ಬ್ರಿಟಿಷ್ ಸರ್ಕಾರಕ್ಕೆ 109 ವರ್ಷಗಳ ನಂತರ ನೀಡಿದ್ದ 35,000 ಸಾಲ ಮರುಪಾವತಿಗೆ ಕುಟುಂಬದ ಪಟ್ಟು
British government | 109 Years loan: ಸುಮಾರು ಒಂದು ಶತಮಾನದ ಹಿಂದೆ ಬ್ರಿಟಿಷ್ ಸರ್ಕಾರವು ಭಾರತೀಯ ಉದ್ಯಮಿಯೊಬ್ಬರಿಂದ ಪಡೆದಿದ್ದ ಸಾಲದ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯ ಶ್ರೀಮಂತ ಕುಟುಂಬವೊಂದು ಈ ಐತಿಹಾಸಿಕ ಬಾಕಿಯನ್ನು ವಸೂಲಿ ಮಾಡಲು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.
ಸುಮಾರು 109 ವರ್ಷಗಳ ಹಿಂದೆ, ಅಂದರೆ 1917ರಲ್ಲಿ ಬ್ರಿಟಿಷ್ ಸರ್ಕಾರವು ಮಧ್ಯಪ್ರದೇಶದ ಸಿಹೋರ್ ಮೂಲದ ಶ್ರೀಮಂತ ಉದ್ಯಮಿ ಸೇಠ್ ಜುಮ್ಮಾಲಾಲ್ ರುಥಿಯಾ ಅವರಿಂದ 35,000 ರೂಪಾಯಿ ಸಾಲ ಪಡೆದಿತ್ತು. ಮೊದಲ ಮಹಾಯುದ್ಧದ ಸಮಯದಲ್ಲಿ ಆಡಳಿತಾತ್ಮಕ ವೆಚ್ಚಗಳಿಗಾಗಿ ಈ ಹಣವನ್ನು ಬಳಸಲಾಗಿತ್ತು.
ಮರೆಯಾಗಿದ್ದ ದಾಖಲೆಗಳ ಪತ್ತೆ
ಸೇಠ್ ಜುಮ್ಮಾಲಾಲ್ 1937ರಲ್ಲಿ ನಿಧನರಾದರು. ಇತ್ತೀಚೆಗೆ ಅವರ ಮೊಮ್ಮಗ ವಿವೇಕ್ ರುಥಿಯಾ ಅವರಿಗೆ ಹಳೆಯ ಪೆಟ್ಟಿಗೆಯಲ್ಲಿದ್ದ ದಾಖಲೆಗಳು ಮತ್ತು ಮರಣಶಾಸನವನ್ನು (Will) ಪರಿಶೀಲಿಸುವಾಗ ಈ ಸಾಲದ ಪತ್ರಗಳು ಸಿಕ್ಕಿವೆ. ಬ್ರಿಟಿಷ್ ಸರ್ಕಾರ ಈ ಹಣವನ್ನು ಇದುವರೆಗೂ ಮರುಪಾವತಿ ಮಾಡಿಲ್ಲ ಎಂದು ಕುಟುಂಬದವರು ಹೇಳುತ್ತಿದ್ದಾರೆ.
ಇಂದಿನ ಮೌಲ್ಯ ಕೋಟಿಗಟ್ಟಲೆ
ಅಂದಿನ ಕಾಲಕ್ಕೆ 35,000 ರೂಪಾಯಿ ದೊಡ್ಡ ಮೊತ್ತವಾಗಿತ್ತು. ಇಂದಿನ ಚಿನ್ನದ ದರಕ್ಕೆ ಹೋಲಿಸಿದರೆ ಈ ಸಾಲದ ಮೊತ್ತ ಈಗ ಕೋಟಿಗಟ್ಟಲೆ ರೂಪಾಯಿಗಳಾಗುತ್ತದೆ. ಹೀಗಾಗಿ, ಬ್ರಿಟಿಷ್ ಸರ್ಕಾರಕ್ಕೆ ಕಾನೂನು ನೋಟಿಸ್ ನೀಡಿ ಹಣ ವಸೂಲಿ ಮಾಡಲು ಕುಟುಂಬ ಸಿದ್ಧತೆ ನಡೆಸುತ್ತಿದೆ.
Keralam : ಕೇರಳ ಜನತೆಯ ಬಹುದಿನಗಳ ಕನಸು ನನಸು : ದೇವರನಾಡಿನ್ನು ‘ಕೇರಳಂ’
ರುಥಿಯಾ ಕುಟುಂಬದ ಹಿನ್ನೆಲೆ
ಸ್ವಾತಂತ್ರ್ಯಕ್ಕೂ ಮುನ್ನ ರುಥಿಯಾ ಕುಟುಂಬವು ಭೋಪಾಲ್ ಸಂಸ್ಥಾನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು. ಇಂದಿಗೂ ಸಿಹೋರ್ ನಗರದ ಸುಮಾರು ಶೇ. 20 ರಿಂದ 30 ರಷ್ಟು ಭಾಗ ಇವರು ಬಿಟ್ಟುಕೊಟ್ಟ ಜಮೀನಿನ ಮೇಲೆ ನಿರ್ಮಾಣವಾಗಿದೆ. ಪ್ರಸ್ತುತ ಈ ಕುಟುಂಬವು ಕೃಷಿ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿದೆ.



