ಅಕ್ರಮ ಸಂಬಂಧ ಡಬಲ್ ಮರ್ಡರ್ನಲ್ಲಿ ಅಂತ್ಯ : ನಡುರಸ್ತೆಯಲ್ಲಿ ಗರ್ಭಿಣಿ ಭೀಕರ ಹತ್ಯೆ

double murder Pregnant woman : ಅಕ್ರಮ ಸಂಬಂಧದಿಂದಾಗಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದೆ. ಮೃತಪಟ್ಟವರ ಪೈಕಿ ಒಬ್ಬಾಕೆ ಗರ್ಭಿಣಿ ಎನ್ನಲಾಗಿದೆ. ಗರ್ಭಿಣಿ ಮಹಿಳೆಯನ್ನು ಆಕೆಯ ಪ್ರಿಯಕರನೇ ಇರಿದು ಕೊಂದಿದ್ದಾನೆ.
ನಂತರ ತಾನೂ ಚಾಕು ಇರಿತದಲ್ಲಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ. ಪತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಮೃತ ಮಹಿಳೆಯನ್ನು 22 ವರ್ಷದ ಶಾಲಿನಿ ಎಂದು ಗುರುತಿಸಿಲಾಗಿದೆ.
ಈಕೆ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದು ಮತ್ತೊಂದು ಮಗುವಿಗೆ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಈಕೆಯ ಪತಿ 23 ವರ್ಷದ ಆಕಾಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು ಪ್ರಸ್ತುತ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
34 ವರ್ಷ ಪ್ರಾಯದ ಮೃತ ಆಶು ಅಲಿಯಾಸ್ ಶೈಲೇಂದ್ರ ಸ್ಥಳೀಯ ನಿವಾಸಿಯಾಗಿದ್ದು , ಮೃತ ಶಾಲಿನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಶಾಲಿನಿ ತನ್ನ ಮಗುವಿಗೆ ಗರ್ಭ ಧರಿಸಿದ್ದಳು ಆದರೆ ತನ್ನ ಪತಿಯೊಂದಿಗೆ ವಾಸಿಸುತ್ತೇನೆ, ಈ ಅಕ್ರಮ ಸಂಬಂಧ ನಿಲ್ಲಿಸೋಣ ಎಂದು ಪ್ರಿಯಕರ ಶೈಲೇಂದ್ರ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ.
ಇದನ್ನೂ ಓದಿ : ಸೋದರಳಿಯನ ಜೊತೆ ಅಕ್ರಮ ಸಂಬಂಧ : ಮದುವೆ ನಿರಾಕರಿಸಿದ್ದಕ್ಕೆ ಪೊಲೀಸ್ ಠಾಣೆಯಲ್ಲೇ ಎರಡು ಮಕ್ಕಳ ತಾಯಿ ಹೈಡ್ರಾಮಾ
ಶಾಲಿನಿಯ ಈ ನಿರ್ಧಾರದಿಂದ ಕೋಪಗೊಂಡಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಶೈಲೇಂದ್ರ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ತಡರಾತ್ರಿ ಆಕಾಶ್ ಮತ್ತು ಶಾಲಿನಿ ಕುತುಬ್ ರಸ್ತೆಯಲ್ಲಿ ಆಕಾಶ್ ಅವರ ತಾಯಿಯನ್ನು ಭೇಟಿ ಮಾಡಲು ಹೋದಾಗ ಈ ದಾಳಿ ನಡೆದಿದೆ.
ಆಕಸ್ಮಿಕವಾಗಿ ಕಾಣಿಸಿಕೊಂಡ ಆಶು ಆಕಾಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆದರೆ ಆಕಾಶ್ ದಾಳಿಯಿಂದ ತಪ್ಪಿಸಿಕೊಂಡನು. ಬಳಿಕ ಇ-ರಿಕ್ಷಾದಲ್ಲಿ ಶಾಲಿನಿಯನ್ನು ಗಮನಿಸಿ ಆಕೆಗೆ ಹಲವು ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕಾಶ್ ತನ್ನ ಪತ್ನಿಯನ್ನು ಬಚಾವ್ ಮಾಡಲು ಹೋದಾಗ ಆಶುವಿನ ಮೇಲೆಯೂ ಆಕಾಶ್ ಚಾಕುವಿನಿಂದಇರಿದಿದ್ದಾನೆ. ಆಕಾಶ್ನಿಂದ ಪುನಃ ಚಾಕು ಕಸಿದುಕೊಂಡ ಆಶು ಶಾಲಿನಿಯನ್ನು ಹಲವು ಬಾರಿ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ : ವೆಜ್ ಬಿರಿಯಾನಿ ಬದಲು ಮಾಂಸಹಾರಿ ಬಿರಿಯಾನಿ ನೀಡಿದ್ದಕ್ಕೆ ಹೋಟೆಲ್ ಮಾಲೀಕನ ಹತ್ಯೆ
ಶಾಲಿನಿಯ ಸಹೋದರ ರೋಹಿತ್ ತಕ್ಷಣ ಆಕೆ ಮತ್ತು ಆಕೆಯ ಪತಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಪೊಲೀಸರು ಆಶು ಅವರನ್ನು ಅದೇ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ, ಶಾಲಿನಿ ಮತ್ತು ಆಶು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಪತ್ನಿಯನ್ನು ಉಳಿಸುವಾಗ ಆಕಾಶ್ಗೆ ಹಲವು ಇರಿತದ ಗಾಯಗಳಾಗಿವೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಾಲಿನಿಯ ತಾಯಿ ಶೀಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಕೊಲೆ ಮತ್ತು ಕೊಲೆಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
New Delhi Illicit relationship ends in double murder Pregnant woman murdered middle of the road



