ಅಶೋಕ ಜನಮನ ಆಯೋಜಕರ ಎಡವಟ್ಟು : ಕೊನೆಗೂ ಕ್ಷಮೆಯಾಚಿಸಿದ ಶಾಸಕ ಅಶೋಕ್‌ ರೈ

ಪುತ್ತೂರು : ಶಾಸಕ ಅಶೋಕ ರೈ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಅಶೋಕ ಜನ ಮನ (Puttur ashok janaman) ಕಾರ್ಯಕ್ರಮದಲ್ಲಿನ ಘಟನೆಗೆ ಆಯೋಜಕರ ನಿರ್ಲಕ್ಷ್ಯವೇ ಕಾರಣ ಅನ್ನೋ ಆರೋಪ ಕೇಳಿಬಂದಿದೆ. ಅಲ್ಲದೇ ಶಾಸಕ ಅಶೋಕ್‌ ರೈ ಕ್ಷಮೆಯಾಚಿಸಿದ್ದಾರೆ.

ರೈ ಎಸ್ಟೇಟ್ಸ್ ಆ್ಯಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಶಾಸಕ ಅಶೋಕ್‌ ರೈ ವರ್ಷಂಪ್ರತಿ ಅಶೋಕ ಜನಮನ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ದೀಪಾವಳಿಯ ದಿನದಂದು ಜನರಿಗೆ ತಟ್ಟೆ, ಬಟ್ಟೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶ.

ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಆದರೆ ಕಾರ್ಯಕ್ರಮ ಮುಕ್ತಾಯವಾಗುವುದು ತಡವಾಗಿತ್ತು. ಕಾರ್ಯಕ್ರಮ ಮುಗಿಯುತ್ತಲ್ಲೇ ನೂಕು ನುಗ್ಗಲು ಉಂಟಾಗಿ 11 ಮಂದಿ ಅಸ್ವಸ್ತಗೊಂಡಿದ್ದಾರೆ.

Puttur ashok janamana programe incident mla ashok rai apology

Puttur ashok janaman : ಶಾಸಕರ ನಿರ್ಲಕ್ಷ್ಯದಿಂದಲೇ ಘಟನೆ..?

ಅಶೋಕ ಜನಮನ ಕಾರ್ಯಕ್ರಮಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಅನ್ನೋ ಬಗ್ಗೆ ಸ್ವತಃ ಅಶೋಕ್‌ ರೈ ಹೇಳಿಕೆಯನ್ನು ನೀಡಿದ್ದರು. ಆದರೂ ಕೂಡ ತೀರಾ ಕಡಿಮೆ ಸಂಖ್ಯೆಯಲ್ಲಿ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಹಿಳೆಯರು ಸಣ್ಣ ಮಕ್ಕಳನ್ನು ಕರೆದುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರ ಭಾಷಣ ಮುಗಿದ ನಂತರ ಊಟದ ವ್ಯವಸ್ಥೆ ಮಾಡಲಾಗಿದೆ.

ಕಿಟ್‌ ವಿತರಣೆಗೂ ಸರಿಯಾದ ವ್ಯವಸ್ಥೆ ಮಾಡದೇ ಇರುವ ಕಾರಣದಿಂದಲೇ ನೂಕು ನುಗ್ಗಲು ಉಂಟಾಗಿತ್ತು. ತಾಲೂಕು ಕ್ರೀಡಾಂಗಣದಲ್ಲಿ ಸಾಮರ್ಥ್ಯಕ್ಕಿಂತಲೂ ಅಧಿಕ ಸಂಖ್ಯೆಯನ್ನು ಜನರು ಆಗಮಿಸಿದ್ದೇ ಘಟನೆಗೆ ಕಾರಣ.

