ರಾಜ್ಯಕ್ಕೆ ಮತ್ತೊಮ್ಮೆ ಜಲಸಂಕಷ್ಟ : ತಮಿಳುನಾಡು – ಕರ್ನಾಟಕ ಶುರು ಜಲಸಮರ
ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ಜಲವಿವಾದ ಹೊಸ ವಿಚಾರವೇನಲ್ಲ. ಮಹದಾಯಿ, ಕೃಷ್ಣಾ , ಕಾವೇರಿ ಹೀಗೆ ಕರ್ನಾಟಕದ ಬಹುತೇಕ ಪ್ರಮುಖ ನದಿಗಳು ನ್ಯಾಯಾಧೀಕರಣದಲ್ಲಿ ಹೋರಾಟದ ಹಂತದಲ್ಲಿಯೇ ಇದೆ. ಈ ಎಲ್ಲದರ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ರಾಜ್ಯದಲ್ಲಿ ಉಗಮಗೊಂಡು ತಮಿಳುನಾಡಿನತ್ತ ಹರಿಯುವ ದಕ್ಷಿಣ ಪಿನಾಕಿನಿ ಅಥವಾ ಮಾರ್ಕಾಂಡೇಯ ನದಿ ನೀರು ಹಂಚಿಕೆ ವಿವಾದದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಪೆನ್ನಿಯಾರ್ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಾಧೀಕರಣ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹಾಗೂ ಈ ಕುರಿತು 1 ತಿಂಗಳ ಒಳಗಾಗಿ ಅಧಿಸೂಚನೆ ಹೊರಡಿಸುವಂತೆಯೂ ಸೂಚಿಸಲಾಗಿದೆ. ಇದರಿಂದ ಕರ್ನಾಟಕ ಇನ್ಮುಂದೆ ಮತ್ತೊಂದು ಹೊರ ಜಲಸಮರಕ್ಕೆ ಅಣಿಯಾಗಬೇಕಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್‌ಗೆ ಬಹುದೊಡ್ಡ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ!
ನಂದಿ ಬೆಟ್ಟದಲ್ಲಿ ಉಗಮಗೊಳ್ಳುವ ಪಿನಾಕಿನಿ ನದಿಯು ಬಳಿಕ ತಮಿಳುನಾಡಿಗ ಪ್ರವೇಶ ಪಡೆಯುತ್ತದೆ. ಆದರೆ ಇದಕ್ಕೆ ಅಡ್ಡಲಾಗಿ ಕರ್ನಾಟಕದಿಂದ ಅಣೆಕಟ್ಟು ನಿರ್ಮಿಸಲಾಗಿದ್ದು ಹೊಸಕೋಟೆ ಭಾಗದ ಜನತೆಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಇದರಿಂದಾಗಿ ನಮ್ಮ ಪಾಲಿಗೆ ಸಿಗಬೇಕಾದ ನೀರು ಸಿಗುತ್ತಿಲ್ಲ ಎಂಬುದು ತಮಿಳುನಾಡಿನ ವಾದವಾಗಿದೆ. ಈ ಕುರಿತು ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಂನಾಥ್ ಹಾಗೂ ಎನ್.ವಿ ಅಂಜಾರಿಯಾ ನೇತೃತ್ವದ ಪೀಠ ಕೇಂದ್ರ ಸರ್ಕಾರಕ್ಕೆ ನ್ಯಾಯಮಂಡಳಿ ರಚಿಸುವಂತೆ ಸೂಚನೆ ನೀಡಿದೆ.



