ಆಂಗ್ಲರ ವಿರುದ್ದ ಶತಕ ಸಿಡಿಸಿದ ಕೆಎಲ್‌ ರಾಹುಲ್‌ : ಹೊಸ ದಾಖಲೆ ಬರೆದ ಕನ್ನಡಿಗ

IND vs ENG 3rd test : ಭಾರತ ( Indian Cricket team) ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ (KL Rahul ) ಶತಕ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್‌ ನೆಲದಲ್ಲಿ ಆರಂಭಿಕ ಆಟಗಾರನಾಗಿ ಅತೀ ಹೆಚ್ಚು ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಕೆಎಲ್‌ ರಾಹುಲ್ ಅವರು ಇಂಗ್ಲೆಂಡ್‌ನಲ್ಲಿ 4 ಟೆಸ್ಟ್‌ ಶತಕ ಸಿಡಿಸಿದ್ದಾರೆ. ಈ ಹಿಂದೆ 2018ರಲ್ಲಿ ಓವಲ್‌ನಲ್ಲಿ 149, 2021ರಲ್ಲಿ ಲಾರ್ಡ್ಸ್‌ನಲ್ಲಿ 212 ಹಾಗೂ ಈ ಬಾರಿ 2025ರಲ್ಲಿ ಸರಣಿಯಲ್ಲಿ 2 ಶತಕ ಬಾರಿಸಿದ್ದಾರೆ.

ಈ ಮೂಲಕ ಕೆಎಲ್‌ ರಾಹುಲ್‌ ಇಂಗ್ಲೆಂಡ್‌ ನೆಲದಲ್ಲಿ 4 ಶತಕ ಬಾರಿಸುವ ಮೂಲಕ, ಅತೀ ಹೆಚ್ಚು ಶತಕ ಬಾರಿಸಿದ ಏಷ್ಯಾದ ಏಕೈಕ ಆರಂಭಿಕ ಆಟಗಾರ ಎನಿಸಿದ್ದಾರೆ.

ಈ ಹಿಂದೆ ಸುನೀಲ್ ಗವಾಸ್ಕರ್, ವಿಜಯ್ ಮರ್ಚೆಂಟ್, ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ಅವರು ಈ ದಾಖಲೆಯನ್ನು ಮಾಡಿದ್ದರು. ಆದರೆ ಇದೀಗ ರಾಹುಲ್‌ ದಿಗ್ಗಜರ ದಾಖಲೆಯನ್ನೇ ಅಳಿಸಿ ಹಾಕಿದ್ದಾರೆ.

Also Read : ಭಾರತದ ಬೆಂಕಿ ಬೌಲರ್‌..! ಯಾರು ಈ ಆಕಾಶ್‌ ದೀಪ್‌

KL Rahul : ವಿದೇಶಿ ನೆಲದಲ್ಲಿ ಕನ್ನಡಿಗ ರಾಹುಲ್‌ ಸಾಧನೆ

ಕೆಎಲ್ ರಾಹುಲ್ ಒಟ್ಟು ಟೆಸ್ಟ್ ಶತಕಗಳು: 9

ವಿದೇಶಿ ನೆಲದಲ್ಲಿ ಗಳಿಸಿದ ಟೆಸ್ಟ್ ಶತಕಗಳು:

ಕೆಎಲ್ ರಾಹುಲ್ ತಮ್ಮ 9 ಟೆಸ್ಟ್ ಶತಕಗಳಲ್ಲಿ 8 ಶತಕಗಳನ್ನು ವಿದೇಶಿ ನೆಲದಲ್ಲೇ ಗಳಿಸಿದ್ದಾರೆ.

ಕೆಎಲ್ ರಾಹುಲ್ ಶತಕಗಳ ವಿವರ:

  • ಆಸ್ಟ್ರೇಲಿಯಾ: 1 (ಸಿಡ್ನಿ)
  • ಶ್ರೀಲಂಕಾ: 1 (ಕೊಲಂಬೊ)
  • ವೆಸ್ಟ್ ಇಂಡೀಸ್: 1 (ಕಿಂಗ್ಸ್‌ಟನ್)
  • ಇಂಗ್ಲೆಂಡ್: 3 (ಓವಲ್, ಲಾರ್ಡ್ಸ್, ಲೀಡ್ಸ್) –

ಇಂಗ್ಲೆಂಡ್‌ ನೆಲದಲ್ಲಿ 4 ಶತಕ ಸಿಡಿಸಿದ್ದಾರೆ.

