ವಿದೇಶಿ ಅಡುಗೆ ಶೋ ನಲ್ಲಿ ಭಾರತೀಯ ಖಾನಾವಳಿ – ಬಾಲಕನ ಕೈರುಚಿಗೆ ಫಿದಾ ಆದ ತೀರ್ಪುಗಾರರು

0

ಮೊಘಲಾಯಿ ಮಟನ್ ಕರಿ, ಕೇಸರಿ ಬಾತ್, ಸ್ಮೋಕ್ಡ್ ಚಿಕನ್ ಕಬಾಬ್, ಸೌತೆಕಾಯಿ ರಾಯಿತ, ಕೊತ್ತಂಬರಿ ಚಟ್ನಿ. ಈ ಹೆಸರು ಕೇಳಿಯೇ ಬಾಯಲ್ಲಿ ನೀರು ಬರುತ್ತೆ ಅಲ್ವಾ. ಭಾರತೀಯ ರೆಸಿಪಿಗಳೇ ಹಾಗೆ  ಒಂದೊಂದರ ಹೆಸರು ಕೇಳಿದ್ರೆ ನಮ್ಮ ಬಾಯಲ್ಲಿ ನೀರೂರುತ್ತೆ. ಅದರಲ್ಲೂ ಮೊಘಲಾಯ್ ರೆಸಿಪಿಗಳಂತು ಸವಿದವರಿಗೆ ಮಾತ್ರ ಗೊತ್ತು ಅದರ ರುಚಿ. ಇಂತಹ ಸೂಪರ್ ಭಾರತೀಯ ಖಾನಾವಳಿಯನ್ನು ವಿದೇಶಿ ಮಾಸ್ಟರ್ ಚೆಫ್ ಶೋನಲ್ಲಿ ತಯಾರಿಸಿ ಭಾರತೀಯ ಬಾಲಕನೊಬ್ಬ ವಿದೇಶಿ ಜಡ್ಜ್ ಗಳ ಬಾಯಲ್ಲೇ ನೀರೂರುವಂತೆ ಮಾಡಿದ್ದಾನೆ .

ಭಾರತೀಯ ಮೂಲದ ೧೩ ವರ್ಷದ ದೇವ್  ಈ ಪ್ರಶಂಸೆಗೆ ಪಾತ್ರವಾದ ಬಾಲಕ. ಈತ ಆಸ್ಟ್ರೇಲಿಯಾ ಜೂನಿಯರ್  ಮಾಸ್ಟರ್ ಚೆಫ್ ಶೋ ದಲ್ಲಿ ಭಾಗಿಯಾಗಿದ್ದಾನೆ. ಅದರ ಭಾಗವೊಂದರಲ್ಲಿ ಆತನ ತಾಯಿ ಹೇಳಿಕೊಟ್ಟ ಮೊಘಲಾಯಿ ಮಟನ್ ಕರಿ, ಕೇಸರಿ ಬಾತ್, ಸ್ಮೋಕ್ಡ್ ಚಿಕನ್ ಕಬಾಬ್, ಸೌತೆಕಾಯಿ ರಾಯಿತ , ಕೊತ್ತಂಬರಿ ಚಟ್ನಿ ತಯಾರಿಸಿ ಪ್ರಸ್ತುತ ಪಡಿಸಿದ್ದಾನೆ. ಇದನ್ನು ಸವಿದ ವಿದೇಶಿ ಜಡ್ಜ್  ಗಳು ಭಾರತೀಯ ರುಚಿಗೆ ಫಿದಾ ಆಗಿದ್ದಾರೆ.

