7 ನಿಮಿಷದಲ್ಲಿ ಕಣ್ಣೇದುರಲ್ಲೇ ಸಿದ್ದವಾಗುತ್ತೆ ಕೇಕ್ …! ಕುಂದಾಪುರಕ್ಕೆ ಬಂದಿದೆ 7th Heaven

ಕುಂದಾಪುರ : ಸಾಮಾನ್ಯವಾಗಿ ಕೇಕ್ ಬೇಕು ಅಂದ್ರೆ ಕನಿಷ್ಠ ಒಂದು ದಿನದ ಮೊದಲೇ ಬುಕ್ ಮಾಡಿರಬೇಕು. ಅದ್ರಲ್ಲೂ ನಮಗಿಷ್ಟದ ಕೇಕ್ ಪಡೆಯಬೇಕೆಂದ್ರೆ ಹರಸಾಹಸವನ್ನೇ ಪಡಬೇಕು. ಆದ್ರೆ ಇನ್ಮುಂದೆ ಕೇಕ್ ಬೇಕು ಅಂದ್ರೆ ದಿನಗಟ್ಟಲೆ ಕಾಯೋ ಅಗತ್ಯವಿಲ್ಲ. ಅದ್ರಲ್ಲೂ ನಿಮ್ಮ ಕಣ್ಣೇದುರಲ್ಲೇ ನಿಮ್ಮಿಷ್ಟದ ಕೇಕ್ ಸಿದ್ದವಾಗುತ್ತೆ. ಅದೂ ಕೇವಲ 7 ನಿಮಿಷದಲ್ಲಿ.

ಇದೇನಪ್ಪಾ ಅಂತಾ ಅಚ್ಚರಿ ಪಡಬೇಡಿ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿರುವ 7th Heaven ಇದೀಗ ಕುಂದಾಪುರದ ಜನತೆಗೆ ಗುಡ್ ನ್ಯೂಸ್ ಕೊಡಲು ಸಜ್ಜಾಗಿ ನಿಂತಿದೆ. ಗುಣಮಟ್ಟದ ಕೇಕ್ ಖರೀದಿಸಲು ದೂರದೂರುಗಳಿಗೆ ತೆರಳೋ ಅಗತ್ಯವೇ ಇಲ್ಲಾ. ಅಂತರಾಷ್ಟ್ರೀಯ ಗುಣಮಟ್ಟದ ಕೇಕ್ ಗಳು ಇನ್ಮುಂದೆ ಕುಂದಾಪುರದಲ್ಲಿ ಲಭ್ಯವಾಗಲಿದೆ.

ಕೇಕ್ ಅಂದ್ರೇನೇ ಸಾಕು ಅದೇನೋ ಖುಷಿ. ಮಕ್ಕಳಿಂದ ಹಿಡಿದು ವೃದ್ದರವರೆಗೆ ಕೇಕ್ ಇಷ್ಟ ಪಡ್ತಾರೆ. ಬಗೆ ಬಗೆಯ ಕೇಕ್ ಗಳನ್ನು ಸವಿದು ಸಂಭ್ರಮದ ಕ್ಷಣಗಳನ್ನು ಮೆಲುಕು ಹಾಕ್ತಾರೆ.

ಇತ್ತೀಚಿನ ವರ್ಷಗಳಲ್ಲಂತೂ ಕೇಕ್ ತಯಾರಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದಿದೆ. ಕೇವಲ ಬಾಯಿಗೆ ರುಚಿಸೋದಷ್ಟೇ ಅಲ್ಲಾ ಕೇಕ್ ಗಳನ್ನು ನೋಡುತ್ತಿದ್ರೆ ಕಣ್ಣಿಗೆ ಪರಮಾನಂದವನ್ನು ನೀಡುತ್ತಿವೆ. ಇಂತಹ ಕೇಕ್ ತಯಾರಿಕೆಯಲ್ಲಿ ಅಗ್ರಮಾನ್ಯ ಸ್ಥಾನದಲ್ಲಿ ನಿಂತಿದೆ 7th Heaven ಸಂಸ್ಥೆ.

ದೇಶದ ಸುಮಾರು 21 ರಾಜ್ಯಗಳಲ್ಲಿ ಈಗಾಗಲೇ ತನ್ನ ಶಾಖೆಯನ್ನು ಹೊಂದಿರುವ 7th Heaven ವಿಶ್ವದ ಗುಣಮಟ್ಟದ ಕೇಕ್ ತಯಾರಿಕಾ ಸಂಸ್ಥೆಗಳಲ್ಲೊಂದು. ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಹಲವು ಬಗೆಯ ಕೇಕ್ ಗಳನ್ನು ಕೇವಲ 7 ನಿಮಿಷ ಅವಧಿಯಲ್ಲಿ ತಯಾರಿಸಿ ನೀಡಲಾಗುತ್ತಿದೆ. ಅದೂ ಗ್ರಾಹಕರ ಕಣ್ಣೇದುರಲ್ಲೇ ಸಿದ್ದವಾಗುತ್ತಿದೆ. Cakes, Dessert, Mug cakes, Chocolates,Macarons ಸೇರಿದಂತೆ ಹಲವು ವಿನ್ಯಾಸದ ಕೇಕ್ ಗಳನ್ನು 7th Heaven ಸಿದ್ದಪಡಿಸುತ್ತಿದೆ.

ಕುಂದಾಪುರದ ಹೊಸ ಬಸ್ ನಿಲ್ದಾಣದ ಬಳಿಯ ಅನಂತ ಪದ್ಮನಾಭ ಚೇಂಬರ್ಸ್ ನಲ್ಲಿ 7th Heaven ತಲೆ ಎತ್ತಲಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೂ ಕೇಕ್ ಶೋರೂಂ ಕಾರ್ಯನಿರ್ವಹಿಲಿದ್ದು, ಗ್ರಾಹಕರ ಸೇವೆ ಲಭ್ಯವಿರಲಿದೆ. ಈಗಾಗಲೇ ಕೇಕ್ ಶೋ ರೂಂ ರೆಡಿಯಾಗಿದ್ದು, ಉದ್ಘಾಟನೆಗೆ ಸಿದ್ದಗೊಂಡಿದೆ. ನಿಮಗೂ ಕೇಕ್ ತಿನ್ನಬೇಕು ಅನ್ನೋ ಆಸೆಯಿದ್ರೆ 7th Heavenಗೆ ಭೇಟಿ ಕೊಟ್ಟು, ಕಣ್ಣೇದುರ ಲ್ಲೇ ಸಿದ್ದವಾಗೋ ಕೇಕ್ ನ ರುಚಿಯನ್ನು ಒಮ್ಮೆಯಾದ್ರೂ ಸವಿದು ನೋಡಿ.

Comments are closed.