ಮಂಗಳೂರು : ಮಲಯಾಲಂ ಖ್ಯಾತ ನಟ ಜಯಕೃಷ್ಣನ್ ಅರೆಸ್ಟ್
ಮಂಗಳೂರು: Malayalam actor jayakrishnan arrest: ಕ್ಯಾಬ್ ಚಾಲಕನನ್ನು ಟೆರರಿಸ್ಟ್ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಮಲಯಾಲಂ ಖ್ಯಾತ ನಟ ಜಯಕೃಷ್ಣನ್‌ನ್ನು ಬಂಧಿಸಿದ್ದಾರೆ.
ಅಕ್ಟೋಬರ್ 9 ರಂದು ಮಂಗಳೂರು ನಗರದ ಬಿಜೈ ಬಳಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳಲು ಆನ್‌ಲೈನ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಚಾಲಕ ಶಫೀಕ್ ಅಹ್ಮದ್ ಪಿಕ್‌ಅಪ್ ಸ್ಥಳವನ್ನು ದೃಢೀಕರಿಸು ಕರೆ ಮಾಡಿದಾಗ, ನಟ ಮಲಯಾಲಂನಲ್ಲಿ ಮಾತಾಡುವಂತೆ ಒತ್ತಾಯಿಸಿದ್ದಾರೆ.
ಆದರೆ ಚಾಲಕ ಶಫೀಕ್ ಕನ್ನಡದಲ್ಲಿ ಮಾತನಾಡಿದಾಗ ಜಯಕೃಷ್ಣನ್ ಮತ್ತು ಆತನ ಸಹಚರರು ಕ್ಯಾಬ್ ಚಾಲಕನನ್ನು ಟೆರರಿಸ್ಟ್ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಕ್ಯಾಬ್ ಬುಕ್ ಮಾಡಿ ನಂತರ ರೈಡ್ ರದ್ದುಪಡಿಸಿ ಚಾಲಕನಿಗೆ ತೊಂದರೆ ನೀಡಿದ್ದಾರೆಂದು ಆರೋಪಿಸಲಾಗಿದೆ.
Also Read: ಪಕ್ಷ ನಿಷ್ಠೆಗೆ ಮಣೆ : ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗೆ ಮೆಸ್ಕಾಂ ಅಧ್ಯಕ್ಷ ಸ್ಥಾನ
ಈ ಕುರಿತು ಶಫೀಕ್ ಅಹ್ಮದ್ ಉರ್ವ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಮಲಯಾಲಂ ನಟ ಜಯಕೃಷ್ಣನ್, ಸಂತೋಷ್ ಅಬ್ರಾಹಂ ಮತ್ತು ವಿಮಲ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಮಂಗಳೂರು(Mangaluru) ಉರ್ವಾ ಠಾಣೆಯ ಪೊಲೀಸರು ನಟ ಜಯಕೃಷ್ಣನ್, ಸಂತೋಷ್, ಅಬ್ರಾಹಂ, ವಿಮ್‌ನನ್ನು ಬಂಧಿಸಿದ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೋರ್ವನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಹೌ ಓಲ್ಡ್ ಆರ್ ಯೂ ?, ಪುಲಿಮುರುಗನ್, ಒನ್, ಸಿಬಿಐ 5, ಸ್ವಯಂವರ ಪಂಥಲ್, ದಿ ವಾರಂಟ್, ಒರು ಚೆರು ಪುಂಚಿರಿ, ಚಂದ್ರೋಲ್ಸವಂ, ಶೇಕ್ಸ್‌ಪಿಯರ್ ಎಂ.ಎ. ಮಲಯಾಳಂ, ಪರುಂಥು,ರೆಡ್ ವೈನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜಯಕೃಷ್ಣನ್ ಅವರು 1997 ರಲ್ಲಿ ‘ನಿನವುಕಲ್ ನೋವುಕಲ್’ ಎಂಬ ಧಾರಾವಾಹಿಯ ಮೂಲಕ ನಟನಾಗಿ ಗುರುತಿಸಿಕೊಂಡಿದ್ದರು. ಸಿನಿಮಾದ ಜೊತೆಗೆ ದೂರದರ್ಶನ ಧಾರಾವಾಹಿ ಮತ್ತು ನಿರೂಪಕರಾಗಿಯೂ ಕೆಲಸ ಮಾಡಿದ್ದರು.
Also read: ಮಂಗಳೂರು : ಮನಪಾದಲ್ಲಿ ಕನ್ನಡ ಬಾರದ ಅಧಿಕಾರಿ ನೇಮಕ : ಸಾರ್ವಜನಿಕರ ಆಕ್ರೋಶ



