ಆರ್ಎಸ್ಎಸ್ಗೆ ನಿಷೇಧ ಹೇರಲು ಎಂದಿಗೂ ಸಾಧ್ಯವಿಲ್ಲ : ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ತಿರುಗೇಟು
RSS: ಕೋಮು ದ್ವೇಷವನ್ನು ಬಿತ್ತುವ ಮೂಲಕ ಭಾರತದ ಏಕತೆಗೆ ಭಂಗ ತರುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಬೇಕು ಎಂಬ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejasvi Surya) ತಿರುಗೇಟು ನೀಡಿದ್ದಾರೆ.
ಯಾವಾಗೆಲ್ಲ ಆರ್ಎಸ್ಎಸ್ ನಿಷೇಧಕ್ಕೆ ಹುನ್ನಾರಗಳು ನಡೆದಿತ್ತು ಆ ಎಲ್ಲಾ ಸಂದರ್ಭಗಳಲ್ಲಿಯೂ ಆ ಸಂಘಟನೆ ಬಲಗೊಳ್ಳುತ್ತಲೇ ಹೋಗಿದೆ. ಹೀಗಾಗಿ ಈ ರೀತಿಯ ಪ್ರಯತ್ನಕ ನಿರರ್ಥಕ ಎಂದು ಜರಿದಿದ್ದಾರೆ.
ಆರ್ಎಸ್ಎಸ್ ನಿಷೇಧಕ್ಕೆ ಪ್ರಯತ್ನ ನಡೆದಿರುವುದು ಇದೇ ಮೊದಲೇನಲ್ಲ. ಆರ್ಎಸ್ಎಸ್ನ್ನು ಈ ಹಿಂದೆ ಹಲವು ಬಾರಿ ನಿಷೇಧಿಸಲಾಗಿದೆ. ಆದರೆ ಈ ರೀತಿ ಆದ ಪ್ರತಿ ಬಾರಿಯೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತಷ್ಟು ದೃಢವಾಗಿ ಬೆಳೆದಿದೆ ಹಾಗೂ ಮರಳಿದೆ. ಸಮಾಜಕ್ಕೆ ಮತ್ತಷ್ಟು ಹೆಚ್ಚಿನ ಕೊಡುಗೆಯನ್ನೇ ನೀಡಿದೆ ಎಂದು ಹೇಳಿದ್ದಾರೆ.
Also Read: ನವೆಂಬರ್ ಕ್ರಾಂತಿ ನಡೆಯುತ್ತಾ ? ಸಿಎಂ ಡಿನ್ನರ್ ಮೀಟಿಂಗ್ ರಹಸ್ಯವೇನು ?
ಕೆಲ ದಿನಗಳ ಹಿಂದಷ್ಟೇ ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ, ಘೋಷಣೆಗಳನ್ನು ಕೂಗುತ್ತಾ ಯುವ ಸಮುದಾಯಗಳ ಮನಸ್ಸಿನಲ್ಲಿ ಭಾರತದ ಏಕತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬುತ್ತಿದೆ.
ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪುದರ್ಶನ ನಡೆಸುವ ಮೂಲಕ ಮುಗ್ಧ ಮಕ್ಕಳು ಹಾಗೂ ಯುವಜನರ ಮನಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ .
Also Read: ಚಿಕ್ಕಮಗಳೂರು : ತವರು ಮನೆ ಸೇರಿದ ಪತ್ನಿ, ಹತ್ಯೆಗೈದ ಪಾಪಿ ಪತಿ
ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ RSS ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಮುಖೇನ ಸಿಎಂ ಸಿದ್ದರಾಮಯ್ಯ ಬಳಿಯಲ್ಲಿ ಮನವಿ ಮಾಡಿದ್ದರು.
ಈ ಮನವಿ ಪತ್ರದ ಮೇಲೆ ಸಿಎಂ ಸಿದ್ಧರಾಮಯ್ಯ , ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಬರೆದಿದ್ದು ಇದಾದ ಬಳಿಕ ರಾಜ್ಯದಲ್ಲಿ ಈ ಸಂಬಂಧ ರಾಜಕೀಯ ಏಟು ಎದಿರೇಟುಗಳು ಆರಂಭಗೊಂಡಿವೆ.



