ಗೃಹಾಲಂಕಾರಿ ವಸ್ತುಗಳು ಮನೆಯ ಅಂದದ ಜೊತೆಗೆ ಹೆಚ್ಚುತ್ತೆ ಸಮೃದ್ಧಿ


Vastu Tips Home Decor : ಮನೆಯನ್ನು ಸುಂದರವಾಗಿ ಜೋಡಿಸಿದ್ದರೆ, ಅಲ್ಲಿ ವಾಸಿಸಲು ಅಷ್ಟೇ ಸಂತೋಷ ನೀಡುತ್ತದೆ. ಆದ್ದರಿಂದ ಎಲ್ಲರೂ ಮನೆಯ ಅಲಂಕಾರಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಜೊತೆಗೆ ವಾಸ್ತು ಶಾಸ್ತ್ರ (Vastu Tips)ಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಗೃಹ ಅಲಂಕಾರದ (Home Decor Ideas) ದೃಷ್ಠಿಯಿಂದ ಖರೀದಿಸಿ ತಂದ ಕೆಲವು ವಸ್ತುಗಳು ಮನೆಗೆ ಬಂದ ಅತಿಥಿಗಳಿಗೆ ಸಂತೋಷ ನೀಡುವುದರ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡುತ್ತದೆ.

ಅಲಂಕಾರಕ್ಕಾಗಿ ಮನೆಯಲ್ಲಿ ಇಡುವ ಕೆಲವೊಂದು ವಸ್ತುಗಳು ಜೀವನದಲ್ಲಿ ಸಕರಾತ್ಮಕ ಬದಲಾವಣೆ ನೀಡುತ್ತದೆ. ಅಂದರೆ ನಾವು ಮನೆ ಅಂದವಾಗಿ ಕಾಣಿಸಬೇಕೆಂದು ಇಡುವ ವಸ್ತುಗಳು ನಮ್ಮ ಜೀವನದಲ್ಲಿ ಸಂತೋಷದ ಹೊಳೆಯನ್ನು ಹರಿಸುತ್ತವೆ.

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುತ್ತದೆ. ಹಾಗಾದರೆ ಮನೆಯಲ್ಲಿ‌ ಯಾವ ವಸ್ತುಗಳನ್ನು ಇಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ ? ಆ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ.

ಇದನ್ನೂ ಓದಿ : Vastu Homes : ಮನೆ ಹೇಗಿರಬೇಕು ? ಏನು ಹೇಳುತ್ತೆ ವಾಸ್ತುಶಾಸ್ತ್ರ

Vastu Tips Home Decor : ಲೋಹದ ಆಮೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಲೋಹದ ಆಮೆಯನ್ನು ಮನೆಯಲ್ಲಿ ಇಡುವುದು ತುಂಬಾ ಶುಭವನ್ನು ತರುತ್ತದೆ ಎನ್ನಲಾಗಿದೆ. ಇದಕ್ಕಾಗಿ ಮನೆಯಲ್ಲಿ ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆ ಈ ಮೂರು ಲೋಹಗಳಲ್ಲಿ ಯಾವುದಾದರೂ ಒಂದು ಲೋಹದ ಆಮೆಯನ್ನು ಇಟ್ಟುಕೊಳ್ಳಬಹುದು.

ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಪುರಾಣದ ಶಾಸ್ತ್ರಗಳಲ್ಲಿ ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಈ ಲೋಹದ ಆಮೆಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ನೆನಪಿಡಿ.

ಇದನ್ನೂ ಓದಿ : Vastu Tips : ಈ ಫೋಟೋಗಳನ್ನುನಿಮ್ಮ ಮನೆಯಲ್ಲಿ ಇಟ್ಟುಕೊಂಡ್ರೆ ಅಧಿಕ ಲಾಭ : ಸದಾ ಸಂತೋಷ, ಸಮೃದ್ಧಿ

Vastu Tips Home Decor : ದೇವರ ಕೋಣೆಯಲ್ಲಿ ಈ ವಸ್ತು ಇಡಿ

ಹಿಂದೂ ಧರ್ಮದಲ್ಲಿ ಶಂಖಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದು ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತು ಎಂದು ಪರಿಗಣಿಸಲಾಗಿದೆ. ಆದ್ದರಿಂದ ವಾಸ್ತು ಪ್ರಕಾರ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಶಂಖವನ್ನು ಇಡಿ.

ಇದರಿಂದ ವ್ಯಕ್ತಿಯ ವಾಸ್ತು ದೋಷಗಳು ದೂರವಾಗುತ್ತದೆ. ಹಣಕ್ಕೆ ಸಂಬಂಧಿಸಿ ಸಮಸ್ಯೆಗಳನ್ನು ದೂರಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಸುಂದರವಾದ ಶಂಖ ಖರೀದಿಸಿ.

ಅದನ್ನು ದೇವರ ಕೋಣೆಯಲ್ಲಿ ವ್ಯವಸ್ಥಿತವಾದ ಜಾಗದಲ್ಲಿ ಇಡಿ. ದೇವರ ಕೋಣೆಗೆ ಪ್ರವೇಶಿಸುತ್ತಿದ್ದಂತೆ ಅದು ಕಣ್ಣಿಗೆ ಕಾಣಿಸುವಂತಿರಲಿ.

ಲಕ್ಷ್ಮಿ ದೇವಿ ಆಶೀರ್ವಾದ ಪಡೆಯಲು ಹೀಗೆ ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಶ್ರೀಫಲವನ್ನು ಇಡಬೇಕು. ಶ್ರೀಫಲ ಎಂದರೆ ತೆಂಗಿನಕಾಯಿ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರೀಫಲ ಅಂದರೆ ತೆಂಗಿನಕಾಯಿಯಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ. ಇದರಿಂದಾಗಿ ಮನೆಯಲ್ಲಿ ಹಣದ ಕೊರತೆ ಕಾಣಿಸುವುದಿಲ್ಲ. ಅದಕ್ಕಾಗಿ ಅಂದವಾಗಿ ಅಲಂಕರಿಸಿದ ತೆಂಗಿನಕಾಯಿ ಖರೀದಿಸಿ ತನ್ನಿ.

Vastu Tips are you going to buy home decor items then you must bring these items too Kannada news arc

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories