ಹಾಕಿ ಪಂದ್ಯಾವಳಿಯಲ್ಲಿ ಪಾಕ್ ಆಟಗಾರರೊಂದಿಗೆ ಹೈ-ಫೈವ್ ವಿನಿಮಯ ಮಾಡಿಕೊಂಡ ಭಾರತೀಯ ಆಟಗಾರರು
Hockey tournament: 2025ರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನ ಕ್ರಿಕೇಟಿಗರು ಹ್ಯಾಂಡ್ಶೇಕ್ ಮಾಡಿಕೊಳ್ಳದ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಈ ವಿವಾದದ ಬೆನ್ನಲ್ಲೇ ಇದೀಗ ಸುಲ್ತಾನ್ ಆಫ್ ಜೋಹರ್ ಕಪ್ನಲ್ಲಿ ಭಾರತೀಯ ಹಾಕಿ ಆಟಗಾರರು ಪಾಕಿಸ್ತಾನದ ಆಟಗಾರರೊಂದಿಗೆ ಹೈ ಫೈವ್ ವಿನಿಮಯ ಮಾಡಿದ್ದು ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಮಲೇಷ್ಯಾದ ತಮನ್ ದಯಾ ಹಾಕಿ ಕ್ರೀಡಾಂಗಣದಲ್ಲಿ ನಡೆದ ಸುಲ್ತಾನ್ ಆಫ್ ಜೊಹೋರ್ ಕಪ್ನ 9ನೇ ಪಂದ್ಯಾವಳಿಯಲ್ಲಿ ಭಾರತ ಹಾಗೂ ಪಾಕ್ ತಂಡಗಳು ಮುಖಾಮುಖಿಯಾಗಿವೆ. ಗ್ರೇಟ್ ಬ್ರಿಟನ್ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿ ಭಾರತ ತಂಡವು ಈ ಪಂದ್ಯಕ್ಕೆ ಪ್ರವೇಶ ಪಡೆದಿತ್ತು. ಪಾಕಿಸ್ತಾನ ತಂಡವು ಮಲೇಷ್ಯಾ ವಿರುದ್ಧ ಗೆಲುವು ಸಾಧಿಸಿದ್ದರೆ ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿತ್ತು.
Also Read: ವಿಶ್ವ ಜಂಪ್-ರೋಪ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದಾಖಲೆ ಮುರಿದ ಚೀನಾದ ವ್ಯಕ್ತಿ !
ಈ ಪಂದ್ಯಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ಆಟಗಾರರು ಪರಸ್ಪರ ಹೈ-ಫೈವ್ ವಿನಿಮಯ ಮಾಡಿಕೊಂಡರು. ಪಂದ್ಯ 3-3 ಸಮಬಲದಲ್ಲಿ ಕೊನೆಗೊಂಡ ನಂತರವೂ ಆಟಗಾರರು ಪರಸ್ಪರ ಶುಭಾಶಯ ಕೋರಿದರು.
ಏಷ್ಯಾ ಕಪ್ ಕ್ರಿಕೇಟ್ ಪಂದ್ಯಾವಳಿಯ ಸಂದರ್ಭದಲ್ಲಿ ಎರಡೂ ತಂಡಗಳ ಕ್ರಿಕೇಟಿಗರು ಪರಸ್ಪರ ಕೈ ಕುಲುಕದೇ ಕ್ರೀಡಾಂಗಣದಲ್ಲಿ ದ್ವೇಷ ಹೊರಹಾಕಿದ್ದರು. ಇದಕ್ಕೆ ಅನೇಕರು ಬೆಂಬಲ ಸೂಚಿಸಿದ್ದರೆ ಇನ್ನೂ ಕೆಲವರು ಇದು ನಿಜವಾದ ಕ್ರೀಡಾ ಮನೋಭಾವನೆ ಅಲ್ಲ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದರು.
