CA ಸೆಪ್ಟೆಂಬರ್‌ – 2025 ಪರೀಕ್ಷೆ ಫಲಿತಾಂಶ ಯಾವಾಗ?

CA September Result 2025 Date: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ CA ಸೆಪ್ಟೆಂಬರ್ 2025 ಪರೀಕ್ಷೆ ಫಲಿತಾಂಶವನ್ನು ನವೆಂಬರ್‌ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.

ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಫಲಿತಾಂಶದ ದಿನಾಂಕಗಳನ್ನು ಸೂಚಿಸಿವೆ. ಆದರೆ CCM ಮತ್ತು ICAI ಸದಸ್ಯ ರಾಜೇಶ್‌ ಶರ್ಮಾ ಅವರ X ಪೋಸ್ಟ್‌ನ ಪ್ರಕಾರ, ಫಲಿತಾಂಶವು ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಬಹುದು.

ICAI ತನ್ನ CA ಸೆಪ್ಟೆಂಬರ್‌ 2025ರ ಮಾರ್ಗದರ್ಶನ ಟಿಪ್ಪಣಿಯಲ್ಲಿ ಫಲಿತಾಂಶವನ್ನು ನವೆಂಬರ್‌ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಿದೆ.

ICAI CA ಸೆಪ್ಟೆಂಬರ್‌ 2025ರಲ್ಲಿ ಸಿಎ ಫೌಂಡಶೇನ್‌, ಸಿಎ ಇಂಟರ್ಮಿಡಿಯೇಟ್‌ ಗ್ರೂಪ್‌ 1 ಮತ್ತು ಗ್ರೂಪ್‌ 2, ಸಿಎ ಅಂತಿಮ ಗ್ರೂಪ್‌ 1 ಮತ್ತು ಗ್ರೂಪ್‌ 2 ಪರೀಕ್ಷೆಗಳನ್ನು ನಡೆಸಿತ್ತು. ಪರೀಕ್ಷೆಯ ದಿನಾಂಕಗಳು ಈ ರೀತಿಯಾಗಿತ್ತು.

CA ಫೌಂಡೇಶನ್ ಸೆಪ್ಟೆಂಬರ್ 16, 18, 20, 22
CA ಇಂಟರ್ಮೀಡಿಯೇಟ್ ಗುಂಪು 1: ಸೆಪ್ಟೆಂಬರ್ 4, 7, 9
CA ಇಂಟರ್ಮೀಡಿಯೇಟ್ ಗುಂಪು 2: ಸೆಪ್ಟೆಂಬರ್ 11, 13 & 15
CA ಅಂತಿಮ ಗುಂಪು 1: ಸೆಪ್ಟೆಂಬರ್ 3, 6, 8
CA ಅಂತಿಮ ಗುಂಪು 2: ಸೆಪ್ಟೆಂಬರ್ 10, 12, 14

ಇದನ್ನೂ ಓದಿ: ಸಿಬಿಎಸ್‌ಇ 2026 ಪರೀಕ್ಷೆ ನಿಯಮದಲ್ಲಿ ಮಹತ್ವದ ಬದಲಾವಣೆ: ಯಾರಿಗೆ ಅನುಕೂಲ?

ICAI CA ಸೆಪ್ಟೆಂಬರ್ 2025 ಫಲಿತಾಂಶ ಪರಿಶೀಲಿಸುವುದು ಹೇಗೆ?

  • ಮೊದಲಿಗೆ ICAI ನ ಅಧಿಕೃತ ವೆಬ್‌ಸೈಟ್ icai.nic.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿರುವ CA ಫೌಂಡೇಶನ್/ಇಂಟರ್/ಫೈನಲ್ ರಿಸಲ್ಟ್‌ ಲಿಂಕ್ ಮೇಲೆ ಕ್ಲಿಕ್ಕಿಸಿ.
  • ನಂತರ CA ಸೆಪ್ಟೆಂಬರ್ 2025 ಫಲಿತಾಂಶ ಲಾಗಿನ್ ಪೋರ್ಟಲ್‌ ತೆರೆದುಕೊಳ್ಳುತ್ತದೆ.
  • ನಿಮ್ಮ ರೋಲ್ ನಂಬರ್‌, ನೋಂದಣಿ ಸಂಖ್ಯೆ ಮತ್ತು ಬಾಕ್ಸ್‌ನಲ್ಲಿ ತೋರಿಸಿರುವ ಕ್ಯಾಪ್ಚಾ ನಮೂದಿಸಿ.
  • ನಿಮ್ಮ CA ಸೆಪ್ಟೆಂಬರ್ 2025 ಫಲಿತಾಂಶವನ್ನು ವೀಕ್ಷಿಸಲು ವಿವರಗಳನ್ನು ಸಲ್ಲಿಸಿ.
  • ನಿಮ್ಮ ಸ್ಕೋರ್‌ಕಾರ್ಡ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
  • ನಂತರ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ಔಟ್‌ ತೆಗೆದುಕೊಳ್ಳಿ.

ಇದನ್ನೂ ಓದಿ: ಅಕ್ಟೋಬರ್ 18ರ ವರೆಗೆ ಶಾಲೆಗಳಿಗೆ ದಸರಾ ರಜೆ : ಸಿಎಂ ಸಿದ್ದರಾಮಯ್ಯ ಘೋಷಣೆ

(When is CA September Result 2025 Date may be out in the first week of November)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories