ಸಾರ್ವಜನಿಕರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ : ಸರ್ಕಾರಿ ಬಸ್ಗಳಲ್ಲಿ ತಂಬಾಕು ಸಂಬಂಧಿ ಜಾಹೀರಾತು ನಿಷೇಧ
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸರ್ಕಾರವೇ ಜಾಹೀರಾತು ನೀಡುತ್ತದೆ. ಆದರೆ ಇತ್ತ ಸಾರಿಗೆ ಇಲಾಖೆಯ ಸರ್ಕಾರಿ ಬಸ್ಗಳಲ್ಲಿ ತಂಬಾಕು ಸಂಬಂಧಿ ಜಾಹೀರಾತುಗಳು ಕಾಣಸಿಗುತ್ತಿದ್ದವು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪವ್ಯಕ್ತವಾದ ಬೆನ್ನಲ್ಲೇ ಸಾರಿಗೆ ಇಲಾಖೆ ಎಚ್ಚೆತ್ತಿದೆ. ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ಬಸ್ಗಳಲ್ಲಿ ಯಾವುದೇ ಕಾರಣಕ್ಕೂ ತಂಬಾಕು ಸಂಬಂಧಿ ಜಾಹೀರಾತುಗಳನ್ನು ಅಂಟಿಸುವಂತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸರ್ಕಾರಿ ಬಸ್ಗಳಲ್ಲಿ ಇರುತ್ತಿದ್ದ ತಂಬಾಕು ಕಂಪನಿಗಳ ಜಾಹೀರಾತಿಗೆ ಬ್ರೇಕ್ ಬಿದ್ದಿದೆ.
ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡುವ ಸರ್ಕಾರ ಒಂದೆಡೆಯಾದರೆ ಸರ್ಕಾರದ ಅಧೀನದಲ್ಲೇ ಬರುವ ಸಾರಿಗೆ ಇಲಾಖೆಯ ಬಸ್ಗಳಲ್ಲಿ ಪಾನ್ ಮಸಾಲಾ ಕಂಪನಿಗಳ ಜಾಹೀರಾತುಗಳು ಸಾರ್ವಜನಿಕರಿಗೆ ಇರಿಸು ಮುರಿಸು ಉಂಟು ಮಾಡಿತ್ತು . ಈ ಬಗ್ಗೆ ಸಾರಿಗೆ ಇಲಾಖೆಗೆ ಸಾರ್ವಜನಿಕರಿಂದ ಅನೇಕ ಬಾರಿ ದೂರು ಕೂಡ ಕೇಳಿ ಬಂದಿತ್ತು. ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ಕ್ರಮ ಹೊರಡಿಸಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಬಿಗ್ ರಿಲೀಫ್: ಫಾಸ್ಟ್ಟ್ಯಾಗ್ KYC ನವೀಕರಣ ನಿಯಮಾವಳಿಗಳಲ್ಲಿ ಬದಲಾವಣೆ
ಎಸ್‌ಆರ್‌ಟಿಸಿ ,ಬಿಎಂಟಿಸಿ , ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ನಾಲ್ಕೂ ನಿಗಮಗಳ ಬಸ್ಸುಗಳಿಗೆ ಅನ್ವಯವಾಗಲಿದೆ. ಈ ವಿಚಾರವಾಗಿ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರಕ್ಕೆ ಆದಾಯಕ್ಕಿಂತ ಸಾರ್ವಜನಿಕರ ಆರೋಗ್ಯ ಮುಖ್ಯ. ನಿಯಮ ಮೀರಿ ಯಾವುದಾದರೂ ಬಸ್ಗಳಲ್ಲಿ ಈ ಮಾದರಿಯ ಜಾಹೀರಾತು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.



