ಹೈವೆ ಪಕ್ಕದಲ್ಲಿ ಪಾರ್ಕಿಂಗ್ ನಿಷೇಧ : ಸುಪ್ರೀಂ ಕೋರ್ಟ್ನಿಂದ ಮಹತ್ವದ ಆದೇಶ
ಒಂದೊಮ್ಮೆ ಹೆದ್ದಾರಿಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ, ಕೂಡಲೇ ಟೋಯಿಂಗ್ ಮಾಡಲಾಗುತ್ತದೆ. ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಮಾಲೀಕರಿಗೆ ಬಾರೀ ಮೊತ್ತದ ದಂಡ ವಿಧಿಸಲಾಗುತ್ತದೆ.
ನವದೆಹಲಿ : ಹೆದ್ದಾರಿಗಳಲ್ಲಿ ಸಾಗುವಾಗ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯುವ ಅಥವಾ ಹರಟೆ ಹೊಡೆಯುವ ಅಭ್ಯಾಸ ನಿಮಗಿದೆಯೇ ? ಹಾಗಿದ್ದರೆ, ಇನ್ಮುಂದೆ ಇದಕ್ಕೆ ಅವಕಾಶ ಇರೋದಿಲ್ಲ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ಹಾಗೂ ಮಹತ್ವದ ಆದೇಶವನ್ನು ಜಾರಿಗೆ ತಂದಿದೆ.
ಹೆದ್ದಾರಿಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುವುದರಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಹೆದ್ದಾರಿಯು ವಾಹನಗಳ ಸುಗಮ ಸಂಚಾರಕ್ಕಾಗಿ ಇದೆಯೇ ಹೊರತು ನಿಲುಗಡೆಗೆ ಅಲ್ಲ ಎಂದು ಹೇಳಿದೆ. ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆ ಹಾಗೂ ಟರ್ನ್ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ.
ರಾತ್ರಿ ವೇಳೆ ಅಥವಾ ಮಂಜು ಮುಸುಕಿದ ಸಮಯದಲ್ಲಿ ಹೆದ್ದಾರಿ ಬದಿ ನಿಂತಿರುವ ವಾಹನಗಳಿಗೆ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆದು ಅನೇಕ ಜೀವಗಳು ಬಲಿಯಾಗುತ್ತಿವೆ. ಅಕ್ರಮ ಪಾರ್ಕಿಂಗ್ನಿಂದಾಗಿ ವೇಗವಾಗಿ ಚಲಿಸುವ ವಾಹನಗಳಿಗೆ ಅಡ್ಡಿಯುಂಟಾಗುತ್ತಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತ್ತಿದೆ. ನಿಂತಿರುವ ವಾಹನಗಳನ್ನು ತಪ್ಪಿಸಲು ಚಾಲಕರು ದಿಢೀರನೆ ಲೇನ್ ಬದಲಿಸುವುದು ಭೀಕರ ಅಪಘಾತಗಳಿಗೆ ದಾರಿಯಾಗುತ್ತಿದೆ.
ಇದನ್ನೂ ಓದಿ: SSLC ರಿಸಲ್ಟ್ ಮುಂದೂಡಿಕೆ ? ‘ಗ್ರೇಡಿಂಗ್’ ವಿವಾದ ಈಗ ಹೈಕೋರ್ಟ್ ಅಂಗಳಕ್ಕೆ: ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ
ಒಂದೊಮ್ಮೆ ಹೆದ್ದಾರಿಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ, ಕೂಡಲೇ ಟೋಯಿಂಗ್ ಮಾಡಲಾಗುತ್ತದೆ. ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಮಾಲೀಕರಿಗೆ ಬಾರೀ ಮೊತ್ತದ ದಂಡ ವಿಧಿಸಲಾಗುತ್ತದೆ. ಇನ್ಮುಂದೆ ಹೆದ್ದಾರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ವಾಹನಗಳ ಸಂಚಾರದ ಮೇಲೆ ನಿಗಾ ಇಡಲಾಗುತ್ತಿದೆ. ಅಲ್ಲದೇ ಆನ್ಲೈನ್ ಚಲನ್ ಕೂಡ ಜನರೇಟ್ ಆಗಲಿದೆ.
ಒಂದೊಮ್ಮೆ ಹೆದ್ದಾರಿಯಲ್ಲಿ ಸರ್ಕಾರ ಗುರುತಿಸಿರುವ ಅಧಿಕೃತ ಪಾರ್ಕಿಂಗ್ ತಾಣಗಳು ಅಥವಾ ವಿಶ್ರಾಂತಿ ಗೃಹಗಳಲ್ಲಿ ಮಾತ್ರವೇ ವಾಹನಗಳನ್ನು ನಿಲ್ಲಿಸಬೇಕು. ಅಲ್ಲದೇ ಸುರಕ್ಷಿತವೆನಿಸುವ ಟೋಲ್ ಪ್ಲಾಜಾಗಳ ಬಳಿಯ ನಿಗದಿತ ಜಾಗಗಳಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರವೇ ಎಮರ್ಜೆನ್ಸಿ ಲೇನ್ ಬಳಸ ಬಹುದು. ಆದರೆ ಅಲ್ಲಿಯೂ ಎಚ್ಚರಿಕೆ ಲೈಟ್ಗಳನ್ನು ಆನ್ ಮಾಡುವುದು ಕಡ್ಡಾಯ.



