ಸುಖ, ಸಂಪತ್ತು, ಸಮೃದ್ಧಿಗಾಗಿ ಮಹಾಲಕ್ಷ್ಮಿ ವ್ರತ: ದಿನಾಂಕ, ಸಮಯ, ವ್ರತಾಚರಣೆ ತಿಳಿಯಿರಿ

Mahalaxmi Vrat 2025 Date: ಹಿಂದೂ ಧರ್ಮದಲ್ಲಿ ವಿಶೇಷವಾಗಿ ಸಂಪತ್ತು, ಸಮೃದ್ಧಿ, ಸಂತೋಷಕ್ಕಾಗಿ ಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಇದೊಂದು ಬಹಳ ಪ್ರಮುಖ ಉಪವಾಸ ವ್ರತಾಚರಣೆಯಾಗಿದೆ.

ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಭಕ್ತರು ಉಪವಾಸವಿದ್ದು ಪೂಜೆ ಮಾಡುತ್ತಾರೆ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಅತಿ ಹೆಚ್ಚು ಆಚರಣೆಯಲ್ಲಿರುವ ಈ ವ್ರತವನ್ನು ದಕ್ಷಿಣ ಭಾರತದಲ್ಲೂ ಭಕ್ತಿಯಿಂದ ಆಚರಿಸಲಾಗುತ್ತದೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಿಂದು ಪ್ರಾರಂಭವಾಗಿ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕೊನೆಗೊಳ್ಳುತ್ತದೆ.

ಈ ವರ್ಷ ಮಹಾಲಕ್ಷ್ಮಿ ವ್ರತದ ಕೊನೆಯ ದಿನವನ್ನು ಸೆಪ್ಟೆಂಬರ್‌ 14, ಭಾನುವಾರ ಆಚರಿಸಲಾಗುತ್ತಿದೆ.

ಮಹಾಲಕ್ಷ್ಮಿ ವ್ರತದಿಂದ ಸಿಗುವ ಪ್ರಯೋಜನವೇನು? ವ್ರತಾಚರಣೆ ಹೇಗೆ ಮುಂತಾದ ವಿಷಯಗಳನ್ನು ತಿಳಿದುಕೊಳ್ಳೋಣ.

ಕೊನೆಯ ಮಹಾಲಕ್ಷ್ಮಿ ವ್ರತ ಯಾವಾಗ?

ದ್ರಿಕ್‌ ಪಂಚಾಗದ ಪ್ರಕಾರ, ಈ ವರ್ಷದ ಕೊನೆಯ ಮಹಾಲಕ್ಷ್ಮಿ ವ್ರತವನ್ನು ಸೆಪ್ಟೆಂಬರ್‌ 14, ಭಾನುವಾರದಂದು ಆಚರಿಸಲಾಗುತ್ತಿದೆ. ಇದನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ನಡೆಸಲಾಗುತ್ತದೆ.

ಸೆಪ್ಟೆಂಬರ್‌ 14 ರ ಭಾನುವಾರ ಬೆಳಿಗ್ಗೆ 5:04 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್‌ 15 ರ ಬೆಳಿಗ್ಗೆ 3: 06ಕ್ಕೆ ಮುಕ್ತಾಯವಾಗುತ್ತದೆ. ಉದಯತಿಥಿಯ ಆಧಾರದ ಮೇಲೆ ಕೊನೆಯ ಮಹಾಲಕ್ಷ್ಮಿ ವ್ರತವು ಸೆಪ್ಟೆಂಬರ್‌ 14, ಭಾನುವಾರದಂದು ಇರುತ್ತದೆ.

ಇದನ್ನೂ ಓದಿ: ವಾಸ್ತು ಸಲಹೆ: ಧನ ಪ್ರಾಪ್ತಿಗೆ ಕುಬೇರನನ್ನು ಮೆಚ್ಚಿಸುವುದು ಹೇಗೆ?

ವ್ರತಾಚರಣೆಯ ಶುಭ ಸಮಯ

ಪ್ರದೋಷ ಕಾಲ ಅಂದರೆ ಸೂರ್ಯಾಸ್ತದ ನಂತರದ ಸಮಯ ಲಕ್ಷ್ಮಿ ದೇವಿಯ ಪೂಜೆಗೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ಉಪವಾಸದ ಕೊನೆಯ ದಿನದಂದು ಸೂರ್ಯಾಸ್ತವು ಸಂಜೆ 06:27 ಕ್ಕೆ ಇರುತ್ತದೆ. ಆದ್ದರಿಂದ ವ್ರತಾಚರಣೆ ಮಾಡುವವರು ಸಂಜೆ 06:27 ರ ನಂತರ ಕೊನೆಯ ಮಹಾಲಕ್ಷ್ಮಿ ವ್ರತ ಪೂಜೆಯನ್ನು ಮಾಡಬಹುದು.

ವ್ರತಾಚರಣೆ ಹೇಗೆ?

ಮಹಾಲಕ್ಷ್ಮಿ ವ್ರತದ ದಿನದಂದು, ಲಕ್ಷ್ಮಿ ದೇವಿಯ ಮಂತ್ರಗಳನ್ನು ಜಪಿಸಬೇಕು. ಮಹಾಲಕ್ಷ್ಮಿ ವ್ರತದ ಕೊನೆಯ ದಿನದಂದು ಶ್ರೀ ಯಂತ್ರ, ಕುಬೇರ ಯಂತ್ರ ಇತ್ಯಾ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಯಂತ್ರಗಳನ್ನು ಪೂಜೆ ಮಾಡುವ ಮೂಲಕ ಪ್ರಯೋಜನಗಳನ್ನು ಪಡೆಯಬಹುದು. 15 ದಿನಗಳ ಕಾಲ ಮಹಾಲಕ್ಷ್ಮಿ ವ್ರತವನ್ನು ಆಚರಿಸಿದವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸುಲಭವಾಗಿ ಸಿಗುತ್ತದೆ.

ಇದನ್ನೂ ಓದಿ: ಪಿತೃ ಪಕ್ಷ ಯಾವಾಗ ಪ್ರಾರಂಭ: ದಿನಾಂಕ, ಪಿತೃ ತರ್ಪಣ, ಶ್ರಾದ್ಧ ನಿಯಮಗಳೇನು ?

ಮಹಾಲಕ್ಷ್ಮಿ ವ್ರತದಿಂದ ಸಿಗುವ ಪ್ರಯೋಜನಗಳು

ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ, ಐಶ್ವರ್ಯಗಳನ್ನು ದಯಾಪಾಲಿಸುವ ದೇವತೆ ಎಂದೆಲ್ಲಾ ಕರೆಯಲಾಗುತ್ತದೆ. ಅದೇ ರೀತಿ ಮಹಾಲಕ್ಷ್ಮಿ ವ್ರತಾಚರಣೆಯಿಂದ ಮನೆಯಲ್ಲಿ ಸುಖ, ಸಮೃದ್ಧಿ, ಸಂಪತ್ತು ದೊರಕುತ್ತದೆ. ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

(When is Mahalaxmi Vrat 2025 Date shubh muhoortha and significance)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories