ಕೆಡಿಸಿಸಿ ಬ್ಯಾಂಕ್ ಚುನಾವಣೆ: 44 ನಾಮಪತ್ರ ಅಂಗೀಕಾರ, ಮಂಕಾಳ ವೈದ್ಯ ಆಯ್ಕೆ ಖಚಿತ
ಕಾರವಾರ: KDCC Bank: ಉತ್ತರ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆ ಪ್ರಕ್ರಿಯೆಯಲ್ಲಿ ಆರಂಭಗೊಂಡಿದೆ. ಈಗಾಗಲೇ ಒಟ್ಟು ಒಟ್ಟು 46 ಅಭ್ಯರ್ಥಿಗಳು ಸಲ್ಲಿಸಿದ್ದ 87 ನಾಮಪತ್ರಗಳ ಪೈಕಿ 44 ನಾಮಪತ್ರ ಅಂಗೀಕಾರಗೊಂಡಿದೆ.
ಅಲ್ಲದೇ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 19 (ಇಂದು ) ಕೊನೆಯ ದಿನವಾಗಿದೆ.
2 ನಾಮಪತ್ರ ತಿರಸ್ಕಾರ; ಮಂಕಾಳ ವೈದ್ಯರಿಗೆ ಗ್ರೀನ್ ಸಿಗ್ನಲ್
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತ. ಸಚಿವ ಮಂಕಾಳ ವೈದ್ಯ ಅವರ ಎದುರಾಳಿ ಮಾದೇವ ಗೋವಿಂದ ನಾಯ್ಕ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಸೂಚಕರು ಮತದಾರರಾಗಿಲ್ಲದ ಕಾರಣ ಮಾದೇವ ಗೋವಿಂದ ನಾಯ್ಕ ಅವರ ನಾಮಪತ್ರ ತಿರಸ್ಕರಿಸಿದ್ದಾರೆ. ಇದು ಮಾಂಕಾಳ ವೈದ್ಯ ಅವರು ಅವಿರೋಧ ಆಯ್ಕೆಗೆ ದಾರಿ ಮಾಡಿಕೊಟ್ಟಿದೆ.
Also Read: ಪ್ರೇಯಸಿಯೊಂದಿಗೆ ಲಾಡ್ಜ್ನಲ್ಲಿದ್ದ ಪುತ್ತೂರಿನ ಯುವಕ ನಿಗೂಢ ಸಾವು
ಹೈಕೋರ್ಟ್ ಆದೇಶ, ನಾಮಪತ್ರ ತಿರಸ್ಕೃತ
ದ್ದಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ವಿವೇಕ ಹೆಗಡೆ ಗಡಿಹಿತ್ಲು ಅವರ ನಾಮಪತ್ರವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಪಿಟಿಶನ್ ಆದೇಶದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಅವರು ತಿರಸ್ಕರಿಸಿದ್ದಾರೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಯಾರು ?
ಉತ್ತರ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆ ವಿವಿಧ ಕ್ಷೇತ್ರಗಳಿಂದ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶಾಸಕ ಸತೀಶ ಸೈಲ್ (ಕಾರವಾರ), ಶಾಸಕ ಶಿವರಾಮ ಹೆಬ್ಬಾರ (ಯಲ್ಲಾಪುರ), ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (ಭಟ್ಕಳ) ಸ್ಪರ್ಧೆಯಲ್ಲಿದ್ದಾರೆ.
ಕಾರವಾರದಿಂದ ನಂದಕಿಶೋರ ನಾಯ್ಕ, ಸುರೇಶ ರಾಮ ಪೆಡೇಕರ, ಶಿರಸಿಯಿಂದ ಜಿ.ಆರ್.ಹೆಗಡೆ ಬೆಳ್ಳೇಕೇರಿ, ಗಣಪತಿ ಜೋಶಿ ಕೊಪ್ಪಲತೋಟ ಹಾಗೂ ಸಿದ್ದಾಪುರದಿಂದ ಬಾಲಚಂದ್ರ ಹೆಗಡೆ ಹಳದೋಟ, ರಾಘವೇಂದ್ರ ಶಾಸ್ತ್ರಿ ಸ್ಪರ್ಧೆ ಮಾಡಿದ್ದಾರೆ.
Also Read: ಬೆಂಗಳೂರಿನಿಂದ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಅಗ್ನಿ ದುರಂತ
ಉಳಿದಂತೆ ರಾಮಕೃಷ್ಣ ಹೆಗಡೆ ಗೋರ್ಸಗದ್ದೆ (ಯಲ್ಲಾಪುರ), ಎಲ್.ಟಿ.ಪಾಟೀಲ್ (ಮುಂಡಗೋಡ), ಎಸ್.ಎಲ್.ಘೋಟೆಕರ (ಹಳಿಯಾಳ), ಬೀರಣ್ಣ ನಾಯಕ (ಅಂಕೋಲಾ), ಗಜಾನನ ಪೈ, ರಾಜಗೋಪಾಲ ಅಡಿ (ಕುಮಟಾ), ಶಿವಾನಂದ ಹೆಗಡೆ ಕಡತೋಕ (ಹೊನ್ನಾವರ), ಕೃಷ್ಣ ದೇಸಾಯಿ (ಜೊಯ್ದಾ) ಕಣಕ್ಕೆ ಇಳಿದಿದ್ದಾರೆ.
ಗೋಪಾಲಕೃಷ್ಣ ವೈದ್ಯ, ಆರ್.ಎಂ.ಹೆಗಡೆ ಬಾಳೇಸರ, ತಿಮ್ಮಯ್ಯ ಹೆಗಡೆ ಉಲ್ಲಾಳ, ಮೋಹನದಾಸ ನಾಯಕ ಮುಂತಾದವರ ನಾಮಪತ್ರಗಳು ಸಹ ಸ್ವೀಕೃತಗೊಂಡಿವೆ.