ಏಷ್ಯಾಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಪರಸ್ಪರ ಮೂರು ಬಾರಿ ಮುಖಾಮುಖಿಯಾಗಿದ್ದವು. ಮೂರೂ ಪಂದ್ಯಾವಳಿಗಳಲ್ಲಿ , ಪಂದ್ಯದ ಆರಂಭ ಅಥವಾ ಅಂತ್ಯದ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವೆ ಯಾವುದೇ ರೀತಿಯ ಹಸ್ತಲಾಘವ ಇರಲಿಲ್ಲ. ಪಾಕಿಸ್ತಾನದ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದ ಟೀಂ ಇಂಡಿಯಾ ಏಷ್ಯಾ ಕಪ್ ಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿತ್ತು.
ಉಭಯ ದೇಶಗಳ ಆಟಗಾರರ ನಡುವೆ ನಡೆದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಸಾಕಷ್ಟು ವಿವಾದಾತ್ಮಕ ಘಟನೆಗಳು ಜರುಗಿದ್ದವು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೋಹ್ಸಿನ್ ನಖ್ವಿ ಕೈಯಿಂದ ಏಷ್ಯಾ ಕಪ್ ಟ್ರೋಫಿ ಸ್ವೀಕರಿಸಲೂ ಸಹ ಟೀಂ ಇಂಡಿಯಾ ಆಟಗಾರರು ಒಪ್ಪಿರಲಿಲ್ಲ. ಟ್ರೋಫಿಯನ್ನು ಸ್ವೀಕರಿಸದೆಯೇ ಟೀಂ ಇಂಡಿಯಾ ಆಟಗಾರರು ಏಷ್ಯಾ ಕಪ್ ಪಂದ್ಯಾವಳಿ ಗೆಲುವನ್ನು ಸಂಭ್ರಮಿಸಿದ್ದರು.
Also Read: Hulk Hogan : ವಿಶ್ವ ಕುಸ್ತಿ ದಂತಕಥೆ ಹಲ್ಕ್ ಹೋಗನ್ ನಿಧನ
ಸುಲ್ತಾನ್ ಆಫ್ ಜೊಹೋರ್ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 3-3 ಅಂತರದಲ್ಲಿ ಡ್ರಾನಲ್ಲಿ ಪಂದ್ಯವನ್ನು ಅಂತ್ಯಗೊಳಿಸಿವೆ. ಈ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧದ ಮೊದಲನೇ ಗೆಲುವನ್ನು ಸಂಭ್ರಮಿಸಲು ಕಾಯುತ್ತಿದ್ದ ಪಾಕಿಸ್ತಾನಕ್ಕೆ 43ನೇ ನಿಮಿಷದವರೆಗೂ 2-0 ಮುನ್ನಡೆಯನ್ನು ಕಾಯ್ದುಕೊಳ್ಳುವ ಮೂಲಕ ಗೆಲುವಿನ ದಡ ತಲುಪುವುದರಲ್ಲಿತ್ತು.
ಆದ ಮುಂದಿನ 12 ನಿಮಿಷಗಳಲ್ಲಿ ಭಾರತ ಮೂರು ಗೋಲುಗಳನ್ನು ಗಳಿಸುವ ಮೂಲಕ ಅದ್ಭುತ ಪುನರಾಗಮನ ಮಾಡಿತು. ನಂತರ ಪಂದ್ಯವನ್ನು ಮುನ್ನಡೆಸಿತು, ನಂತರ ಸುಫಿಯಾನ್ ಖಾನ್ 55 ನೇ ನಿಮಿಷದಲ್ಲಿ ಪಾಕಿಸ್ತಾನ ತಂಡಕ್ಕೆ ಅಗತ್ಯವಾದ ಸಮಬಲದ ಗೋಲು ಗಳಿಸಿ ಡ್ರಾನಲ್ಲಿ ಪಂದ್ಯ ಅಂತ್ಯಗೊಳಿಸಿದರು.



