Onion Health Tips : ಆರೋಗ್ಯದ ರಕ್ಷಾ ಕವಚ ಈರುಳ್ಳಿ !

0
  • ರಕ್ಷಾ ಬಡಾಮನೆ

ನಿತ್ಯದ ಆಹಾರಗಳಲ್ಲಿ ಹೆಚ್ಚಾಗಿ ಬಳಕೆಯಾಗೋ ಈರುಳ್ಳಿ ನಮ್ಮ ಆರೋಗ್ಯಕ್ಕೂ ಉತ್ತಮ. ಹೆಚ್ಚು ಹೆಚ್ಚಾಗಿ ಈರುಳ್ಳಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತಿದೆ. ಈರುಳ್ಳಿ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಹಲವರು ಕಾಯಿಲೆ ವಿರುದ್ದ ಹೋರಾಡುವ ಗುಣವನ್ನು ಹೊಂದಿದೆ.

ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ರಾಸಾಯನಿಕ ಅಂಶ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳ ವಿರುದ್ದ ಹೋರಾಡುತ್ತದೆ. ಈರುಳ್ಳಿ ತಿನ್ನುವುದರಿಂದ ಕ್ಯಾನ್ಸರ್ ನಿಂದ ದೂರ ಇರಬಹುದು ಅನ್ನೋದು ದೃಢಪಟ್ಟಿದೆ.

ಬೇಯಿಸಿದ ಅಥವಾ ಹುರಿದ ಈರುಳ್ಳಿಗಿಂತ ಹಸಿ ಈರುಳ್ಳಿಯಲ್ಲಿ ಆರ್ಗಾನಿಕ್ ಸಲ್ಫರ್ ಪ್ರಮಾಣ ಹೆಚ್ಚಾಗಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಯನ್ನು ಒದಗಿಸುತ್ತದೆ.


ನಿತ್ಯವೂ ಊಟದ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ಸೇವನೆ ಮಾಡುವರಿಗೆ ಬೊಬ್ಬಿನ ಸಮಸ್ಯೆ ತಲೆದೋರುವುದೇ ಇಲ್ಲಾ.

ಮಾತ್ರವಲ್ಲ ಈರುಳ್ಳಿಯಲ್ಲಿರುವ ಸತ್ವಾಂಶಗಳು ರಕ್ತನಾಳದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ. ಹೀಗಾಗಿ ಹೃದ್ರೋಗ ಸಮಸ್ಯೆಯಿಂದ ದೂರವಿರಬಹುದು.

ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಂಡ್ರೆ ಈರುಳ್ಳಿಯಲ್ಲಿರುವ ಯಾಂಟಿಬಯೋಟಿಕ್, ಯಾಂಟಿ ಸೆಪ್ಟಿಕ್, ಯಾಂಟಿ ಮ್ಯಕ್ರೋಬಿಯಾಲ್ ಲಕ್ಷಣಗಳಿಂದ ಬೇರೆಡೆ ಹರಡದಂತೆ ತಡೆಯುತ್ತದೆ. ಹಲ್ಲುಗಳ ಆರೋಗ್ಯ ವೃದ್ದಿಸುವುದರ ಜೊತೆಗೆ ತ್ವಜೆಯ ಸೌಂದರ್ಯ, ಕೂದಲಿನ ಸೌಂದರ್ಯವನ್ನು ಕಾಪಾಡುತ್ತದೆ.

ಈರುಳ್ಳಿ ರಸಕ್ಕೆ ಜೇನುತುಪ್ಪದ ಮಿಶ್ರಣವನ್ನು ಮಾಡಿ ಸೇವನೆ ಮಾಡುವುದರಿಂದ ಜ್ವರ, ಸಾಧಾರಣ ನೆಗಡಿ, ಕೆಮ್ಮು, ಗಂಟಲು ನೋವು, ಅಲರ್ಜಿಯಂತಹ ಸಮಸ್ಯೆಗಳಿಗೆ ತತ್ ಕ್ಷಣ ಪರಿಹಾರ ಸಿಗುತ್ತದೆ.

ಒಂದೊಮ್ಮೆ ಮೂಗಿನಿಂದ ರಕ್ತ ಶ್ರಾವವಾಗುತ್ತಿದ್ದರೆ ಈರುಳ್ಳಿ ಸೇವನೆ ಮಾಡುವುದರಿಂದ ರಕ್ತಶ್ರಾವವಾಗೋದನ್ನು ತಡೆಯಬಹುದಾಗಿದೆ. ಮಾತ್ರವಲ್ಲ ಈರುಳ್ಳಿ ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿಯನ್ನು ಕೊಡುತ್ತದೆ.

ದೇಹದಲ್ಲಿ ಇನ್ಸುಲಿನ್ ಹಂತವನ್ನು ಹೆಚ್ಚಿಸಲು ಮಧುಮೇಹಿಗಳಿಗೆ ಈರುಳ್ಳಿ ರಾಮಬಾಣ. ಈರುಳ್ಳಿಯನ್ನು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ.

ಈರುಳ್ಳಿಯ ರಸವನ್ನು ತಲೆ ಮೇಲಿನ ಚರ್ಮಕ್ಕೆ ಲೇಪಿಸುವುದರಿಂದ ತಲೆಹೊಟ್ಟು ಹಾಗೂ ತಲೆಕೂದಲು ಉದುರುವುದರಿಂದ ಮುಕ್ತರಾಗಬಹುದು.
ಬಿಸಿಯಿಂದ ಸುಟ್ಟ ಜಾಗಕ್ಕೆ ಈರುಳ್ಳಿಯಿಂದ ಉಜ್ಜಿದರೆ ನೋವು ಕಡಿಮೆ ಆಗೋದು ಅಲ್ಲದೆ ಇನ್ಫೆಕ್ಷನ್ ಆಗದ ಹಾಗೆ ಕಾಪಾಡುತ್ತದೆ .

Leave A Reply

Your email address will not be published.