Sharavati Pump Project: ಶರಾವತಿ ಪಂಪ್‌ ಯೋಜನೆಗೆ ವಿರೋಧ : ಕೇದಾರನಾಥದಲ್ಲಿ ಉತ್ತರ ಕನ್ನಡ ಭಕ್ತರಿಂದ ಪ್ರಾರ್ಥನೆ

ಕಾರವಾರ: Sharavati Pump Project: ಕರಾವಳಿಗೆ ಮಾರಕವಾಗಿರುವ ಶರಾವತಿ ಪಂಪ್‌ ಯೋಜನೆಯನ್ನು ಖಂಡಿಸಿ ಇಬ್ಬರು ಯುವಕರು ಉತ್ತರಾಖಂಡದ ಕೇದಾರನಾಥ(Kedaranath) ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಭಿಷೇಕ್‌ ಕಳಸ ಮತ್ತು ಹೊನ್ನಾವರದ ವಿನಾಯಕ ನಾಯ್ಕ್‌ ಎಂಬವರು ಧಾರ್ಮಿ ಯಾತ್ರೆಯ ಜೊತೆಗೆ ಪರಿಸರ ಜಾಗೃತಿ ಸಂದೇಶವನ್ನು ಸಾರಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕೇದಾರನಾಥ ದೇವಸ್ಥಾನದ ಪವಿತ್ರ ವಾತಾವರಣದಲ್ಲಿ ಭಕ್ತಿಪೂರ್ವಕ ಪೂಜೆ ಸಲ್ಲಿಸಿದ ಅವರು, ತಮ್ಮ ಜಿಲ್ಲೆಯಲ್ಲಿ ಸರ್ಕಾರದ ಯೋಜನೆ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಶರಾವತಿ ಪಂಪ್ ಯೋಜನೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

Also Read: ಹೊನ್ನಾವರ : ನಾಳೆ ಈ ಭಾಗಗಳಲ್ಲಿ ಪವರ್‌ ಕಟ್‌

ಉತ್ತರ ಕನ್ನಡ ಜಿಲ್ಲೆಗೆ ಈ ಯೋಜನೆ ಅನಿವಾರ್ಯವೇ ಅಲ್ಲ. ಈ ಯೋಜನೆಯಿಂದಾಗಿ ಸ್ಥಳೀಯ ಪರಿಸರ, ಜನರ ಹಿತಾಸಕ್ತಿಗೆ ಗಂಭೀರ ಹಾನಿ ಉಂಟು ಮಾಡುತ್ತದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಬಾರದು ಎಂದು ದೇವರಿಗೆ ಮೊರೆಯಿಟ್ಟಿದ್ದಾರೆ.

ಕೇದಾರನಾಥ ಯಾತ್ರೆಯಲ್ಲಿ ಅಭಿಷೇಕ ಕಳಸ ಮತ್ತು ವಿನಾಯಕ ನಾಯ್ಕ್ ಅವರು ಕೇದಾರ್ನಾಥೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, “ಈ ಯೋಜನೆಯಿಂದ ನಮ್ಮ ತಾಯ್ನಾಡಿನ ಪರಿಸರ, ನದಿ ಜಲಸಂಪನ್ಮೂಲ ಮತ್ತು ಭೂಮಿಗೆ ಯಾವುದೇ ಹಾನಿಯಾಗದಂತೆ ದೇವರು ರಕ್ಷಣೆ ಮತ್ತು ಮಾರ್ಗದರ್ಶನ ನೀಡಬೇಕು ಎಂದು ವಿನಂತಿಸಿದ್ದಾರೆ.

Also read: ಊರಿಗೆ ಹೋಗ್ಲಿಕ್ಕೆ ಮನಸ್ಸುಂಟು, ಆದರೆ ಬಸ್​ ರೇಟ್​ ತಲೆ ತಿರುಗಿಸುತ್ತಾ ಉಂಟು’ : ದೀಪಾವಳಿಗೆ ಖಾಸಗಿ ಬಸ್​​ ಮಾಲೀಕರಿಂದ ಹಗಲು ದರೋಡೆ

ಉತ್ತರ ಕನ್ನಡ ಈ ಯುವಕರು ಧಾರ್ಮಿಕ ಆಚರಣೆಯ ಜೊತೆಗೆ ಪರಿಸರ ಕಾಳಜಿಯನ್ನು ತೋರಿರುವುದು ಸಾರ್ವಜನಿಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories