ಆಹಾ ಚಹಾ..! ಚಳಿಗಾಲದಲ್ಲಿ ಚಮತ್ಕಾರ ಮಾಡುವ ಬೆಲ್ಲದ ಚಹಾ

Benefits of Jaggery Tea: ದಟ್ಟ ಮಂಜು ಕವಿದ ವಾತಾವರಣ, ಮನೆಯ ಒಳಗೂ, ಹೊರಗೂ ಒಂದೇ ಸಮನಾದ ಚಳಿ, ಬೆಚ್ಚಗಿನ ಉಡುಪು, ಬಿಸಿ ಬಿಸಿ ಆಹಾರ ಇವೆಲ್ಲವು ಚಳಿಗಾಲದ ಒಂದು ಚಿತ್ರಣ.

ಚಳಿಗಾಲದಲ್ಲಿ ಏನಾದರೂ ಬಿಸಿ ಬಿಸಿ ಪಾನೀಯ ಕುಡಿಯಬೇಕೆಂದರೆ ತಕ್ಷಣ ನಮ್ಮ ನೆನಪಿಗೆ ಬರುವುದು ಹಬೆಯಾಡುವ ಕಾಫಿ, ಟೀ, ಸೂಪ್‌ಗಳು.

ಬಿಸಿ ಬಿಸಿ ಪಾನೀಯಗಳು ಗಂಟಲೊಳಗೆ ಇಳಿಯುತ್ತಿದ್ದಂತೆ ಆಹಾ! ಎಂಬ ಉದ್ಘಾರ ಮೂಡದೇ ಇರುದು. ಆದರೆ ಬೆಲ್ಲದ ಚಹಾದ ಗಮ್ಮತ್ತೇ ಬೇರೆ. ಇದು ವಿಶಿಷ್ಟವಾದ ಅನುಭವವನ್ನು ಕೊಡುತ್ತದೆ.

ಚಳಿ ಓಡಿಸಲೆಂದು ಕುಡಿಯುವ ಬೆಲ್ಲದ ಚಹಾ ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಬಲ್ಲದು ಎಂದರೆ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು. ಸಕ್ಕರೆ ಬೆರೆಸಿ ತಯಾರಿಸಿರುವ ಚಹಾಗಿಂತ ಸ್ವಲ್ಪ ಬೇರೆಯ ರುಚಿ ನೀಡುವ ಈ ಚಹಾ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡಬಲ್ಲದು.

ಕಬ್ಬಿಣ, ಮ್ಯಾಗ್ನೇಸಿಯಂ ಸೇರಿದಂತೆ ಅನೇಕ ಖನಿಜಗಳನ್ನು ಹೊಂದಿರುವ ಬೆಲ್ಲ ಚಳಿಗಾಲದಲ್ಲಿ ದೇಹವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ಚಮತ್ಕಾರ ಮಾಡಬಲ್ಲ ಬೆಲ್ಲದ ಚಹಾದಿಂದ ಏನೇನು ಪ್ರಯೋಜನಗಳು ಸಿಗುತ್ತವೆ? ಇಲ್ಲಿದೆ ಓದಿ.

ದೇಹದ ಉಷ್ಣತೆ ಕಾಪಾಡುತ್ತದೆ

ಚಳಿಗಾಲದಲ್ಲಿ ಬೆಚ್ಚಗಿರಲು ಒಂದು ಕಪ್ ಬೆಲ್ಲದ ಚಹಾ ಉತ್ತಮ ಮಾರ್ಗವಾಗಿದೆ. ಸಕ್ಕರೆ ಬದಲಿಗೆ ಬೆಲ್ಲದ ಚಹಾ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೆಲ್ಲದಲ್ಲಿರುವ ಖನಿಜಗಳು ದೇಹಕ್ಕೆ ಉಷ್ಣತೆಯನ್ನು ನೀಡುತ್ತವೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಚಳಿಗಾಲದಲ್ಲಿ ಅಜೀರ್ಣ ಸಮಸ್ಯೆ ಹೆಚ್ಚು ಜನರನ್ನು ಕಾಡುತ್ತದೆ. ಹೊಟ್ಟೆಯುಬ್ಬರ, ಮಲಬದ್ಧತೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ. ಬೆಲ್ಲ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ದೂರಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಜೀರ್ಣಕ್ರಿಯೆ ಉತ್ತೇಜಿಸಲು ಬೆಲ್ಲದ ಚಹಾ ಸಹಕಾರಿಯಾಗಿದೆ.

ಆಯಾಸ, ನಿದ್ರಾಹೀನತೆ ದೂರಮಾಡುತ್ತದೆ

ಬೆಲ್ಲ ನಿಧಾನವಾಗಿ ಶಕ್ತಿಯನ್ನು ಬಿಡುಗಡೆಮಾಡುತ್ತದೆ. ಆದ್ದರಿಂದ ಇದು ಚಳಿಗಾಲದ ಆಯಾಸ ಮತ್ತು ನಿದ್ದೆಯ ಕೊರತೆಯನ್ನು ದೂರಮಾಡುತ್ತದೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಸ್ಪೆಷಲ್‌ ಜೋಳದ ರೊಟ್ಟಿ ರೆಸಿಪಿ ಇಲ್ಲಿದೆ

ರಕ್ತದ ಹರಿವು ಸುಧಾರಿಸುತ್ತದೆ

ಬೆಲ್ಲವು ಕಬ್ಬಿಣದ ಉತ್ತಮ ಮೂಲವಾಗಿದೆ. ಇದು ಹಿಮೋಗ್ಲೋಬಿನ್‌ ಮಟ್ಟವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories