ಆರೋಗ್ಯಕರ ಕರುಳಿಗೂ ಮನಸ್ಸಿಗೂ ಏನಾದರೂ ಸಂಬಂಧವಿದೆಯಾ? ಹೌದು ಎನ್ನುತ್ತಿದೆ ವಿಜ್ಞಾನ
Gut Health- Mental Health : ನಿಮಗೆ ಎಂದಾದರೂ ಹೀಗೆ ಆಗಿದ್ದುಂಟಾ ? ನೀವು ತುಂಬಾ ಒತ್ತಡದಲ್ಲಿದ್ದೀರಿ, ಅದೇ ಸಮಯದಲ್ಲಿ ನಿಮ್ಮ ಹೊಟ್ಟೆಯು ಕೆಟ್ಟಿದೆ. ಈ ಅನುಭವ ನಿಮಗಾಗಿದೆಯಾ? ಏಕೆಂದರೆ ವಿಜ್ಞಾನ ಅದನ್ನೇ ಹೇಳುತ್ತಿದೆ. ಕರುಳಿನ ಆರೋಗ್ಯಕ್ಕೂ, ಮಾನಸಿಕ ಆರೋಗ್ಯಕ್ಕೂ ನೇರ ಸಂಬಂಧವಿದೆಯಂತೆ. ಹೇಗೆ ? ಇಲ್ಲಿದೆ ಓದಿ.
ನೀವು ಈ ಮಾತನ್ನು ಬಹಳಷ್ಟು ಸಲ ಕೇಳಿರಬಹುದು ‘ನನ್ನ ಹೊಟ್ಟೆ ಕೆಟ್ಟಿದೆ, ಅದಕ್ಕಾಗಿ ಮೂಡ್ ಕೂಡಾ ಕೆಟ್ಟಿದೆ’. ಇಂತಹ ಮಾತುಗಳು ಪ್ರತಿದಿನ ಯಾರಾದರೊಬ್ಬರು ಹೇಳುವುದನ್ನು ಮನೆಯಲ್ಲಿ ಅಥವಾ ಕಛೇರಿಯಲ್ಲಿ ಕೇಳಿರಬಹುದು. ನೀವು ಬಹಳ ಸಂತೋಷದಲ್ಲಿದ್ದಾಗ ನಿಮ್ಮ ಹೊಟ್ಟೆಯೂ ಆರೋಗ್ಯವಾಗಿರುವುದನ್ನು ಗಮನಿಸಿರಬಹುದು.
ನಿಮ್ಮ ಮೂಡ್ ಸರಿಯಿದ್ದಾಗ ನೀವೇನೇ ತಿಂದರೂ ಅದು ರುಚಿಯಾಗಿದೆ ಮತ್ತು ಬಹಳ ಬೇಗನೆ ಜೀರ್ಣವಾಗಿದೆ ಎಂದು ಅನಿಸುತ್ತದೆ. ಅದೇ ನಿಮ್ಮ ಮೂಡ್ ಹಾಳಾದಾಗ, ನಿಮ್ಮ ಎದುರಿಗೆ ರುಚಿಯಾದ ಆಹಾರವಿದ್ದರೂ ಅದು ರುಚಿಸುವುದಿಲ್ಲ. ಅಂದರೆ ಮೆದುಳಿಗೂ ಕರುಳಿಗೂ ಏನೋ ಸಂಬಂಧವಿರಬಹುದೇ? ಹೌದು! ಎನ್ನುತ್ತದೆ ವಿಜ್ಞಾನ.
Also Read : Vastu Homes : ಮನೆ ಹೇಗಿರಬೇಕು ? ಏನು ಹೇಳುತ್ತೆ ವಾಸ್ತುಶಾಸ್ತ್ರ
ನಮ್ಮ ಮೆದುಳಿಗೂ, ಕರುಳಿಗೂ ನೇರ ಸಂಪರ್ಕವಿದೆ. ಆರೋಗ್ಯಕರ ಮೆದುಳು, ಆರೋಗ್ಯಕರ ಕರುಳು. ಇದನ್ನು ಗಟ್– ಬ್ರೈನ್ ಆಕ್ಸಿಸ್ ಎಂದು ಕರೆಯುತ್ತಾರೆ. ಮಾನಸಿಕ ಆರೋಗ್ಯ ಸರಿ ಇಲ್ಲದಿದ್ದರೆ ಅದು ನೇರವಾಗಿ ಕರುಳಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಕರುಳು ಮತ್ತು ಮೆದುಳಿಗೂ ಯಾವ ರೀತಿ ಸಂಬಂಧವಿದೆ ಎಂದು ತಿಳಿಯೋಣ.
Gut Health- Mental Health : ಕರುಳಿನ ಆರೋಗ್ಯಕ್ಕೂ ಮೆದುಳಿನ ಆರೋಗ್ಯಕ್ಕೂ ಏನಿದೆ ಸಂಬಂಧ ?
ನಮ್ಮ ಕರುಳಿನಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳು ಇವೆ. ಅವುಗಳನ್ನು ಗಟ್ ಮೈಕ್ರೋಬಯೋಮ್ ಎಂದು ಕರೆಯುತ್ತಾರೆ. ಈ ಬ್ಯಾಕ್ಟೀರಿಯಾಗಳು ಸಿರೊಟೋನಿನ್, ಡೋಪಮೈನ್ ಮುಂತಾದ ನ್ಯೂರೋಟ್ರಾನ್ಸಮೀಟರ್ಸ್ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಇದು ನಿಮಗೆ ಆಶ್ಚರ್ಯವೆನಿಸಿದರೂ ಸತ್ಯ. ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾಗಳಲ್ಲಿ ಅಸಮತೋಲನವಿದ್ದಾಗ ಅದು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
Also Read : ಜುಲೈ 1 ರಿಂದ ಹೊಸ ರೂಲ್ಸ್ : ಆಧಾರ್, ಪ್ಯಾನ್, ಯುಪಿಐ, ತತ್ಕಾಲ್ ಟಿಕೆಟ್ ನಿಯಮ ತಿಳಿದುಕೊಳ್ಳಿ
ಅದು ಖಿನ್ನತೆ, ಆತಂಕ ಮತ್ತು ಕಿರಿಕಿರಿಯ ಅನುಭವವನ್ನು ಉಂಟು ಮಾಡುತ್ತದೆ. ಇದೇ ರೀತಿ ನೀವು ಹೆಚ್ಚು ಒತ್ತಡ, ಮಾನಸಿಕ ಕ್ಷೋಬೆಗೆ ಒಳಗಾಗಿದ್ದಾಗ ಅದು ಕರುಳಿನಲ್ಲಿರುವ ಮೈಕ್ರೋಬಯೋಮ್‌ಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
Gut Health- Mental Health : ಉರಿಯೂತ ಮತ್ತು ಮಾನಸಿಕ ಸಮಸ್ಯೆಗಳು
ಕರುಳಿನ ಕಾರ್ಯಕ್ಷಮತೆ ಕಡಿಮೆಯಿದ್ದರೆ ಅದು ದೇಹದಲ್ಲಿ ದೀರ್ಘಕಾಲದ ಉರಿಯೂತವನ್ನು ಉಂಟುಮಾಡುತ್ತದೆ. ಕ್ರಮೇಣ ಅದು ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಅದರಿಂದ ಅಲ್ಝೈಮರ್, ಖಿನ್ನತೆಯಂತಹ ಮೆದುಳಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ವೇಗಸ್ ನರ ಮತ್ತು ಕರುಳು
ವೇಗಸ್ ನರವು ಮನುಷ್ಯನಿಗೆ ವಿಶ್ರಾಂತಿ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ನರದ ಹಾನಿಯಿಂದ ಆಹಾರವನ್ನು ಜೀರ್ಣಿಸುವ ಅಸಮರ್ಥತೆಗೆ ಕಾರಣವಾಗುತ್ತದೆ. ಅಂದರೆ ವೇಗಸ್ ನರವು ಕರುಳು ಮತ್ತು ಮೆದುಳಿನ ನಡುವೆ ನೇರ ಸಂಪರ್ಕವನ್ನು ರೂಪಿಸುತ್ತದೆ. ಕರುಳಿನಲ್ಲಿ ಸೋಂಕು, ಉರಿಯೂತವಿದ್ದರೆ, ಈ ವೇಗಸ್ ನರವು ಮೆದುಳಿಗೆ ಸಂಕೇತವನ್ನು ಕಳುಹಿಸುತ್ತದೆ. ಇದರಿಂದ ಮನಸ್ಥಿತಿಯಲ್ಲಿ ಬದಲಾವಣೆ, ಆತಂಕ ಹಾಗೂ ನಿದ್ರೆಯ ಸಮಸ್ಯೆಗಳು ಉಂಟಾಗಬಹುದು.
ಆರೋಗ್ಯಕರ ಕರುಳಿಗೆ ಇವುಗಳನ್ನು ತಿನ್ನಿ
ಪ್ರೋಬಯಾಟಿಕ್: ಮೊಸರು, ಮಜ್ಜಿಗೆ, ಇಡ್ಲಿ, ದೋಸಾಗಳಂತಹ ಹುದುಗಿಸಿದ ಆಹಾರಗಳಲ್ಲಿ ಪ್ರೋಬಯಾಟಿಕ್‌ಗಳು ಸಮೃದ್ಧವಾಗಿವೆ. ಅವುಗಳು ಕರುಳಿಗೆ ಅಗತ್ಯವಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡುವಲ್ಲಿ ಸಹಾಯ ಮಾಡುತ್ತವೆ.
ಫೈಬರ್ ಸಮೃದ್ಧವಾಗಿರುವ ಆಹಾರ: ಫೈಬರ್ (ನಾರಿನಾಂಶ) ಸಮೃದ್ಧವಾಗಿರುವ ಆಹಾರಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರ ಜೊತೆಗೆ ಅದರ ಕೆಲಸವನ್ನು ಸುಧಾರಿಸುತ್ತದೆ. ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳು ಫೈಬರ್‌ನಿಂದ ಸಮೃದ್ಧವಾಗಿವೆ.
ಪ್ರಿಬಯಾಟಿಕ್: ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಪ್ರಿಬಯಾಟಿಕ್‌ಗಳು ಬಹಳ ಮುಖ್ಯವಾಗಿ ಬೇಕು. ಬೆಳ್ಳುಳ್ಳಿ, ಈರುಳ್ಳಿ, ಬಾಳೆಹಣ್ಣು, ಸೇಬು, ಓಟ್ಸ್ ಮುಂತಾದವುಗಳು ಫೈಬರ್ ಭರಿತ ಪ್ರಿಬಯಾಟಿಕ್‌ಗಳಾಗಿ ಕೆಲಸ ಮಾಡುತ್ತವೆ.
ಒಮೆಗಾ 3 ಕೊಬ್ಬಿನಾಮ್ಲಗಳು: ಮೆದುಳು ಮತ್ತು ಕರುಳಿನ ಆರೋಗ್ಯ ಬಲಪಡಿಸಲು ಒಮೆಗಾ–3 ಕೊಬ್ಬಿನಾಮ್ಲಗಳು ಬಹಳ ಸಹಕಾರಿಯಾಗಿವೆ. ಅಗಸೆ ಬೀಜ, ವಾಲ್ನಟ್ಸ್, ಮೀನು ಮುಂತಾದವುಗಳಲ್ಲಿ ಒಮೆಗಾ–3 ಹೇರಳವಾಗಿದೆ.
ನೀರು: ನೀರಿನ ಕೊರತೆಯಿಂದ ಮಲಬದ್ಧತೆ ಮತ್ತು ಕರುಳಿನ ಉರಿಯೂತವುಂಟಾಗುತ್ತದೆ. ಇದು ಮೆದುಳಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ದಿನವೊಂದಕ್ಕೆ ಅಗತ್ಯವಿರುವ ನೀರನ್ನು ಕುಡಿಯಲೇಬೇಕು.
How Gut Health Can Effect Your Mental Health What Science Behind It arc Kannada Health tips



