ಅವಕಾಶ.

ಆರ್‌ಸಿಬಿ ತಂಡ ಈ ಬಾರಿಯ ಟ್ರೇಡಿಂಗ್ ವಿಂಡೋದಲ್ಲಿ ಹೊಸ ತಂತ್ರಗಳನ್ನು ರೂಪಿಸುವ ಮೂಲಕ ತಂಡವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ವೆಂಕಟೇಶ್ ಅಯ್ಯರ್ ಆಗಮನದಿಂದ ತಂಡಕ್ಕೆ ಎಡಗೈ ಬ್ಯಾಟಿಂಗ್ ಮತ್ತು ಮಧ್ಯಮ ವೇಗದ ಬೌಲಿಂಗ್ ಆಯ್ಕೆ ದೊರೆಯಲಿದ್ದು, ತಂಡದ ಸಮತೋಲನ ಹೆಚ್ಚಾಗಬಹುದು.

RCB Trade for IPL 2026 Venkatesh Iyer enter Liam Livingstone out in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories