ಆರೋಗ್ಯ ಇಲಾಖೆ ಸೂಚನೆ: 1 ರಿಂದ 19 ವರ್ಷದ ಮಕ್ಕಳಿಗೆ ಜಂತಹುಳ ಮಾತ್ರೆ ಸಿಗದಿದ್ದರೆ ಹೀಗೆ ಮಾಡಿ
National Deworming Day tablets on February 16th: ರಾಜ್ಯದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಜಂತುಹುಳು ನಿವಾರಣಾ ಅಭಿಯಾನವನ್ನು ಹಮ್ಮಿಕೊಂಡಿದೆ. 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಮತ್ತು ಹದಿಹರೆಯದವರಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು (ಅಲ್ಬೆಂಡಜೋಲ್) ನೀಡಲಾಗುತ್ತಿದೆ. ‘ಅಲ್ಲೆಂಡಜೋಲ್’ ಜಂತುಹುಳು ನಿವಾರಣಾ ಮಾತ್ರೆ ನೀಡುವ ದಿನ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ ಫೆಬ್ರವರಿ 16ರಂದು ಮಾತ್ರೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಯಾರು ಪಡೆಯಬೇಕು?: 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಮತ್ತು ಹದಿಹರೆಯದವರು ಈ ಮಾತ್ರೆಯನ್ನು ಪಡೆಯುವುದು ಕಡ್ಡಾಯವಾಗಿದೆ.
ಎಲ್ಲಿ ಲಭ್ಯ?: ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಈ ಮಾತ್ರೆಗಳು ಉಚಿತವಾಗಿ ಲಭ್ಯವಿರುತ್ತವೆ.
ಮಾತ್ರೆ ಪಡೆಯುವ ಉದ್ದೇಶ: * ರಕ್ತಹೀನತೆಯನ್ನು ತಡೆಗಟ್ಟಲು, ಅಪೌಷ್ಟಿಕತೆಯನ್ನು ನಿವಾರಿಸಲು, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ವೃದ್ಧಿಸಲು.
Instagram Virus : ಉಡುಪಿ–ಕುಂದಾಪುರದಲ್ಲಿ ಹರಡುತ್ತಿರುವ ‘ಇನ್ಸ್ಟಾಗ್ರಾಂ ವೈರಸ್’
ಗಮನಿಸಿ:
ನಿಗದಿಪಡಿಸಿದ ದಿನದಂದು ಮಾತ್ರೆಯನ್ನು ಪಡೆಯಲು ಸಾಧ್ಯವಾಗದಿದ್ದರೆ, ಅಂತಹವರಿಗಾಗಿ ಫೆಬ್ರವರಿ 16ರಂದು ಮರು ಮಾತ್ರೆ ನೀಡುವ (Mop-up Day) ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಅಭಿಯಾನದ ಮೂಲಕ ಮಕ್ಕಳಲ್ಲಿ ಜಂತುಹುಳು ಬಾಧೆಯನ್ನು ಹೋಗಲಾಡಿಸಿ, ಸದೃಢ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಗನವಾಡಿ ಅಥವಾ ಶಾಲಾ ಶಿಕ್ಷಕರನ್ನು ಸಂಪರ್ಕಿಸಬಹುದಾಗಿದೆ.