Also Read : ಶರಾವತಿ ಪಂಪ್‌ ಯೋಜನೆಗೆ ವಿರೋಧ : ಕೇದಾರನಾಥದಲ್ಲಿ ಉತ್ತರ ಕನ್ನಡ ಭಕ್ತರಿಂದ ಪ್ರಾರ್ಥನೆ

ಪ್ರಚಾರಕ್ಕೆ ನೀಡಿದ ಆದ್ಯತೆ ಜನರ ಸುರಕ್ಷತೆಗೆ ಇರಲಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚು ಸಕ್ರೀಯರಾಗಿರುವ ಶಾಸಕ ಅಂತಾ ಕರೆಯಿಸಿಕೊಳ್ಳುತ್ತಿರುವ ಅಶೋಕ್‌ ರೈ ತನ್ನ ಕಾರ್ಯಕ್ರಮಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸೇರ್ತಾರೆ ಅನ್ನೋ ಅರಿವಿತ್ತು.

ಕಾರ್ಯಕ್ರಮಕ್ಕಾಗಿ ತಿಂಗಳ ಹಿಂದಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರವನ್ನು ನೀಡಿದ್ದರು. ಆದರೆ ಪ್ರಚಾರಕ್ಕೆ ನೀಡಿದ ಆದ್ಯತೆಯನ್ನು ಶಾಸಕರು ಜನರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಗಮನ ಕೊಡಲಿಲ್ಲ ಅನ್ನೋ ಆರೋಪವಿದೆ.

Puttur ashok janamana programe incident mla ashok rai apology

ಪೊಲೀಸರ ಸೂಚನೆಗೂ ಡೋಂಟ್‌ಕೇರ್‌

ಕಾರ್ಯಕ್ರಮ ನಡೆಯುವ ಒಂದು ದಿನದ ಮೊದಲೇ ದಕ್ಷಿಣ ಕನ್ನಡ ಎಸ್‌ಪಿ ಅರುಣ್‌ ಅವರು ಖುದ್ದು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ್ದಾರೆ.

ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಸುರಕ್ಷತೆಗಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋ ಕುರಿತು ಕೆಲವೊಂದು ಸೂಚನೆಗಳನ್ನು ನೀಡಿದ್ದರು.

ಪುತ್ತೂರು ಶಾಸಕ ಅಶೋಕ್‌ ರೈ ಅವರ ನೇತೃತ್ವದಲ್ಲಿಯೇ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕೂಡ ಜನರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಹೆಚ್ಚುವರಿ ಆಸನದ ವ್ಯವಸ್ಥೆ ಮಾಡುವಂತೆ ಪೊಲೀಸರೇ ಸೂಚಿಸಿದ್ದರೂ ಕೂಡ ಶಾಸಕರು ತಲೆ ಕೆಡಿಸಿಕೊಂಡಿರಲಿಲ್ಲ.

Aslo Read : ಫುತ್ತೂರು ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕು ನುಗ್ಗಲು : 11ಕ್ಕೂ ಅಧಿಕ ಮಂದಿ ಅಸ್ವಸ್ಥ

ಕೊನೆಗೂ ಕ್ಷಮೆಯಾಚಿಸಿದ ಶಾಸಕ ಅಶೋಕ್‌ ರೈ

ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಘಟನೆಯ ಬೆನ್ನಲ್ಲೇ ಶಾಸಕ ಅಶೋಕ್‌ ರೈ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾರೆ.

ನಿರೀಕ್ಷೆ ಮಾಡದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ ಕಾರಣದಿಂದಲೇ ಈ ಘಟನೆ ನಡೆದಿದೆ. ಮಧ್ಯಾಹ್ನ ಗಾಳಿ, ಮಳೆ ಬಂದ ಕಾರಣದಿಂದ ನೂಕು ನುಗ್ಗಲು ಉಂಟಾಗಿ ಜನರು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡವರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಈ ಘಟನೆಯಿಂದ ಕೆಲವರ ಮನಸ್ಸಿಗೆ ನೋವಾಗಿದ್ದರೆ, ಬೇಸರವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

Puttur ashok janamana programe incident mla ashok rai apology

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories