ಮತ್ತೆ ಮೈದಾನಕ್ಕೆ ಇಳಿಯುತ್ತಾರೆ ರಿಕಿ ಪಾಂಟಿಂಗ್, ಶೇನ್ ವಾರ್ನ್, ಕ್ಲಾರ್ಕ್!

ಸಿಡ್ನಿ: ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿನ ಸಂತ್ರಸ್ತರ ನೆರವಿಗೆ ಮುಂದಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಟಗಾರರು ಚಾರಿಟಿ ಪಂದ್ಯವೊಂದರಲ್ಲಿ ಆಡುವ ಮೂಲಕ ಪರಿಹಾರ ನಿಧಿಗೆ ಹಣ ಸಂಗ್ರಹಿಸಲಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಮತ್ತು ಶೇನ್‌ ವಾರ್ನ್‌ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಈ ಚಾರಿಟಿ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಭಾನುವಾರ ಘೋಷಿಸಲಾಗಿದೆ. 

‘ಬುಷ್‌ಫೈರ್‌ ಕ್ರಿಕೆಟ್‌ ಬ್ಯಾಷ್‌’ ಎಂದು ಹೆಸರಿಡಲಾಗಿರುವ ಚಾರಿಟಿ ಪಂದ್ಯದಲ್ಲಿ ಪಾಂಟಿಂಗ್‌ ಮತ್ತು ವಾರ್ನ್‌ ಹೊರತಾಗಿ ಮಾಜಿ ವಿಕೆಟ್‌ಕೀಪರ್‌ ಆ್ಯಡಂ ಗಿಲ್‌ ಕ್ರಿಸ್ಟ್‌, ವೇಗಿ ಬ್ರೆಟ್‌ ಲೀ, ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್ ಮತ್ತು ಆಸ್ಟ್ರೇಲಿಯಾ ತಂಡದ ಹಾಲಿ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories

Leave a Reply

Your email address will not be published. Required fields are marked *