ವೀಳ್ಯದೆಲೆಯ ಮಹತ್ವ ನಿಮಗೆ ಗೊತ್ತಾ ?

0
  • ರಕ್ಷಾ‌ ಬಡಾಮನೆ

ಬೀಡಾ ತಿನ್ನುವುದು ಹಲವರ ರೂಢಿ. ಊಟ ಮಾಡಿದ ನಂತರ ಸಾಮಾನ್ಯವಾಗಿ ವೀಳ್ಯದೆಲೆ ತಿನ್ನುತ್ತಾರೆ. ಹೀಗೆ ನಾವು ತಿನ್ನುವ ವೀಳ್ಯದೆಲೆ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ನಿಮಗೆ ಗೊತ್ತಾ ? ವೀಳ್ಯದೆಲೆ ತಿನ್ನುವುದರಿಂದ ಹಲವು ಸಮಸ್ಯೆಗಳಿಂದ ದೂರವಿರಬಹುದು ಅನ್ನುತ್ತಿದೆ ಆಯುರ್ವೇದ. ಹಾಗಾದ್ರೆ ವೀಳ್ಯದೆಲೆಯ ಮಹತ್ವ ತಿಳಿದುಕೊಳ್ಳೋಣಾ ಬನ್ನಿ.

ಸುಟ್ಟಗಾಯ ಮಾಯವಾಗುತ್ತೆ :
ಮೈಮೇಲೆ ಸುಟ್ಟ ಗಾಯಗಳಾದ್ರೆ ವೀಳ್ಯದೆಲೆ ರಾಮಬಾಣದಂತೆ ಕೆಲಸ ಮಾಡುತ್ತೆ. ವೀಳ್ಯದೆಲೆಯಲ್ಲಿ ಉತ್ತಮ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್‌ಗಳಿವೆ ಇವು ಸುಟ್ಟ ಗಾಯಗಳನ್ನು ಶೀಘ್ರವಾಗಿ ಒಣಗಿಸಲು ನೆರವಾಗುತ್ತವೆ. ಗಾಯದ ಮೂಲಕ ನಷ್ಟವಾಗಿರುವ ಅಂಗಾಂಶಗಳನ್ನು ಮತ್ತೆ ಮರುತುಂಬಿಸಲು ಹಾಗೂ ಅದರಲ್ಲಿ ಪೂರ್ಣ ಪ್ರಮಾಣದ ಪ್ರೋಟೀನ್‌ಗಳಿರುವಂತೆ ಸಹಕರಿಸುತ್ತದೆ. ಹೀಗಾಗಿ ವೀಳ್ಯದೆಲೆಯನ್ನು ಹಿಂಡಿ ತೆಗೆದ ರಸವನ್ನು ಸುಟ್ಟ ಗಾಯದ ಮೇಲೆ ಹಚ್ಚಿ ಬಳಿಕ ಒಂದೆರಡು ಎಲೆಗಳನ್ನು ಗಾಯದ ಮೇಲೆ ಸುತ್ತಿ ಬ್ಯಾಂಡೇಜ್‌ ಸುತ್ತಿ. ಇದರಿಂದ ಒಂದೆರಡು ದಿನಗಳಲ್ಲಿಯೇ ಗಾಯ ಮಾಯಗುತ್ತದೆ.

ಉರಿಯೂತ ದೂರವಾಗುತ್ತೆ :
ವೀಳ್ಯದಲೆ ಉರಿಯೂತದ ಸಮಸ್ಯೆಯನ್ನು ನಿವಾರಿಸುತ್ತದೆ. ವೀಳ್ಯದೆಲೆಗಳಲ್ಲಿ ವಿಶೇಷವಾಗಿ ಪಾಲಿಫಿನಾಲ್ ಅದರಲ್ಲೂ ಚಾವಿಕಾಲ್ ಅನ್ನೋ ಪೋಷಕಾಂಶವನ್ನು ಒಳಗೊಂಡಿದೆ. ಈ ಚಾವಿಕಾಲ್ ದೇಹದಲ್ಲಿ ಉಂಟಾಗುವ ಉರಿಯೂತ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕರಿಸುತ್ತದೆ.

