ಕೇಶವ ಕೃಪಾ ಮುಂದೆ ಎನ್ಎಸ್ಯುಐ, ಯೂತ್ ಕಾಂಗ್ರೆಸ್ ಪ್ರತಿಭಟನೆ : ಬಿಜೆಪಿ ನಿಯೋಗದಿಂದ ಆಯುಕ್ತರಿಗೆ ದೂರು

ಬೆಂಗಳೂರು : ಆರ್ಎಸ್ಎಸ್ ರಾಜ್ಯ ಕಚೇರಿ ಕೇಶವ ಕೃಪಾ (RSS Office Keshav Krupa) ಮುಂಭಾಗದಲ್ಲಿ ನಡೆದಿರುವ ಪ್ರತಿಭಟನೆಯ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.
ಇಂದು ಯೂತ್ ಕಾಂಗ್ರೆಸ್ ಮತ್ತು ಎನ್ಎಸ್ಯುಐ ಹೆಸರಿನಲ್ಲಿ ಕಿಡಿಗೇಡಿಗಳ ಗುಂಪು ಪ್ರತಿಭಟನೆ ನಡೆಸಿದ್ದು, ಕೇಶವ ಕೃಪಾ ಎದುರು ನಡೆಸಿದ ಪ್ರತಿಭಟನೆಯ ಕುರಿತು ಪೊಲೀಸ್ ಇಲಾಖೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ನಿಯೋಗ ಮನವಿ ಮಾಡಿದೆ.
ಶತಮಾನೋತ್ಸವದ ಸಂಭ್ರಮದಲ್ಲಿ ವರ್ಷವಿಡೀ ನೂರಾರು ಜನಮುಖಿ ಕಾರ್ಯಕ್ರಮಗಳ ಯೋಜನೆಯನ್ನು ಆರ್ಎಸ್ಎಸ್ ಹಮ್ಮಿಕೊಂಡಿದೆ. ಇಂತಹ ಐತಿಹಾಸಿಕ ಸಂಘಟನೆಯ ಕಚೇರಿ ಮುಂಭಾದಗದಲ್ಲಿ ಕಿಡಿಗೇಡಿತನಕ್ಕೆ ಪೊಲೀಸ್ ಇಲಾಖೆ ಅವಕಾಶ ಕೊಡಬಾರದು.
ಇದನ್ನೂ ಓದಿ : ಕರುಳು ಹಿಂಡುತ್ತೆ ಸಾವಿಗೂ ಮುನ್ನ ಪಾಪಿ ಪತಿಗೆ ಕೃತಿಕಾ ರೆಡ್ಡಿ ಕಳುಹಿಸಿದ ಸಂದೇಶ : ಏನದು ಮೆಸೇಜ್
ಈ ಬಗ್ಗೆ ತುರ್ತು ಗಮನ ಹಿರಿಸಿ ಇಂತಹ ಘಟನೆಗಳು ಎಂದಿಗೂ ಮರುಕಳಿಸದಂತೆ ಗಮನ ಹರಿಸಬೇಕು ಎಂದು ಬೆಂಗಳೂರು ಪೋಲಿಸ್ ಆಯುಕ್ತರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ವಿಪಕ್ಷ ಮುಖ್ಯ ಸಚೇತಕರಾದ ಎನ್ ರವಿಕುಮಾರ್, ಶಾಸಕರಾದ ಭರತ್ ಶೆಟ್ಟಿ, ಸಿ ಕೆ ರಾಮಮೂರ್ತಿ ಬೆಂಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರುಗಳಾದ ಸಪ್ತಗಿರಿ ಗೌಡ, ಎಸ್ ಹರೀಶ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ದೀಪಾವಳಿಗೆ ಖಾಸಗಿ ಬಸ್ ಮಾಲೀಕರಿಂದ ದರೋಡೆ
NSUI Youth Congress protest in front of RSS Office Keshav Krupa: BJP delegation complains to Commissioner