ದೇವ್  ತನ್ನ ಖಾದ್ಯಗಳನ್ನು ಪ್ರ ಸ್ತುತ ಪಡಿಸುತ್ತಾ ಇದು ತನ್ನ ತಾಯಿನಾಡ ಅಡುಗೆ ಅಂತ ಹೇಳಿದ್ದಾನೆ. ಇದನ್ನು ನೋಡುತ್ತಲೇ ಕಾರ್ಯಕ್ರಮದ ಜಡ್ಜ್ ಗಳಾದ   ಚೇಫ್ ಜಾಕ್ ,  ಮೆಲಿಸ್ಸಾ ಲ್ಯಾಂಗ್, ಹಾಗೂ ಆಂಡಿ ಅಲೆನ್  ಫುಲ್ ಖುಷ್ ಆಗಿದ್ದಾರೆ. ಚೆಫ್ ಆಂಡಿ ಅಲೆನ್  ದೇವ್ ಗೆ ಆತನ ಟೇಬಲ್ ಮೇಲೆ ಇರುವ  ಫಾಮಿಲಿ ಫೋಟೋ ತರಲು ದೇವ್ ಗೆ ಹೇಳಿದ್ರು. ಅದನ್ನು ನೋಡುತ್ತಲೇ  ರೆಸಿಪಿಗಳನ್ನು ಸವಿದೆ ಆಂಡಿ ಅಲೆನ್  ದೇವ್ ಫಾಮಿಲಿ ಜೊತೆ ಊಟ ಮಾಡಿದಂತಾಯಿತು ಅಂತ ಹೊಗಳಿದ್ರು.

ಇನ್ನು ಮೆಲಿಸ್ಸಾ ಲ್ಯಾಂಗ್, ಕೂಡಾ ಇದು ನಾನು ಯಾವತ್ತು ಮಾಡಲು ಬಯಸುವ ಊಟ ಅಂತ ಭಾರತೀಯ ರುಚಿಗೆ ಹಾಗೂ ದೇವ್ ಕೈ ರುಚಿಗೆ ತಲೆ ಬಾಗಿದ್ರು. ಮತ್ತೊಬ್ಬರು ತೀರ್ಪುಗಾರರಾದ ಜಾಕ್ ಅಂತು ಈ ಖಾದ್ಯಗಳನ್ನು ಸವಿಯುತ್ತಲೇ  ಫುಲ್ ಫಿದಾ ಆಗಿದ್ದಾರೆ.   ಕಮೆಂಟ್ ಹೇಳಿದ ಬಳಿಕವೂ ದೇವ್ ಕೈರುಚಿಯನ್ನು ಅವರು ಸವಿಯುತ್ತಲೇ ಇದ್ದಿದ್ದು ಇದಕ್ಕೆ ಸಾಕ್ಷಿ.

ಇನ್ನು ಆಸ್ಟ್ರೇಲಿಯಾ ಜೂನಿಯರ್  ಮಾಸ್ಟರ್ ಚೆಫ್ ಶೋ ಕೂಡಾ ತನ್ನ ಇನ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಾಕಿದ್ದು, ಅದಕ್ಕೆ  “Dev’s Indian Feast….. Nothing like a family dinner” ಅಂತ ಬರೆದು ಕೊಂಡಿದೆ. ಅಂದ್ರೆ “ದೇವ್ ಮಾಡಿರೋ ಭಾರತೀಯ ಹಬ್ಬದಡುಗೆ, ಅದು ಕುಟುಂಬದೊಂದಿಗೆ ಮಾಡುವ ಊಟದಂತೆ “ ಅಂತ. ಇದೀಗ ಈ ವಿಡಿಯೋ ವೈರಲ್ ಆಗಿದ್ದು ಲಕ್ಷಾಂತರ ಮಂದಿ ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ಭಾರತೀಯ ಖಾನಾವಳಿಯನ್ನು ಮೆಚ್ಚಿಕೊಂಡಿದ್ದಾರೆ ಅಂದ್ರೆ ತಪ್ಪಾಗಲ್ಲ.

https://www.instagram.com/tv/CGMwqdCHQtW/?utm_source=ig_embed
Leave A Reply

Your email address will not be published.