ಸಂಧಿವಾತ :
ಸಂಧಿವಾತದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತದೆ. ಹೀಗೆ ನಮ್ಮನ್ನು ಕಾಡುವ ಸಂಧಿವಾತವನ್ನು ನಿವಾರಿಸುವ ಶಕ್ತಿ ವೀಳ್ಯದೆಲೆಗೆ ಇದೆ. ವೀಳ್ಯದೆಲೆಯ ರಸವನ್ನು ತೆಗೆದು ತೊಂದರೆ ಇರುವ ಕೀಲುಗಳ ಮೇಲೆ ನೇರವಾಗಿ ಹಚ್ಚುವುದರಿಂದ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಜೀರ್ಣಕ್ರಿಯೆ ಉತ್ತಮ :
ವೀಳ್ಯದೆಲೆಯಲ್ಲಿರುವ ರಸವು ಉತ್ತಮ ಜೀರ್ಣಕಾರಕ ಹಾಗೂ ವಾಯುಪ್ರಕೋಪ ನಿವಾರಕ ಗುಣಗಳನ್ನು ಹೊಂದಿದೆ. ವೀಳ್ಯದೆಲೆ ಯನ್ನು ಜಗಿದು ನುಂಗುವ ಮೂಲಕ ಇದರ ರಸದಲ್ಲಿರುವ ವಿಶೇಷ ಗುಣಗಳನ್ನು ಪಡೆಯಬಹುದು. ಲಾಲಾರಸ ಉತ್ಪತ್ತಿಯಾಗಲು ವೀಳ್ಯೆದೆಲೆ ಉತ್ತಮ ಮನೆ ಮದ್ದು. ದೇಹಕ್ಕೆ ಅಗತ್ಯವಾಗಿರುವ ಲಾಲಾರಸವನ್ನು ವೃದ್ದಿಸುವ ಗುಣ ವೀಳ್ಯದೆಲೆಗೆ ಇದೆ. ವೀಳ್ಯದೆಲೆ ಯನ್ನು ಜಗಿದರೆ ಸಾಕು ದೇಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾಲಾರಸ ಉತ್ಪತ್ತಿಯಾಗುತ್ತದೆ. ಮಾತ್ರವಲ್ಲ ಲಾಲಾರಸ ಹೆಚ್ಚಿದಷ್ಟೂ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅಲ್ಲದೇ ಬಾಯಿಯೊಳಗೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನೂ ಕೂಡ ತಡೆಯಬಹುದು.

ಕಾಂತಿಯುಕ್ತವಾಗುತ್ತೆ ಚರ್ಮ :
ವೀಳ್ಯದಲೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸುವ ಶಕ್ತಿಯಿದೆ. 5 ವೀಳ್ಯದೆಲೆಗಳನ್ನು ತೆಗೆದುಕೊಂಡು ಅದನ್ನು ಸ್ವಚ್ಛವಾಗಿ ತೊಳೆಯ ಬೇಕು. ನಂತ್ರ ವೀಳ್ಯದೆಲೆಯನ್ನು ರುಬ್ಬಿ ಒಂದು ಟೀ ಚಮಚ ಜೇನು ತುಪ್ಪವನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿಯಂತೆ 2 ತಿಂಗಳು ಮಾಡಿದ್ರೆ ಒಣಗಿದ ಚರ್ಮ ಮೃದುವಾಗಿ ಚರ್ಮ ಕಾಂತಿ ಹೆಚ್ಚುತ್ತದೆ.

ಮೊಡವೆಗೆ ಮುಕ್ತಿ :
ಮೊಡವೆಯನ್ನು ವೀಳ್ಯದೆಲೆ ದೂರ ಮಾಡುತ್ತದೆ. ವೀಳ್ಯದೆಲೆಯನ್ನು ನೀರಿಗೆ ಹಾಕಿ ಕುದಿಸಿ. ನೀರಿನ ಬಣ್ಣ ಬದಲಾದ ತಕ್ಷಣ ಗ್ಯಾಸ್ ಬಂದ್ ಮಾಡಿ. ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಮೊಡವೆಯನ್ನು ವೀಳ್ಯದೆಲೆ ದೂರ ಮಾಡುತ್ತದೆ. ವೀಳ್ಯದೆಲೆಯನ್ನು ನೀರಿಗೆ ಹಾಕಿ ಕುದಿಸಿ. ನೀರಿನ ಬಣ್ಣ ಬದಲಾದ ತಕ್ಷಣ ಗ್ಯಾಸ್ ಬಂದ್ ಮಾಡಿ. ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ.

ಕೆಮ್ಮಕಫ ಹತ್ತಿರವೂ ಸುಳಿಯಲ್ಲ :
ವೀಳ್ಯದೆಲೆಯಲ್ಲಿರುವ ಔಷದೀಯ ಗುಣವು ಕೆಮ್ಮು ಹಾಗೂ ಕಫದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುವಲ್ಲಿ ಸಹಕರಿಸುತ್ತದೆ. ಮೂರ್ನಾಲ್ಕು ಮಿಲಿ ವೀಳ್ಯದೆಲೆಯ ರಸವನ್ನು 1 ಚಮಚ ಜೇನು ತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ. ಕೆಮ್ಮು ಹಾಗೂ ಕಫದ ಸಮಸ್ಯೆಗೆ 1 ವೀಳ್ಯದೆಲೆಯಲ್ಲಿ ಒಂದೆರಡು ಹರಳು ಉಪ್ಪು ಹಾಗೂ ಒಂದೆರಡು ಕರಿಮೆಣಸನ್ನು ಸೇರಿಸಿ ಸೇವಿಸಿದರೆ ಹೆಚ್ಚು ಉಪಯುಕ್ತ.

Leave A Reply

Your email address will not be published.