ದಕ್ಷಿಣ ಆಫ್ರಿಕಾ: 2 (ಸೆಂಚುರಿಯನ್) – ಸೆಂಚುರಿಯನ್‌ನಲ್ಲಿ 2 ಶತಕಗಳನ್ನು ಗಳಿಸಿದ ಏಕೈಕ ವಿದೇಶಿ ಆಟಗಾರ ಎಂಬ ದಾಖಲೆಯನ್ನೂ ಹೊಂದಿದ್ದಾರೆ.

ತವರಿನಲ್ಲಿ ಒಟ್ಟು ಏಕೈಕ ಟೆಸ್ಟ್‌ ಶತಕ ಬಾರಿಸಿದ್ದಾರೆ. ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ದಾಖಲಾಗಿದೆ (199 ರನ್).

ಕೆಎಲ್ ರಾಹುಲ್ SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಆರಂಭಿಕ ಆಟಗಾರನಾಗಿ 5 ಶತಕಗಳನ್ನು ಬಾರಿಸಿದ್ದಾರೆ. ಈ ವಿಷಯದಲ್ಲಿ ಅವರು ಸುನಿಲ್ ಗವಾಸ್ಕರ್ (8 ಶತಕಗಳು) ನಂತರ ಎರಡನೇ ಸ್ಥಾನದಲ್ಲಿದ್ದಾರೆ.

Also Read : ಶುಭಮನ್‌ ಗಿಲ್‌ ಸತತ ಶತಕ : ಸುನಿಲ್‌ ಗವಾಸ್ಕರ್‌ ದಾಖಲೆ ಉಡೀಸ್‌

KL Rahul : ವಿದೇಶದಲ್ಲಿ ಅತೀ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಭಾರತೀಯ ಆಟಗಾರರು

ಸಚಿನ್ ತೆಂಡೂಲ್ಕರ್: (29 ಶತಕಗಳು)

‘ಕ್ರಿಕೆಟ್ ದೇವರು’ ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ 29 ವಿದೇಶಿ ಶತಕಗಳು ಅವರ ಅಸಾಧಾರಣ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

ರಾಹುಲ್ ದ್ರಾವಿಡ್: (21 ಶತಕಗಳು)

‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್, ತಮ್ಮ ಸ್ಥಿರವಾದ ಮತ್ತು ತಾಳ್ಮೆಯ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಬೌಲರ್‌ಗಳನ್ನು ದಣಿಸುವ ಅವರ ಸಾಮರ್ಥ್ಯ ಅನನ್ಯ. ಅವರು 21 ಶತಕಗಳನ್ನು ವಿದೇಶದಲ್ಲಿ ಗಳಿಸಿದ್ದಾರೆ.

ಸುನಿಲ್ ಗವಾಸ್ಕರ್: (18 ಶತಕಗಳು)

ಭಾರತದ ಆರಂಭಿಕ ಆಟಗಾರರಲ್ಲಿ ಅಗ್ರಗಣ್ಯರಾದ ಸುನಿಲ್ ಗವಾಸ್ಕರ್, 70 ಮತ್ತು 80 ರ ದಶಕದಲ್ಲಿ ವಿಶ್ವದ ಅತ್ಯಂತ ಅಪಾಯಕಾರಿ ಬೌಲಿಂಗ್ ದಾಳಿಗಳನ್ನು ಎದುರಿಸಿ 18 ವಿದೇಶಿ ಶತಕಗಳನ್ನು ಗಳಿಸಿದ್ದಾರೆ.

ವಿರಾಟ್ ಕೊಹ್ಲಿ: (14 ಶತಕಗಳು)

ಆಧುನಿಕ ಕ್ರಿಕೆಟ್‌ನ ರನ್‌ಮಷಿನ್ ಎಂದೇ ಹೆಸರಾಗಿರುವ ವಿರಾಟ್ ಕೊಹ್ಲಿ, ತಮ್ಮ ಆಕ್ರಮಣಕಾರಿ ಮತ್ತು ಸ್ಥಿರ ಬ್ಯಾಟಿಂಗ್‌ನಿಂದ ವಿದೇಶಿ ನೆಲದಲ್ಲಿ 14 ಶತಕಗಳನ್ನು ಬಾರಿಸಿದ್ದಾರೆ.

ಸೌರವ್ ಗಂಗೂಲಿ: (8 ಶತಕಗಳು)

ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ವಿದೇಶದಲ್ಲಿ 8 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ.

KL Rahul hits century against England Kannadigas set new record IND vs ENG 3rd test in Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories