ಶಾಲಾ ಬಿಸಿಯೂಟಕ್ಕೆ ಅಲ್ಯುಮಿನಿಯಂ ಪಾತ್ರೆ ನಿಷೇಧ

Mid-Day Meal Scheme : ಬೆಂಗಳೂರು : ಶಾಲೆಗಳಲ್ಲಿನ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆಗೆ ಇನ್ಮುಂದೆ ಅಲ್ಯುಮಿನಿಯಂ ಪಾತ್ರೆಗಳನ್ನು ಬಳಕೆ ಮಾಡದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಈ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಸರಕಾರ ತಿಳಿಸಿದ್ದು, ಶಾಲೆಗಳಲ್ಲಿನ ಪಾತ್ರೆಗಳ ಬದಲಾವಣೆಗೆ ಹೊಸ ಯೋಜನೆ ಜಾರಿಗೆ ತಂದಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 9337 ಸರಕಾರಿ ಮತ್ತು ಅನುದಾನಿತ ಶಾಲೆಗಳಿದ್ದು, ಈ ಶಾಲೆಗಳಲ್ಲಿ ಇನ್ಮುಂದೆ ಅಡುಗೆಗೆ ಅಲುಮಿನಿಯಂ ಪಾತ್ರೆಗಳನ್ನು ಬಳಕೆ ಮಾಡುವಂತಿಲ್ಲ.
ರಾಜ್ಯದಲ್ಲಿನ ಒಟ್ಟು ಶಾಲೆಗಳ ಅಡುಗೆ ಮನೆಗೆ ಆಧುನಿಕ ಪರಿಕರಗಳನ್ನು ಖರೀದಿಸುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಇದಕ್ಕಾಗಿ ಕರ್ನಾಟಕ ಸರಕಾರ 21.55 ಕೋಟಿ ರೂಪಾಯಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ.
ಅಲ್ಯುಮಿನಿಯಂ ಪಾತ್ರೆಯ ಬದಲು ಗುಣಮಟ್ಟದ ಸ್ಟೈನ್ಲೆಸ್ ಸ್ಟೀಟ್ ಪಾತ್ರೆ, ಪರಿಕರಗಳನ್ನು ಮಾತ್ರವೇ ಖರೀದಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಶಾಲೆಗಳ ಮಕ್ಕಳ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಗೆ ಅಡುಗೆ ಸಿದ್ದಪಡಿಸಲು ಅಲ್ಯುಮಿನಿಯಂ ಪಾತ್ರೆಗಳನ್ನು ಬಳಕೆ ಮಾಡುವಂತಿಲ್ಲ ಎಂದು ಕೇಂದ್ರ ಸರಕಾರ ಸೂಚನೆ ನೀಡಿತ್ತು.
Mid-Day Meal Scheme : ಅಲ್ಯುಮಿನಿಯಂ ಅಡುಗೆ ತಿಂದ್ರೆ ಏನಾಗುತ್ತೆ ?
ಹುಳಿ (ಆಸಿಡಿಕ್) ಇರುವ ಟೊಮ್ಯಾಟೋ, ಹುಣಸೆಹಣ್ಣು, ನಿಂಬೆ ರಸ) ಮತ್ತು ಉಪ್ಪು ಇರುವ ಆಹಾರ ಪದಾರ್ಥಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಿದಾಗ, ಅಲ್ಯೂಮಿನಿಯಂ ಅಂಶವು ಆಹಾರಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ : ಕರ್ನಾಟಕ ಶಾಲೆಗಳಿಗೆ ದಸರಾ ರಜೆ ವಿಸ್ತರಣೆ
ದೇಹದಲ್ಲಿ ಅತಿಯಾದ ಅಲ್ಯೂಮಿನಿಯಂ ಪ್ರಮಾಣ ಸೇರ್ಪಡೆ ಆಗುವುದರಿಂದ ಮೂಳೆಗಳು, ಮೆದುಳು ಮತ್ತು ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ತೊಂದರೆ ಕೊಡಬಹುದು.
ಅಲ್ಯೂಮಿನಿಯಂ ಪಾತ್ರೆಗಳ ಬಳಕೆಯನ್ನು ಅಲ್ಝೈಮರ್ನ ಕಾಯಿಲೆ (ಮರೆಗುಳಿತನ) ಮತ್ತು ಇತರ ನರವೈಜ್ಞಾನಿಕ ಸಮಸ್ಯೆಗಳು ಉಂಟಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ.
ಮೂತ್ರಪಿಂಡದ ಸಮಸ್ಯೆ ಇರುವವರು ಅಲ್ಯೂಮಿನಿಯಂ ಪಾತ್ರೆಯಿಂದ ತಯಾರಿಸಿದ ಅಡುಗೆಯನ್ನು ಸೇವನೆ ಮಾಡಬಾರದು. ಅಲ್ಲದೇ ಈ ಪಾತ್ರೆಯಿಂದ ಅಡುಗೆ ಮಾಡಿದ್ರೆ ಪೌಷ್ಟಿಕಾಂಶದ ಪ್ರಮಾಣವು ಕಡಿಮೆ ಆಗುತ್ತಂತೆ.
ಇದನ್ನೂ ಓದಿ : ಸಿಎ ಪರೀಕ್ಷೆ ಫಲಿತಾಂಶ ಯಾವಾಗ ?
Aluminum utensils banned for Karnataka School Mid-Day Meal Scheme



